25.1 C
ಪುತ್ತೂರು, ಬೆಳ್ತಂಗಡಿ
April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ: ಮರಿಯಾಲಡೊಂಜಿ ಐತಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ: ಆ. 20 ಆಟಿಕೂಟದ ಗಮ್ಮತ್ ಲೇಸ್, ವಾರ್ಷಿಕ ಮಹಾಸಭೆ

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ ನಾಲ್ಕೂರು ತೆಂಕಕಾರಂದೂರು ಇದರ ಆಶ್ರಯದಲ್ಲಿ ಆ. 20 ರಂದು ಆಟಿಕೂಟದ ‘ಮರಿಯಾಲಡೊಂಜಿ ಐತಾರ’ ಕಾರ್ಯಕ್ರಮವು ಭಾಗಿ ಮುಂಡಪ್ಪ ಪೂಜಾರಿ ಸಭಾ ವೇದಿಕೆಯಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಸಂಘದ ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷೆ ಅನಸೂಯರವರು ಬಿಡುಗಡೆಗೊಳಿಸಿ ಶುಭಕೋರಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್, ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ಬಳಂಜ, ಆಡಳಿತ ಮಂಡಳಿ ಸದಸ್ಯರಾದ ದಿನೇಶ್ ಕೋಟ್ಯಾನ್ ಕುದ್ರೊಟ್ಟು, ಸುರೇಶ್ ಪೂಜಾರಿ ಜೈಮಾತಾ, ಯೋಗೀಶ್ ಯೈಕುರಿ, ರವೀಂದ್ರ ಬಿ ಅಮೀನ್, ಯೋಗೀಶ್ ಕೊಂಗುಳ, ಜಗದೀಶ್ ಬಳ್ಳಿದಡ್ಡ, ಪ್ರವೀಣ್ ಪೂಜಾರಿ ಲಾಂತ್ಯಾರು, ಸದಾನಂದ ಪೂಜಾರಿ ಬೊಂಟ್ರೊಟ್ಟು, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರವೀಣ್ ಕೋಟ್ಯಾನ್ ದರ್ಖಾಸು,ಕಾರ್ಯದರ್ಶಿ ಶರತ್ ಅಂಚನ್ ಬಾಕ್ಯರಡ್ಡ, ಸದಸ್ಯ ರಂಜಿತ್ ಮಜಲಡ್ಡ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಪುಷ್ಪಾ ಗೀರೀಶ್, ಕಾರ್ಯದರ್ಶಿ ಕಲಾವತಿ, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ,ಸದಸ್ಯರಾದ ಅನುಷಾ ಬೊಕ್ಕಸ, ಮಮತಾ ಖಂಡಿಗ, ಅಶ್ವಿತಾ ಕಡೆಂಗಾಲು ಉಪಸ್ಥಿತರಿದ್ದರು.

Related posts

ಬಳಂಜ ಶಿವಾಜಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಬಳಂಜ ಶಾಲೆಯಲ್ಲಿ ರಕ್ಷಾಬಂಧನ ಆಚರಣೆ

Suddi Udaya

ಮಾಣೂರು ಸಪರಿವಾರ ಶ್ರೀ ಶಾಸ್ತರ ದೇವಸ್ಥಾನ ನೂತನ ದೇವಾಲಯದ ಶಿಲಾನ್ಯಾಸ

Suddi Udaya

ಬಳಂಜ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾ ಕೂಟ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಮೋಹನ್ ಕುಮಾರ್

Suddi Udaya

ಅರಸಿನಮಕ್ಕಿ: ವಲಯ ಮಟ್ಟದ ಪ್ರಗತಿಬಂಧು ಒಕ್ಕೂಟಗಳ ಪದಗ್ರಹಣ ಸಮಾರಂಭ ಹಾಗೂ ಸಾಧನಾ ಸಮಾವೇಶ

Suddi Udaya

ಸಾರ್ವಜನಿಕರ ದೂರಿನಂತೆ ಅನಧಿಕೃತ ವಸತಿಗ್ರಹ ವ್ಯವಹಾರ ಸ್ಥಗಿತಗೊಳಿಸಿದ ಧರ್ಮಸ್ಥಳ ಗ್ರಾಮ ಪಂಚಾಯತ್

Suddi Udaya

ಕಳೆಂಜ: ನಡುಜಾರು ಸ.ಕಿ.ಪ್ರಾ. ಶಾಲೆಗೆ ಉದ್ಯಮಿ ಪ್ರಜಿತ್ ಜೈನ್ ರಿಂದ ಸ್ಟ್ಯಾಂಡ್ ಫ್ಯಾನ್ ನ್ನು ಕೊಡುಗೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ