April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನಾವೂರು : ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ನಾವೂರು :2022-23 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಆ.30 ರಂದು ಅಮೃತ ಸಭಾಂಗಣದಲ್ಲಿ ನೆರವೇರಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ. ಉಮೇಶ್ ರವರು ವಹಿಸಿದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಸಹಾಯಕ ವ್ಯವಸ್ಥಾಪಕರು ಸತೀಶ್ ರಾವ್ , ಬೆಳ್ತಂಗಡಿ ಕೆಎಂಎಫ್ ಪಶು ವೈದ್ಯಾಧಿಕಾರಿ ಡಾ. ಗಣಪತಿ, ವಿಸ್ತರಣಾಧಿಕಾರಿ ಯಮುನಾ, ಉಪಾಧ್ಯಕ್ಷರಾದ ಸೋಮನಾಥ ಬಂಗೇರ , ನಿರ್ದೇಶಕರುಗಳಾದ, ಅನಂತ್ ರಾಜ್ ಜೈನ್ , ಸುಲೈಮಾನ್ , ತನುಜಾ ಶೇಖರ್ , ಪ್ರಮೋದ್ ಸಾಲಿಯಾನ್ , ಜಯಾನಂದ ಸಾಲಿಯಾನ್ , ಪೆರ್ನು ಗೌಡ, ಪ್ರಿಯಾ ಲಕ್ಷ್ಮಣ್ , ಟಿಪಿ ಪೌಲೂಸ್, ಲಲಿತ ಉಪಸ್ಥಿತರಿದ್ದರು.
2022-23 ನೇ ಸಾಲಿನಲ್ಲಿ ಸಂಘವು ರೂ. 11,55,532 ನಿವ್ವಳ ಲಾಭ ಗಳಿಸಿದೆ.

ಈ ಸಂದರ್ಭದಲ್ಲಿ ವರ್ಷದ ಖರ್ಚು ವೆಚ್ಚಗಳ ಆಯಾವಯವನ್ನು ಸಂಘದ ಕಾರ್ಯದರ್ಶಿ ಅಮಿತಾರವರು ಮಂಡಿಸಿದರು,.ಸಂಘದ ವತಿಯಿಂದ ಸಂಘದಲ್ಲಿದ್ದ ಪ್ರತಿಯೊಬ್ಬರಿಗೂ ಸ್ಟೀಲ್ ತೋಪುಗಳನ್ನು ವಿತರಿಸಲಾಯಿತು,


ಸಭೆಯಲ್ಲಿ ಸಂಘದ ಎಲ್ಲಾ ಸಿಬ್ಬಂದಿಗಳು ಹಾಗೂ ನಿರ್ದೇಶಕರುಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು
ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ಪ್ರಿಯಾ ಲಕ್ಷ್ಮಣ್ ಸ್ವಾಗತಿಸಿ
ಸಂಘದ ಅಧ್ಯಕ್ಷ ಬಿ, ಉಮೇಶ್, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Related posts

ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಕಳೆoಜ ಶಕ್ತಿಕೇಂದ್ರದಲ್ಲಿ ನಮೋ ಯುವಚೌಪಲ್

Suddi Udaya

ಉಡುಪಿ:ಐದನೇ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್

Suddi Udaya

ಶಿಶಿಲ ಗ್ರಾ.ಪಂ. ನಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಭೇಟಿ: ದೇವರಿಗೆ ವಿಶೇಷ ಪೂಜೆ ಸಲ್ಲಿಕೆ

Suddi Udaya

ಕಳಸ ನದಿಯಲ್ಲಿ ಮುಳುಗಿದ ಯುವಕನ ದೇಹ ಪತ್ತೆ; ತುರ್ತು ಕರೆಗೆ ಸ್ಪಂದಿಸಿದ ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು

Suddi Udaya

ಕೊಯ್ಯೂರು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ

Suddi Udaya
error: Content is protected !!