30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ‌ ಬೆಳ್ತಂಗಡಿ ವಲಯದಿಂದ ಶ್ರೀವರಮಹಾಲಕ್ಷ್ಮೀ ಪೂಜೆ

ಬೆಳ್ತಂಗಡಿ: ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ‌( ರಿ ) ಬೆಳ್ತಂಗಡಿ ವಲಯ, ಪೂರ್ಣನಂದ ‌ಸೇವಾ ಪ್ರತಿಷ್ಠಾನ ಬೆಳ್ತಂಗಡಿ ವಲಯ ಮತ್ತು ಮಹಿಳಾ ಸಂಘ ಬೆಳ್ತಂಗಡಿ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಆ. 25 ರಂದು ಪುಂಜಾಲಕಟ್ಟೆ ಗೋಪಾಲಕೃಷ್ಣ ದೇವಸ್ಥಾನದ ರಾಧಾಕೃಷ್ಣ ಸಭಾಭವನದಲ್ಲಿ ಪುರೋಹಿತರಾದ ಪ್ರಭಾಕರ ಭಟ್ ಇಡ್ಯಾ ಇವರ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯಿತು.

ಸಮಾಜದ ಮಾತೆಯರು ಮತ್ತು ಆಸ್ತಿಕ ಬಾಂಧವರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ನಮ್ಮ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ -3 ನ್ನು ಯಶಸ್ವಿಯಾಗಿ ಪೂರೈಸಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಇಳಿಸಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆ ಪಾತ್ರವಾಗಿದ್ದು ಇಸ್ರೋ ಸಂಸ್ಥೆ ಯನ್ನು ಪ್ರಚಂಡ ಕರತಾಡನದ ಮೂಲಕ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಪೂರ್ವಧ್ಯಕ್ಷರಾದ ದಯಾನಂದ ನಾಯಕ್, ಪೂರ್ವ ಕಾರ್ಯದರ್ಶಿ ಸುಧಾಕರ ಪ್ರಭು ಪೆರ್ಮರೋಡಿ, ಕಾರ್ಯದರ್ಶಿ ಧನಂಜಯ ನಾಯಕ್ ವೇಣೂರು, ಮಹಿಳಾ ಸಂಘದ ಕಾರ್ಯದರ್ಶಿ ಕಸ್ತೂರಿ ಪ್ರಭು ನಾನಾಡಿ, ಪೂರ್ವಧ್ಯಕ್ಷರು, ಸಮಾಜದ ಹಿರಿಯರು, ಮಾತೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.

Related posts

ಮದ್ದಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀರಾಮ ನವಮಿ ಉತ್ಸವ

Suddi Udaya

ಕೇಳ್ತಾಜೆ: ಸಿರಾಜುಲ್ ಹುದಾ ಮದರಸ ಹಾಗೂ ಜುಮ್ಮಾ ಮಸ್ಜಿದ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಅಳದಂಗಡಿ: ಆರ್ವಮ್ ಡ್ರೆಸ್ ಹೌಸ್ ನಲ್ಲಿ ದೀಪಾವಳಿ ಧಮಾಕ

Suddi Udaya

ಉಜಿರೆ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಚಾರ್ಮಾಡಿ ಶಕ್ತಿಕೆಂದ್ರದಲ್ಲಿ ಯುವ ಚೌಪಲ್ ಕಾರ್ಯಕ್ರಮ

Suddi Udaya

ಮದ್ದಡ್ಕದಲ್ಲಿ ನ್ಯಾಯಬೆಲೆ ಅಂಗಡಿ ಶುಭಾರಂಭ

Suddi Udaya

ಕಾಜೂರು ಹಯಾತುಲ್ ಔಲಿಯಾ ದರ್ಗಾ ಶರೀಫ್ ನಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya
error: Content is protected !!