ನಡ ಸ.ಪ.ಪೂ. ಕಾಲೇಜಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ನಡ : “ಹಿಂದಿನ ಕಾಲದ ಜನರ ಜೀವನ ಶೈಲಿಯಲ್ಲಿ ವೈಜ್ಞಾನಿಕ ಚಿಂತನೆಗಳು ಅಡಕವಾಗಿದ್ದವು. ಈ ಮಣ್ಣಿನ ವಾಸನೆಯೇ ಆಟಿಯ ಸಂಸ್ಕೃತಿ. ಜನರು ತಮ್ಮ ಕಷ್ಟವನ್ನು ಕಳೆಯಲು, ಹೊಟ್ಟೆಪಾಡಿಗಾಗಿ ಪ್ರಕೃತಿಯಲ್ಲಿ ಸಿಗುವ ಎಲೆ, ಬೇರು, ಕಾಂಡಗಳನ್ನೇ ಆಹಾರವಾಗಿ ಉಪಯೋಗಿಸುತ್ತಿದ್ದರು.ಆದರೆ ಮನುಷ್ಯನ ಕೈಗೆ ಕಾಂಚನ ಸೇರಿದಾಗ ಸಂಸ್ಕೃತಿಯ ಅಧ:ಪತನ ಪ್ರಾರಂಭವಾಯಿತು ” ಎಂದು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿದ್ದ ವಾಣಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಮಹಾಬಲ ಗೌಡ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಂಜುಳಾರವರು ದೀಪ ಪ್ರಜ್ವಲನ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಡ ಗ್ರಾಮಪಂಚಾಯತ್ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಶ್ರೀಮತಿ ಮಂಜುಳಾರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಹಿತೈಷಿ, ಪಾಕ್ಸ್ ನಿರ್ದೇಶಕ ಮುನಿರಾಜ ಅಜ್ರಿ ಯವರು ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾoಶುಪಾಲರಾದ ಚಂದ್ರಶೇಖರ್ ರವರು ‘ಯಾವುದೇ ಆಚರಣೆಗಳು ಮೂಢ ನಂಬಿಕೆಗಳಲ್ಲ. ಬದಲಾಗಿ ಅವು ಮೂಲನಂಬಿಕೆಗಳು. ಅವುಗಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಇದೆ ‘ಎಂಬ ಸಂದೇಶಗಳನ್ನು ನೀಡಿದರು.

ವೇದಿಕೆಯಲ್ಲಿ ಹಿರಿಯ ಉಪನ್ಯಾಸಕಿ ಶ್ರೀಮತಿ ಲಿಲ್ಲಿ ಪಿ. ವಿ., ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನ್ವಿತ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸವಿತಾ, ಯಕ್ಷಿತಾ, ಸೌಮ್ಯ, ನೀರಿಕ್ಷಾ, ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಲಿಲ್ಲಿ ಪಿ. ವಿ. ಸ್ವಾಗತಿಸಿ,ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ವಸಂತಿ ಪಿ. ಯವರು ವಂದಿಸಿದರು. ಉಪನ್ಯಾಸಕರಾದ ಶ್ರೀಮತಿ ಶಿಲ್ಪಾ ಡಿ., ಶ್ರೀಮತಿ ಪವಿತ್ರ, ಶ್ರೀಮತಿ ಶರ್ಮಿಳಾ ಸಹಕರಿಸಿದರು. ವಿದ್ಯಾರ್ಥಿಗಳಿಗಾಗಿ ಚೆನ್ನೆಮಣೆ ಆಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ತುಳು ಹಾಡು, ನೃತ್ಯ ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳು ಆಟಿಡೊಂಜಿ ದಿನವನ್ನು ಸಂಭ್ರಮಿಸಿದರು. ವಿದ್ಯಾರ್ಥಿಗಳು ತಮ್ಮ ಮನೆಯಿಂದ ತಯಾರಿಸಿ ತಂದಿದ್ದ ಆಟಿ ತಿಂಡಿ -ತಿನಿಸುಗಳೊಂದಿಗೆ ಸಹ ಭೋಜನ ಏರ್ಪಡಿಸಲಾಗಿತ್ತು. ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀ ಮೋಹನ ಗೌಡ ರವರು ಕಾರ್ಯಕ್ರಮ ಆಯೋಜಿಸಿ, ನಿರ್ವಹಿಸಿದರು.

Leave a Comment

error: Content is protected !!