September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜಿನಲ್ಲಿ ಹಸಿರು ಹೊನ್ನು ಕಾರ್ಯಕ್ರಮ

ಉಜಿರೆ : ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜಿನ ರೋವರ್ಸ್‌ ಮತ್ತು ರೇಂಜರ್ಸ್ ದಳದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಹಸಿರು ಹೊನ್ನು ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ಆವರಣದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾಲೇಜಿನ ಎಲ್ಲಾ ಸಿಬ್ಬಂದಿಗಳಿಗೆ ಬಟ್ಟೆ ಕೈ ಚೀಲವನ್ನು ನೀಡಿ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ಬೀರುವ ಅನಾನುಕೂಲ ಪರಿಣಾಮಗಳ ಬಗ್ಗೆ ವಿವರಿಸಿ ಬಟ್ಟೆಯ ಚೀಲಗಳನ್ನೇ ಉಪಯೋಗಿಸಿ ಕಾಲೇಜು ಪರಿಸರ ಸ್ನೇಹಿ ಕ್ಯಾಂಪಾಸ್‌ ಆಗಿ ಬದಲಾಗುವಂತೆ ಮನವಿ ಮಾಡಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್‌ ಕುಮಾರ್‌ ಬಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪರಿಸರ ಉಳಿಸುವ ನಿಟ್ಟಿನಲ್ಲಿ ರೋವರ್ಸ್‌ ಮತ್ತು ರೇಂಜರ್ಸ್ ದಳದ ಈ ಪ್ರಯತ್ನ ಶ್ಲಾಘನೀಯ ಹಾಗೂ ಅನುಸರಣೀಯ, ವಿದ್ಯಾರ್ಥಿಗಳೆಲ್ಲರೂ ಯಾವತ್ತೂ ಹೀಗೆಯೇ ಪರಿಸರ ಸಂರಕ್ಷಣೆಯ ಮನೋಭಾವ ಇರಿಸಿಕೊಂಡು ಹತ್ತು ಹಲವಾರು ಜಾಗೃತ ಕಾರ್ಯಕ್ರಮಗಳ ಮೂಲಕ ಪರಿಸರದ ಬಗ್ಗೆ ನಿರಂತರ ಕಾಳಜಿ ವಹಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದ ನಂತರ ರೋವರ್ಸ್‌ ಮತ್ತು ರೇಂಜರ್ಸ್ ದಳದ ವಿದ್ಯಾರ್ಥಿಗಳು ಪ್ರತೀ ತರಗತಿಗೆ ಹೋಗಿ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಸಿದ್ಧವನ ಬಳಿ ಇರುವ ಸಸ್ಯೋದ್ಯಾನ ʼಯಶೋವನʼ ಕ್ಕೆ ಜಾಥಾ ಮೂಲಕ ತೆರಳಿ ಅಲ್ಲಿಯ ವಿವಿಧ ಸಸ್ಯ ಮತ್ತು ಮರ -ಗಿಡಗಳ ಬಗ್ಗೆ ಮಾಹಿತಿ ತಿಳಿದುಕೊಂಡರು. ಸಸ್ಯೋಧ್ಯಾನದಲ್ಲಿ ಮಾಹಿತಿಯನ್ನು ಎಸ್.ಡಿ.ಎಮ್. ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಕೋಮಲ್‌ ಪಿ ಸಿ ಇವರು ಸಸ್ಯೋದ್ಯಾನ ಸ್ಥಾಪನೆಯ ಉದ್ದೇಶ, ಹಿನ್ನಲೆ ಮತ್ತು ಅದರ ಮಹತ್ವದ ಬಗ್ಗೆ ಸವಿಸ್ತಾರವಾಗಿ ವಿವರಿಸುತ್ತಾ ಜಗತ್ತಿನಲ್ಲಿ ಮನುಷ್ಯ ಇಲ್ಲದಿದ್ದರೂ ಜಗತ್ತು ನಡೆಯುತ್ತದೆ ಆದರೆ ಪರಿಸರ ಇಲ್ಲದಿದ್ದರೆ ಜಗತ್ತೇ ಇರುವುದಿಲ್ಲ ಆ ನಿಟ್ಟಿನಲ್ಲಿ ಪರಿಸರದ ಬಗ್ಗೆ ತಿಳುವಳಿಕೆ ಹಾಗೂ ಸಂರಕ್ಷಣೆಯ ಕೆಲಸ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ ನಿತ್ಯ ಜೀವನದಲ್ಲಿಯೂ ಅಳವಡಿಕೆ ಆದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಧನ್ಯತೆಯನ್ನು ಕಾಣುತ್ತವೆ ಆ ನಿಟ್ಟಿನಲ್ಲಿ ತಾವೆಲ್ಲ ಹೆಜ್ಜೆಯಿಡಬೇಕು ಎಂದರು. ರೋವರ್ಸ್‌ ಮತ್ತು ರೇಂಜರ್ಸ್ ದಳದ ಅಧಿಕಾರಿಗಳಾದ ಲಕ್ಷ್ಮೀಶ್‌ ಭಟ್‌ ಮತ್ತು ಅಂಕಿತಾ ಎಮ್‌ ಕೆ ಇವರ ಮಾರ್ಗದರ್ಶನದಲ್ಲಿ ನಡೆಯಿತು.

Related posts

ಗುರುವಾಯನಕೆರೆ ಸಮೀಪ ಬದ್ಯಾರುವಿನಲ್ಲಿ ಕಾರು- ಬೈಕ್ ನಡುವೆ ಭೀಕರ ರಸ್ತೆ ಅಪಘಾತ, ಬೈಕ್ ಸವಾರ ಗಂಭೀರ

Suddi Udaya

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ವಿಶೇಷ ಪೂಜೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ದ.ಕ. ಜಿಲ್ಲೆಯ ಸಿ.ಬಿ.ಎಸ್.ಇ ಅಂತರ ಶಾಲೆಗಳ ಐಕ್ಸ್ (AICS) ಸಾಂಸ್ಕೃತಿಕ ಸ್ಪರ್ಧೆ

Suddi Udaya

ವಕೀಲರ ಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕ್ಲಾಸಿಕಲ್ ಟೈಗರ್ಸ್ ಧರ್ಮಸ್ಥಳ ಇವರಿಂದ “ಪಿಲಿಗೊಬ್ಬು” ಕಾರ್ಯಕ್ರಮ

Suddi Udaya

ಬಂಗೇರ ನಿಧನಕ್ಕೆ ಡಾ.ಹೆಗ್ಗಡೆ ಸಂತಾಪ

Suddi Udaya

ನ.15: ಕಸ್ತೂರಿ ರಂಗನ್ ವರದಿ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಬೆಂಬಲ

Suddi Udaya
error: Content is protected !!