ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಸೆ.1-3: ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ 352ನೇ ಆರಾಧನಾ ಮಹೋತ್ಸವ

ಬೆಳ್ತಂಗಡಿ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ 352ನೇ ಆರಾಧನಾ ಮಹೋತ್ಸವ ಸೆ.1ರಂದು ಪ್ರಾರಂಭಗೊಂಡು ಸೆ.3 ರವರೆಗೆ ನಡೆಯಲಿದೆ.

ಸೆ.1ರಂದು ಬೆಳಿಗ್ಗೆ 9 ಗಂಟೆಗೆ ಬೆಳ್ತಂಗಡಿಯ ಉದ್ಯಮಿ ಮೋಹನದಾಸ ಕೊರ್ನಾಯರು ಆರಾಧನಾ ಮಹೋತ್ಸವ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್‌ನ ಅಧ್ಯಕ್ಷ ಪೃಥ್ವಿರಂಜನ್ ರಾವ್ ಭಾಗವಹಿಸಲಿದ್ದಾರೆ.

ಸೆ.2ರಂದು ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದ್ದು ಅಧ್ಯಕ್ಷತೆಯನ್ನು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪಿತಾಂಬರ ಹೇರಾಜೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬೆಂಗಳೂರಿನ ಉದ್ಯಮಿ ಬೇಗೂರು ನಾರಾಯಣ ಹಾಗೂ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಭಾಗವಹಿಸಲಿದ್ದಾರೆ.

ಉಜಿರೆ ಶ್ರೀ ಧರ್ಮಸ್ಥಳ ಕಾಲೇಜಿನ ಪ್ರಾಂಶುಪಾಲ ಡಾ| ಕುಮಾರ ಹೆಗ್ಡೆ ಮತ್ತು ಪತ್ರಕರ್ತರ ಸಂಘದ ಅಧ್ಯಕ್ಷ ಹೃಷಿಕೇಶ್‌ ಧರ್ಮಸ್ಥಳ ಇವರಿಗೆ ಗೌರವಾರ್ಪಣೆ ಜರಗಲಿದೆ.

ಸೆ.3 ಬೆಳಿಗ್ಗೆ 8 ಗಂಟೆಗೆ ಪಾದಪೂಜೆ ಹಾಗೂ ವಿವಿಧ ಸೇವೆಗಳು ಜರುಗಲಿದೆ.

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಸ೦ಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಜರಗಲಿದೆ ಎಂದು ಕಾರ್ಯದರ್ಶಿ ಶೇಖರ ಬಂಗೇರ ತಿಳಿಸಿದ್ದಾರೆ.

Related posts

ಅ.8: ಪಡಂಗಡಿ ಪ್ರಾ.ಕೃ.ಪ. ಸಹಕಾರ ಸಂಘದಿಂದ ಕೃಷಿ ಮಾಹಿತಿ ಶಿಬಿರ

Suddi Udaya

ಭಾರತೀಯ ಜನತಾ ಪಾರ್ಟಿ ಕಳಿಯ – ನ್ಯಾಯತರ್ಪು ವತಿಯಿಂದ ವಿಶೇಷ ಪೂಜೆ

Suddi Udaya

ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ಥಿಗೆ ಆಗ್ರಹಿಸಿ ರಸ್ತೆ ತಡೆದು ಎಸ್.ಡಿ.ಪಿ.ಐ ಪ್ರತಿಭಟನೆ

Suddi Udaya

ಲಾಯಿಲ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷರಾಗಿ ಶ್ರದ್ದೇಶ್ ಗಾಣಿಗ, ಕಾರ್ಯದರ್ಶಿಯಾಗಿ ಅಜಯ್

Suddi Udaya

ಉಜಿರೆಯಲ್ಲಿ ಗಣೇಶ್ ಹೆಲ್ಮೆಟ್ಸ್ ಶುಭಾರಂಭ

Suddi Udaya

ನಾರಾವಿ ಸಂತ ಅಂತೋನಿ ಪ.ಪೂ. ಕಾಲೇಜಿನಲ್ಲಿ ನಶಾಮುಕ್ತ ಭಾರತ -ಪ್ರತಿಜ್ಞಾ ಸ್ವೀಕಾರ

Suddi Udaya
error: Content is protected !!