September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಇಂಗ್ಲೆಂಡ್ ನಲ್ಲಿ ಗುರುವಾಯನಕೆರೆಯ 12 ವರ್ಷದ ಬಾಲಕನ ಮಹಾನ್ ಸಾಧನೆ- ಬ್ರಿಟೀಷ್ ನ್ಯಾಷನಲ್ ಚಾಂಪಿಯನ್ ಶಿಪ್ ನ 4ನೇ ಸುತ್ತಿನಲ್ಲಿ ಪ್ರಶಸ್ತಿ ಪಡೆದ ಕಾರ್ ರೇಸರ್ ಕನಿಷ್ಕ್ ರಾವ್

ಬೆಳ್ತಂಗಡಿ : ತಾಲೂಕಿನ ಗುರುವಾಯನಕೆರೆಯ ಯಡೂ೯ರು ನಿವಾಸಿಯಾಗಿರುವ ಈಗ ಇಂಗ್ಲೆಡ್ ನಲ್ಲಿ ಉದ್ಯೋಗದಲ್ಲಿರುವ ಕುಮಾರ್ ಮತ್ತು ಮಾನಸ ದಂಪತಿಯ ಪುತ್ರ ಕನಿಷ್ಕ್ ರಾವ್ ಈ ಬಾರಿ ಬ್ರಿಟೀಷ್ ನ್ಯಾಷನಲ್ ಚಾಂಪಿಯನ್ ಶಿಪ್ ರೇಸ್ ನ ನಾಲ್ಕನೇ ರೌಂಡ್ ನಲ್ಲಿ ಗೆದ್ದು ಬೀಗಿದ್ದಾರೆ. ಆಗಸ್ಟ್ 20ರಂದು ಲಂಡನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಕನಿಷ್ ಮಿಂಚಿನ ವೇಗದಲ್ಲಿ ಚಲಿಸಿ ವಿಜೇತರಾಗಿದ್ದಾರೆ. ಕನಿಷ್ಠ ನಿನ್ನೆ Scotland ನಲ್ಲಿ ನಡೆದ British national championship ಅಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. Qualifying race ಅಲ್ಲಿ 6ನೇ ಸ್ಥಾನ ಪಡೆದು, heats ಅಲ್ಲಿ 5ನೇ ಸ್ಥಾನ ಪಡೆದಿರುತ್ತಾರೆ. ನಂತರ prefinal ರೇಸ್ ಅಲ್ಲಿ 2nd finish ಮಾಡಿ, ಫೈನಲ್ ನಲ್ಲಿ first position ಅಲ್ಲಿ win ಆಗಿದ್ದಾರೆ ಎಂದು ಅವರ ತಂದೆ ಕುಮಾರ್ ಸುದ್ದಿ ಉದಯಕ್ಕೆ ಮಾಹಿತಿ ನೀಡಿದ್ದಾರೆ.

12 ವರ್ಷದ ಬಾಲಕ ಕನಿಷ್ಠ ರಾವ್ ಫಾರ್ಮಲಾ 1ಚಾಂಪಿಯನ್ ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಕಾರ್ ರೇಸಿಂಗ್ ನಲ್ಲಿ ಭಾಗಿಯಾಗುತ್ತಿರುವ ಕನಿಷ್ಠ ಏಳು ತಿಂಗಳ ಹಿಂದೆ ಕನಿಷ್ಕ ತನ್ನ ತವರೂರು ಗುರುವಾಯನಕೆರೆ ಯಡೂ೯ರಿನ ಮನೆಗೆ ಬಂದು ಹೋಗಿದ್ದರು. ತುಳುವಿನಲ್ಲಿ ನಿಗ೯ಳವಾಗಿ ಮಾತನಾಡುವ ಕನಿಷ್ಠ ಕಳೆದ ಬಾರಿ ಊರಿಗೆ ಬಂದಾಗ ತನ್ನ ಫೆವರಿಟ್ ಫುಡ್, ಆಸಕ್ತಿ , ಹವ್ಯಾಸ ಗಳ ಬಗ್ಗೆ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದರು.

ತಾಲೂಕಿನ ಪ್ರತಿಭಾನ್ವಿತ ಬಾಲಕ, ಫಾರ್ಮುಲಾ ವನ್ ರೇಸ್ ನಲ್ಲಿ ಸಾಧನೆ ಮಾಡುವ ಭರವಸೆ ಹೊಂದಿದ್ದು, ಇವರಿಗೆ ” ಸುದ್ದಿ ಉದಯ ಬಳಗ” ಶುಭ ಹಾರೈಸುತ್ತದೆ.

Related posts

ಯಕ್ಷಭಾರತಿಯಿಂದ ಶೋಭಾ ಸುರೇಶ ಕುದ್ರೆಂತ್ತಾಯರಿಗೆ ಗೌರವಾರ್ಪಣೆ ಮತ್ತು ತಾಳಮದ್ದಳೆ

Suddi Udaya

ಧರ್ಮಸ್ಥಳ :ನಡುಗುಡ್ಡೆ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಪ್ರಯುಕ್ತ 10ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಬೆನ್ನುಹುರಿ ಅಪಘಾತದ ಬಗ್ಗೆ ಮಾಹಿತಿ ಕಾರ್ಯಗಾರ

Suddi Udaya

ಕುವೆಟ್ಟು: ಶ್ರೀ ರಾಮನವಮಿ ಉತ್ಸವ-ಧಾರ್ಮಿಕ ಸಭೆ

Suddi Udaya

ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ವಿದ್ಯಾರ್ಥಿನಿಯರು: ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಪ್ರಕರಣ ದಾಖಲು

Suddi Udaya

ಭಾರತ್ ಬ್ಯಾಂಕಿಗೆ 48 ವರ್ಷಗಳ ಸಂಭ್ರಮ: ಬೆಳ್ತಂಗಡಿ ಶಾಖೆಯಲ್ಲಿ ಆಚರಣೆ

Suddi Udaya
error: Content is protected !!