ಉಜಿರೆ: ಉಜಿರೆ ಹಳೇಪೇಟೆ (ಯು.ಹೆಚ್.) ರಿಕ್ಷಾ ಚಾಲಕ ಮಾಲಕರ ಸಂಘದ ಮಹಾಸಭೆಯು. ಜು.26 ರಂದು ಉಜಿರೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸೂರಪ್ಪ ಗಾಂಧಿನಗರ, ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಉಮೇಶ್ ಅತ್ತಾಜೆ, ಉಪಾಧ್ಯಕ್ಷರಾಗಿ ರಫೀಕ್ ಪಾಲ, ಕಾರ್ಯದರ್ಶಿಯಾಗಿ ಗುರುನಂದ, ಜೊತೆ ಕಾರ್ಯದರ್ಶಿಯಾಗಿ ಸುಧಾಕರ್, ಕೋಶಾಧಿಕಾರಿ ಹಂಝ ಎಂ.ಹೆಚ್., ಇವರನ್ನೊಳಗೊಂಡಂತೆ ಒಟ್ಟು 36 ಸದಸ್ಯರ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾದ ಉಮೇಶ್ ಅತ್ತಾಜೆ ಮಾತನಾಡಿ ಚಾಲಕರು ಕಾನೂನಿಗೆ ತಲೆಬಾಗಿ ಚಾಲನಾ ಪರವಾನಿಗೆ ಹಾಗೂ ಇತರ ಎಲ್ಲಾ ದಾಖಲೆಗಳು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಕೋಶಾಧಿಕಾರಿ ಹಂಝ ಎಂ.ಹೆಚ್. ಮಾತನಾಡಿ ರಸ್ತೆಗಳ ಕಾಮಗಾರಿ ನಡೆಯುತ್ತಿರುವುದರಿಂದ ರಿಕ್ಷಾ ಪಾರ್ಕಿಂಗ್‌ಗೆ ಸಮಸ್ಯೆಯಾಗುತ್ತಿದೆ. ಮುಂದೆ ಸರಕಾರವು ಉಜಿರೆಯಲ್ಲಿ ಒಂದು ಉತ್ತಮವಾದ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕಾಗಿ ಮನವಿ ಮಾಡಿದರು.
ಸಭೆಯಲ್ಲಿ ಬಿ.ಎಂ.ಎಸ್. ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷರಾದ ರಮೇಶ್ ಬೊಳ್ಳಿ ಉಪಸ್ಥಿತರಿದ್ದರು.