ಸುಲ್ಕೇರಿ: ಸುಲ್ಕೇರಿ ಲಯನ್ಸ್ ಕ್ಲಬ್‌ನ 2023-24 ನೇ ಸಾಲಿನ ಅಧ್ಯಕ್ಷ ರವಿಶೆಟ್ಟಿ ಮತ್ತು ತಂಡದವರ ಪದಗ್ರಹಣ ಸಮಾರಂಭ ಹಾಗೂ ಸೇವಾ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ ಜು.10 ರಂದು ದಸರ ಕಾಂಪ್ಲೆಕ್ಸ್ ಜಂತಿಗೋಳಿಯಲ್ಲಿ ನಡೆಯಿತು.
ಲಯನ್ಸ್ ದ್ವಿತೀಯ ರಾಜ್ಯಪಾಲರಾದ ಅರವಿಂದ್ ಶೆಣೈ ಕುಡ್ಪಿರವರು ರವಿ ಶೆಟ್ಟಿ ಮತ್ತು ತಂಡದವರಿಗೆ ಪದಗ್ರಹಣ ನೆರವೇರಿಸಿ ಪದಾಧಿಕಾರಿಗಳಿಗೆ ತಮ್ಮ ತಮ್ಮ ಜವಾಬ್ದಾರಿಯನ್ನು ತಿಳಿಸಿದರು. ನಿಕಟಪೂರ್ವಧ್ಯಕ್ಷ ಸುಂದರ ಶೆಟ್ಟಿ ತನ್ನ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಹೊಸ ತಂಡಕ್ಕೆ ಶುಭಹಾರೈಸಿದರು. 4 ಮಂದಿ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ವೇದಿಕೆಯಲ್ಲಿ ಸಂಪುಟ ಕಾರ್ಯದರ್ಶಿ ಓಸ್‌ವಾಲ್ಟ್, ಕೋಶಾಧಿಕಾರಿ ಸುಧಾಕರ್ ಶೆಟ್ಟಿ, ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೊ ಪ್ರಾಂತ್ಯ 12 ವಲಯ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್, ವಲಯ 2 ರ ಅಧ್ಯಕ್ಷ ಎಂ. ಕೆ ದಿನೇಶ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ, ಮೂಡಬಿದ್ರೆ ಕ್ಲಬ್ ಅಧ್ಯಕ್ಷ ಜೋಸ್ತಿ ಮನೇಜಸ್, ಮುಚ್ಚೂರು ನೀರುಬೆ ಅಧ್ಯಕ್ಷ ರೋಶನ್ ಡಿಸೋಜ, ಅಲಂಗಾರ್ ಅಧ್ಯಕ್ಷ ಲಾಯ್ಟ ರೇಗೋ, ಗುರುಪುರ ಕೈಕಂಬ ಅಧ್ಯಕ್ಷ ಸುನೀಲ್ ಡಿಸೋಜ, ಬಪ್ಪನಾಡು ಇನ್ಸ್‌ಪ್ಯಾರ್ ಅಧ್ಯಕ್ಷ ಎನ್. ಸುಧೀರ್ ಬಾಳಿಗ, ನಿಕಟಪೂರ್ವ ಕೋಶಾಧಿಕಾರಿ ಸುಧೀರ್, ನಿಯೋಜಿತ ಕೋಶಾಧಿಕಾರಿ ಹರೀಶ್ ಪೂಜಾರಿ ಉಪಸ್ಥಿತರಿದ್ದರು.
ಸೇವಾ ಚಟುವಟಿಕೆ:
1.ವೈದ್ಯಕೀಯ ಚಿಕಿತ್ಸೆಗೆ ಇಬ್ಬರಿಗೆ ತಲಾ 2500 ರಂತೆ ಸಹಾಯಧನ
2.ಬಡ ಶಾಲಾ ವಿದ್ಯಾರ್ಥಿಗಳಿಗೆ ರೂ.6000 ಸಹಾಯಧನ ನೀಡಲಾಯಿತು.
ಸನ್ಮಾನ: ನೂತನವಾಗಿ ಆಯ್ಕೆಯಾದ ದ್ವಿತೀಯ ರಾಜ್ಯಪಾಲರಾದ ಅರವಿಂದ ಶೆಣೈ, ಸ್ಥಾಪಕಧ್ಯಕ್ಷ ಸುಂದರ ಶೆಟ್ಟಿ, ಮಾಜಿ ಪ್ರಾಂತ್ಯ ಅಧ್ಯಕ್ಷರಾದ ವಸಂತ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು.
ಕ್ಲಬ್‌ಗೆ ಸಹಕಾರ ನೀಡಿದ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರುಗಳಾದ ಪ್ರಕಾಶ್ ಶೆಟ್ಟಿ, ರಾಜು ಶೆಟ್ಟಿ, ನಿತ್ಯಾನಂದ, ಜಗದೀಶ್ ಹೆಗ್ಡೆ, ಇವರನ್ನು ಗೌರವಿಸಲಾಯಿತು.
ವಿಶ್ವನಾಥ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಸುರೇಶ್ ಧನ್ಯವಾದವಿತ್ತರು.