25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ ವಲಯ ಅರಣ್ಯದಲ್ಲಿ ಹಣ್ಣು ಹಂಪಲುಗಳ ಗಿಡ ನಾಟಿ ಕಾರ್ಯಕ್ರಮ

ಗುರುವಾಯನಕೆರೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಳದಂಗಡಿ ವಲಯ ಅರಣ್ಯದಲ್ಲಿ ಹಣ್ಣು ಹಂಪಲುಗಳ ಗಿಡ ನಾಟಿ ಕಾರ್ಯಕ್ರಮವು ಜು.14 ರಂದು ನಡೆಯಿತು.
ಸುಲ್ಕೇರಿಮೊಗ್ರು ಗ್ರಾಮದ ನೇಲ್ಯಲ್ಕೆ ಅರಣ್ಯ ಪ್ರದೇಶದಲ್ಲಿ ಎಸ್ ಕೆ ಡಿ ಆರ್ ಡಿ ಪಿ ಅಳದಂಗಡಿ ವಲಯ ಸುಲ್ಕೇರಿಮೊಗ್ರು ಗ್ರಾಮದ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ವಿಪತ್ತು ನಿರ್ವಹಣಾ ಸ್ವಯಂಸೇವಕರು ಜಂಟಿಯಾಗಿ ಹಣ್ಣು ಹಂಪಲುಗಳ ಗಿಡಗಳನ್ನು ನಾಟಿ ಮಾಡಿದರು.
ಹಲಸು, ಹೆಬ್ಬಲಸು, ಮಾವು, ನೆಲ್ಲಿ, ಪುನರ್ಪುಳಿ, ರೆಂಜೆ, ಅತ್ತಿ, ಹುಣಸೆ, ನೇರಳೆ ಮುಂತಾದ ಹಲವು ಜಾತಿಯ ಗಿಡಗಳ ನಾಟಿ ಮಾಡಲಾಯಿತು.


ಅಳದಂಗಡಿ ವಲಯ ಉಪ ಅರಣ್ಯಾಧಿಕಾರಿ ಸುರೇಶ್ ಗೌಡರವರು ಸ್ಥಳಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದರು. ಗಿಡ ನೆಡುವಲ್ಲಿ ಅರಣ್ಯದ ಸಹಾಯಕ ಸಿಬ್ಬಂದಿ ಸಹಕರಿಸಿದರು.
ವಲಯ ಮೇಲ್ವಿಚಾರಕಿ ಶ್ರೀಮತಿ ಸುಮಂಗಲ, ಸ್ಥಳೀಯ ಸೇವಾ ಪ್ರತಿನಿಧಿ ಕುಮಾರಿ ಸುಲೋಚನಾ, ಒಕ್ಕೂಟ ಪದಾಧಿಕಾರಿಗಳು ಹಾಗೂ ಸಂಯೋಜಕರಾದ ಶ್ರೀಮತಿ ಹರಿಣಾಕ್ಷಿ, ಘಟಕ ಪ್ರತಿನಿಧಿ ಶ್ರೀಮತಿ ಶಕುಂತಲಾ, ಸಂಯೋಜಕ ಶ್ರೀಕಾಂತ್, ಸ್ವಯಂಸೇವಕರಾದ ಶ್ರೀ ನಾರಾಯಣ ಸಾಲಿಯಾನ್, ಪ್ರಕಾಶ್ ಕೊಲ್ಲಂಗೆ, ರವಿ ಪೂಜಾರಿ, ರವಿಚಂದ್ರ, ಸ್ವಯಂ ಸೇವಕಿಯರಾದ ಆಶಾ, ರೂಪಶ್ರೀ, ನಳಿನಿ, ಹೇಮಾವತಿ, ಸರಸ್ವತಿ, ಅಮಿತಾ, ಸುಜಾತ, ಹರ್ಷಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.
500 ಗಿಡಗಳನ್ನು ನಾಟಿ ಮಾಡಿದರು.

Related posts

ಪ್ರಿಕೆಜಿ ವಿದ್ಯಾರ್ಥಿ ಸಮಕ್ಷ್ ನ ಹುಟ್ಟು ಹಬ್ಬದ ಆಚರಣೆಯ ಪ್ರಯುಕ್ತ ಕುಂಭಶ್ರೀ ಆಂ.ಮಾ. ಶಾಲಾ ಕಾಲೇಜಿಗೆ ಗಡಿಯಾರ ಕೊಡುಗೆ

Suddi Udaya

ಪಟ್ರಮೆ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿ

Suddi Udaya

ಗುರುವಾಯನಕೆರೆ: ಜನ ಮಂಗಲ ಕಾರ್ಯಕ್ರಮದಡಿ ಯು ಶೇಪ್ ವಾಕರ್ ವಿತರಣೆ

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಹೆತ್ತವರ ಸಭೆ

Suddi Udaya

ಪುಂಜಾಲಕಟ್ಟೆ ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Suddi Udaya

ಉಜಿರೆಯಲ್ಲಿ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಭೆ : ಕೆ.ಪಿ.ಸಿ.ಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್‌ ಭಾಗಿ

Suddi Udaya
error: Content is protected !!