24 C
ಪುತ್ತೂರು, ಬೆಳ್ತಂಗಡಿ
April 3, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿನಿಧನ

ವೇಣೂರು: ಕೋಮ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಶಿಲ್ಪ ಸಾವು: ಮನೆಯವರ ಪ್ರತಿಭಟನೆ

ವೇಣೂರು: ಹೆರಿಗೆ ನಂತರ ಕೋಮ ಸ್ಥಿತಿಗೆ ತಲುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಣೂರು ನಿವಾಸಿ ಶಿಲ್ಪ ಆಸ್ಪತ್ರೆಯಲ್ಲಿ ಮೃತಪಟ್ಟ ಹಾಗೂ ಶಿಲ್ಪರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತರ ಮನೆಯವರು ಆಸ್ಪತ್ರೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಜು.25 ರಂದು ನಡೆಯಿತು.

ಬೆಳ್ತಂಗಡಿಯ ವೇಣೂರು ನಿವಾಸಿ ಪ್ರದೀಪ್ ಅವರ ಪತ್ನಿ ಶಿಲ್ಪಾ ಮೃತ ದುರ್ದೈವಿ. ಎರಡನೇ ಡೆಲಿವರಿ ಇದಾಗಿದ್ದು, ಆಪರೇಷನ್ ಮೂಲಕ ಮಗುವನ್ನು ಹೊರ ತೆಗೆಯಲಾಗಿದ್ದು ,ಮಗು ಸುರಕ್ಷಿತವಾಗಿದೆ. ಆದರೆ ಹೆರಿಗೆ ಬಳಿಕ ತಾಯಿ ಒಂದು ತಿಂಗಳು ಕೋಮಾದಲ್ಲಿದ್ದು, ಸೋಮವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ವಿವರ: ಗಭಿ೯ಣಿಯಾಗಿದ್ದ ಶಿಲ್ಪಾ ಅವರು ಮನೆಯವರ ಜೊತೆಗೆ ತಿಂಗಳ ಹಿಂದೆ ಟೆಸ್ಟಿಗೆಂದು ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ವೈಧ್ಯರ ಸೂಚನೆಯಂತೆ ಅಡ್ಮಿಟ್ ಆಗಿದ್ದು, ಆಪರೇಷನ್ ಮಾಡಿ, ಮಗುವನ್ನು ಹೊರ ತೆಗೆಯಲಾಯಿತು. ಆದರೆ ಶಿಲ್ಪಾ ಅವರಿಗೆ ರಕ್ತಸ್ರಾವ ಹೆಚ್ಚಾಗ, ಗರ್ಭಕೋಶದಲ್ಲಿ ತೊಂದರೆ ಇದೆಯೆಂದು ಗರ್ಭಕೋಶವನ್ನು ತೆಗೆಯಲಾಯಿತ್ತೇನ್ನಲಾಗುತ್ತಿದೆ. ಅಷ್ಟರಲ್ಲಿ ಶಿಲ್ಪಾ ಅವರು ಕೋಮ ಸ್ಥಿತಿಗೆ ತಲುಪಿದ್ದರು.

ಸುಮಾರು 1 ತಿಂಗಳು ಕೋಮಾದಲ್ಲಿದ್ದ ಶಿಲ್ಪಾ ಅವರು ಜು.24 ರಂದು ಮೃತಪಟ್ಟಿದ್ದಾರೆ. ಶಿಲ್ಪರ ಈ ಸ್ಥಿತಿಗೆ
ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಮೃತರ ಮನೆಯವರು, ವಿಶ್ವಕರ್ಮ ಸಮಾಜದವರು ಹಾಗೂ ಸಂಘಟನೆ ಪ್ರಮುಖರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು. ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕರು ಬಲಿಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು

Related posts

ಕನ್ಯಾಡಿ ಸರ್ಕಾರಿ ಶಾಲೆಗೆ ರೂ. 1.65 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ

Suddi Udaya

ಕಾಮಿಡಿ ಕಿಲಾಡಿ ಖ್ಯಾತೀಯ ವೇಣೂರು ಅನೀಶ್ ಅಮೀನ್‌ಗೆ ಕುಡುಪುವಿನಲ್ಲಿ ಸನ್ಮಾನ

Suddi Udaya

ಬೆಳ್ತಂಗಡಿ: ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರುಗಳ ಆಯ್ಕೆ

Suddi Udaya

ನಾ’ವುಜಿರೆ ನಿಧನಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಗುರುವಾಯನಕೆರೆ ಶಕ್ತಿನಗರ ಜಂಕ್ಷನ್ ನಲ್ಲಿ ಸ್ಕೂಟರ್ ಗೆ ಲಾರಿ ಡಿಕ್ಕಿ : ಓರ್ವ ಮೃತ್ಯು,

Suddi Udaya

ಎಕ್ಸೆಲ್ ಕಾಲೇಜಿನಿಂದ ಗುರುವಾಯನಕೆರೆ ಶಾಲೆಗೆ ಪೀಠೋಪಕರಣಗಳ ಹಸ್ತಾಂತರ, ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಶಾಲೆಯ ವತಿಯಿಂದ ಸನ್ಮಾನ

Suddi Udaya
error: Content is protected !!