April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದ.ಕ. ಜಿಲ್ಲೆಯಲ್ಲಿ ಬಿಎಸ್ಸೆನ್ನೆಲ್ 4ಜಿ ಸೇವೆ

ಬೆಳ್ತಂಗಡಿ: ಕೇಂದ್ರ ಸರಕಾರವು ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿ (ಯುನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್ )ಯಡಿ ದೇಶಾದ್ಯಂತ ಕುಗ್ರಾಮಗಳ ಸಹಿತ ಸ್ವಲ್ಪವೂ ನೆಟ್ ವರ್ಕ್ ತಲುಪದ 3 ಲಕ್ಷಕ್ಕೂ ಅಧಿಕ ಸ್ಥಳಗಳಲ್ಲಿ ಸ್ಥಾಪಿಸಲಿರುವ ಬಿಎಸ್ಸೆನ್ನೆಲ್ 4ಜಿ ಸೇವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳಲಿದೆ. ಇದರಿಂದ ದ.ಕ ಜಿಲ್ಲೆಯಲ್ಲಿ ನೆಟ್ ವರ್ಕ್ ಲಭಿಸಲಿದೆ.

ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ನ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕೇಂದ್ರ ಸರಕಾರವು ಮೆಕ್ ಇನ್ ಇಂಡಿಯಾದಡಿ ಟಿಸಿಎಸ್ (ಟಾಟಾ ಕನ್ನಲ್ಟೆನ್ಸಿ ಸರ್ವೀಸ್) ಮತ್ತು ಐಟಿಐ ಲಿ, ಒಪ್ಪಂದದೊಂದಿಗೆ ದೇಶದ ವಿವಿಧೆಡೆ 4ಜಿ ನೆಟ್ ವರ್ಕ್ ಟವರ್ ಸ್ಥಾಪಿಸಲಿದೆ. ಈಗಿರುವ 4ಜಿಯನ್ನೇ ಮುಂದೆ 5ಜಿ ಸೇವೆಯಾಗಿ ಪರಿವರ್ತಿಸಲು ಕೂಡ ಸಾಧ್ಯವಿದೆ.

ಬೆಳ್ತಂಗಡಿ ತಾಲೂಕಿನ ಪೆರಾಡಿ, ಅಣಿಯೂರು, ಬದನಾಜೆ, ನಿಟ್ಟಡ್ಕ, ಬರೆಂಗಾಯ, ಚಾರ್ಮಾಡಿ ಕಾಂಜಾಲ್, ಮಾಲಾಡಿ ಕರಿಯಬೆ, ಕೆಮ್ಮಟೆ ,ಕೊಡಿಯಾಲುಬೈಲು, ಕೊಲ್ಪಾಡಿ, ಕುಪ್ಲೊಟ್ಟು, ಬೈಪಾಡಿ, ಮುಂಡೂರು, ಪೆರ್ನಡ್ಕ ಮಿಯಲಾಜೆ, ಎಳನೀರು, ಪೆರ್ಲ ಈ ಸ್ಥಳಗಳಲ್ಲಿ ಟವರ್ ನಿರ್ಮಾಣಗೊಳ್ಳಲಿವೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಹಿರಿಯ ಯಕ್ಷಗಾನ ಭಾಗವತ ಧರ್ಣಪ್ಪ ಆಚಾರ್ಯ ಅಳದಂಗಡಿ ನಿಧನ

Suddi Udaya

ಬೆಳ್ತಂಗಡಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದಲ್ಲಿ 50 ನೇ ವರ್ಷದ ಸಂಭ್ರಮಾಚರಣೆ

Suddi Udaya

ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳಾಲು ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ರಂಜಿತ್ ಹೆಚ್ ಡಿ ಬಳಂಜ

Suddi Udaya

ಉಜಿರೆ ಎರ್ನೋಡಿಯಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya
error: Content is protected !!