ವೇಣೂರು ಎಸ್.ಡಿ.ಎಮ್. ಐಟಿಐ ಮತ್ತು ಟೊಯೋಟಾ ಒಡಂಬಡಿಕೆ

Suddi Udaya

ವೇಣೂರು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ಮತ್ತು ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿ ಟೊಯೋಟ ಕಿರ್ಲೊಸ್ಕರ್ ಮೋಟರ್ಸ್, ಬೆಂಗಳೂರು ನಡುವೆ ಉತ್ಕೃಷ್ಟ ಕೌಶಲ್ಯ ತರಬೇತಿಗಾಗಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.

ಈ ಒಪ್ಪಂದದಂತೆ ಕಿರ್ಲೋಸ್ಕರ್ ಮೋಟರ್ಸ್ ರವರು ಐಟಿಐ ವೇಣೂರಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಉತ್ಕೃಷ್ಟ ತರಬೇತಿಯನ್ನು ನೀಡಲಿದ್ದು ತರಬೇತಿಯ ಮೊದಲ ಹಂತದಲ್ಲಿ ಬೆಂಗಳೂರಿನ ಟೊಯೋಟಾ ಕಂಪನಿಯಲ್ಲಿ ತರಬೇತಿಯನ್ನು ನೀಡಿ ಬಳಿಕ ವೇಣೂರಿನ ಐಟಿಐಯಲ್ಲಿ ಕೌಶಲ್ಯವೃದ್ಧಿ ತರಬೇತಿಯನ್ನು ನೀಡಲಿದ್ದಾರೆ.

ಈ ಉನ್ನತ ಕೌಶಲ್ಯ ಸಾಧನೆಗಾಗಿ ಸಂಸ್ಥೆಯು ವಿಶೇಷ ವಿನ್ಯಾಸದ ತರಬೇತಿ ಉಪಕರಣಗಳನ್ನು ಹೊಂದಬೇಕಾಗಿದೆ. ತರಬೇತಿಯ ಬಳಿಕ ಕಂಪೆನಿಯು ಉದ್ಯೋಗದ ಸಮಯದಲ್ಲಿ ಪ್ರಥಮ ಆದ್ಯತೆಯ ಮೇರೆಗೆ ಇಲ್ಲಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಪರಿಗಣಿಸಲಾಗುತ್ತದೆ. ಈ ಮೂಲಕ ವೇಣೂರಿನ ಐಟಿಐಯು ತನ್ನ ಉತ್ಕೃಷ್ಟತೆಯ ಇನ್ನೊಂದು ಮೈಲುಗಲ್ಲನ್ನು ಸ್ಥಾಪಿಸಿದಂತಾಗಿದೆ. ಒಡಂಬಡಿಕೆಗೆ ಟೊಯೋಟಾ ಕಂಪನಿಯ ಪರವಾಗಿ ವೆಂಕಟೇಶ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಮತ್ತು ಐಟಿಐ ಪರವಾಗಿ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಸಹಿ ಮಾಡಿದರು. ಸಂಸ್ಥೆಯ ಈ ಸಾಧನೆಗಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಆಡಳಿತ ಮಂಡಳಿಯವರು ಸಂಸ್ಥೆಗೆ ಅಭಿನಂದನೆಯನ್ನು ತಿಳಿಸುತ್ತಾರೆ.

Leave a Comment

error: Content is protected !!