38.9 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಪಿಲಾ ನದಿ ಕಿರು ಸೇತುವೆ ದುರಸ್ತಿ ಸಮಿತಿ ಜಮೆ-ಖರ್ಚುಗಳ ಸಭೆ

ಅರಸಿನಮಕ್ಕಿ : ಸುದೆಗಂಡಿ ಕಿರುಸೇತುವೆಯ ತಡೆಬೇಲಿಯ ಕಾಮಗಾರಿ ಮುಗಿದು ಜಮೆ – ಖರ್ಚುಗಳ ಸಭೆ ಆ.18 ರಂದು ದರ್ಭೆತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಳದ ಸಭಾಭವನದಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷರಾದ ಕರುಣಾಕರ ಗೋಗಟೆಯವರು ಮಾತನಾಡಿ ಕಾಮಗಾರಿಗಳಿಗಾಗಿ ಧನಸಂಗ್ರಹ ಮತ್ತು ಧನಸಹಾಯ ಮಾಡಿದ ಮಹನೀಯರಿಗೆ ಮತ್ತು ಕ್ಲಪ್ತ ಸಮಯದಲ್ಲಿ ಕೆಲಸ ನಿರ್ವಹಿಸಿದ ಮಾಸ್ಟರ್ ಪ್ಲಾನರಿ, ಪುತ್ತೂರು ಇವರಿಗೆ ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸಿದರು. ಕಾರ್ಯದರ್ಶಿ ಪ್ರಶಾಂತ್ ಹೆಬ್ಬಾರು ಜಮೆ ಖರ್ಚುಗಳನ್ನು ಸಭೆಗೆ ತಿಳಿಸಿದರು. ಒಟ್ಟು ಜಮೆ ರೂ. 2,64,562, ಖರ್ಚು ರೂ.1,71,100, ಉಳಿಕೆ ರೂ. 93,462 ಮೊತ್ತವು ಸಮಿತಿಯಲ್ಲಿದೆ.

ಸಭೆಯಲ್ಲಿ ಉಳಿಕೆ ಮೊತ್ತದ ಬಗ್ಗೆ ಚರ್ಚೆಯಾಗಿ ಪುನಃ ಸೇತುವೆಯ ಉಳಿದ ಭಾಗಕ್ಕೆ ಶಾಶ್ವತ ತಡೆಬೇಲಿಯನ್ನು ನಿರ್ಮಾಣ ಮಾಡುವುದೆಂದು ನಿರ್ಣಯಿಸಲಾಯಿತು. ಆದರೆ ಉಳಿಕೆ ಮೊತ್ತ ಸಾಲದೇ ಇರುವುದರಿಂದ ಇನ್ನು ಸುಮಾರು ರೂ.90ಸಾವಿರ ವನ್ನು ದಾನಿಗಳಿಂದ ಸಂಗ್ರಹಿಸುವುದೆಂದು, ಮುಂದೆ ಸೆಪ್ಟೆಂಬರ್ ತಿಂಗಳಿನಲ್ಲಿ 2ನೇ ಹಂತದ ಕಾಮಗಾರಿಯನ್ನು ಮಾಡುವುದೆಂದು ನಿರ್ಣಯಿಸಲಾಯಿತು.

ಇದರೊಂದಿಗೆ ಸೇತುವೆಯ ದೃಢವಾಗಿ ಸರ್ವಋತುಗಳಲ್ಲೂ ಸುಗಮ ಸಂಚಾರ ಯೋಗ್ಯವಾಗಲಿದೆ. ಇದಕ್ಕೆ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.

ಸಭೆಯಲ್ಲಿ ಕರುಣಾಕರ ಗೋಗಟೆ ಹೊಸ್ಮಠ, ಶ್ರೀಮತಿ ವಸುಧಾ ಗೋಗಟೆ, ಪಾಳಂದೆ ನರಸಿಂಹ ಭಟ್, ಪ್ರಶಾಂತ್ ಹೆಬ್ಬಾರ್ ನೆಲ್ಲಿತಡ್ಕ, ನವೀನ್ ಶೆಂಡ್ಯೆ ಅರೆಕಲ್, ದಿವಾಕರ ತಾಮ್ಮನ್ ಕರ್, ಉದಯ ಕುಮಾರ್ ಅಭ್ಯಂಕರ್, ಜಗದೀಶ , ರಾಜೇಶ್ ಬೊಳ್ಳೋಡಿ, ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ ಸತೀಶ್ ಕಾಶಿಪಟ್ಣ, ಪ್ರವೀಣ್ ಗಿಲ್ಬರ್ಟ್ ಪಿಂಟೋ ಆಯ್ಕೆ

Suddi Udaya

ರಸ್ತೆ ಬದಿ ವಾಹನ ನಿಲ್ಲಿಸುವರಿಗೆ ಎಚ್ಚರಿಕೆ, ಬ್ಯಾಟರಿ ಕಳ್ಳರಿದ್ದಾರೆ: ಸುಲ್ಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ವಾಹನಗಳ ಬ್ಯಾಟರಿ ಕಳವು; ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಚಿಬಿದ್ರೆ: ಪಿತ್ತಿಲು ನಿವಾಸಿ ದಯಾನಂದ ಪಿ ನಿಧನ

Suddi Udaya

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

Suddi Udaya

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವರ ‘ಅನಾರ್ದ ಐಸಿರಿ’ ಭಕ್ತಿಗೀತೆ ಬಿಡುಗಡೆ

Suddi Udaya

ಕೊಕ್ಕಡ: ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!