September 6, 2026
ಗ್ರಾಮಾಂತರ ಸುದ್ದಿ

ಖಾತಾ ಬದಲಾವಣಿ, ಪಹಣಿ ತಿದ್ದುಪಡಿಯಂತಹ ಸಾರ್ವಜನಿಕ ಕೆಲಸಗಳಿಗೆ ತಾಂತ್ರಿಕ ಸಮಸ್ಯೆ: ಕನ್ನಡಸೇನೆ-ಕರ್ನಾಟಕ” ಬೆಳ್ತಂಗಡಿ ತಾಲೂಕಿನಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಬೆಳ್ತಂಗಡಿ: ಖಾತಾ ಬದಲಾವಣಿ, ಪಹಣಿ ತಿದ್ದುಪಡಿಯಂತಹ ಸಾರ್ವಜನಿಕ ಕೆಲಸಗಳಿಗೆ ತಾಂತ್ರಿಕ ಸಮಸ್ಯೆಯಿಂದ ತೊಂದರೆಯಾಗುವ ಬಗ್ಗೆ “ಕನ್ನಡಸೇನೆ-ಕರ್ನಾಟಕ” ತಾಲೂಕು ಅಧ್ಯಕ್ಷ ಗುರುಪ್ರಸಾದ್‌ ಮಾಲಾಡಿ ದ.ಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
‌ ಆ.23 ರಂದು ಜರುಗಿದ ಬೆಳ್ತಂಗಡಿಯಲ್ಲಿ ನಡೆದ “ಕುಂದು ಕೊರತೆಗಳ ಅಹವಾಲು ಸ್ವೀಕಾರ” ಕಾರ್ಯಕ್ರಮದಲ್ಲಿ ಈ ಮನವಿಯನ್ನು ನೀಡಿದಾಗ ಜಿಲ್ಲಾಧಿಕಾರಿಗಳು, ಕಂದಾಯ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಯನ್ನು ನೀಡಿದರು.


ಸಾರ್ವಜನಿಕ ವಿಚಾರದ ಫ್ಲಾಟಿಂಗ್ ಸಮಸ್ಯೆ, ರಸ್ತೆ ಸಮಸ್ಯೆ, ಇನ್ನಿತರ ಮೂಲಭೂತ ಸೌಕರ್ಯಗಳ ರಚನಾತ್ಮಕ ಅರ್ಜಿ ಸ್ವೀಕರಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ತಾಲೂಕು ಆಡಳಿತದೊಂದಿಗೆ ಸಂವಾದ ನಡೆಸಿ, ಸೂಕ್ತ ಪರಿಹಾರಕ್ಕೆ ಸಲಹೆ ನೀಡಿದ್ದಾರೆ.


ಕೆಲವರು ನ್ಯಾಯಾಲಯದಲ್ಲಿರುವ ವಿಚಾರದ ಬಗ್ಗೆ ಜಿಲ್ಲಾಧಿಕಾರಿಯವರ ಬಳಿಯಲ್ಲಿ ತಮ್ಮ ಅಳಳು ಹೇಳಿದಾಗ ಈ ವಿಚಾರ ಕಾನೂನು ವ್ಯಾಪ್ತಿಯಲ್ಲಿ ಜರುಗಬೇಕಾಗುವುದರಿಂದ ಇಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದು ಹೇಳಿ ಸಾವಧಾನವಾಗಿ ಜನರಿಗೆ ಸಲಹೆ ಸೂಚನೆ ನೀಡುತ್ತಿದ್ದ ವಿಚಾರ ಪ್ರಶಂಸರ್ಹವಾಗಿತ್ತು.
ಅಲ್ಲದೆ ಜಿಲ್ಲಾಧಿಕಾರಿಯವರ ಈ ಭೇಟಿಯಿಂದ ಕಡತ ವಿಲೇವಾರಿ ಕಾರ್ಯಕ್ರಮಕ್ಕೆ ವೇಗ ಬರಲು ಸಹಾಯವಾಗಿದ್ದು, ತಾಲೂಕು ಆಡಳಿತದಲ್ಲಿ ಹೊಸ ಹುರುಪಿಗೆ ಕಾರಣವಾಗಿ, ಸಾರ್ವಜನಿಕರಿಗೆ ಇಂತಹ ಕಾರ್ಯಕ್ರಮ ಅನುಕೂಲವಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಲಹೆಗಾರ ವೃಷಭ ಆರಿಗಾ, ತಾಲೂಕು ಕಾರ್ಯದರ್ಶಿ ಕೃಷ್ಣ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ ಇದರ 8 ನೇ ವಾರ್ಷಿಕೋತ್ಸವ

Suddi Udaya

ಕೊಕ್ಕಡ: ಯುವಕ ಸಂಶಯಾಸ್ಪದ ಸಾವು: ಪೊಲೀಸರ ತನಿಖೆ

Suddi Udaya

ಉಜಿರೆ ಎಸ್.ಡಿ.ಎಂ ಆಂ.ಮಾ. ಶಾಲೆಯಲ್ಲಿ ಕರಾಟೆ ಬೆಲ್ಟ್ ವಿತರಣೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ತಣ್ಣೀರುಪಂಥ ವಲಯದ ಹಲೇಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ರಕ್ತೇಶ್ವರಿಪದವು ಭಜನಾ ಮಂಡಳಿ ವತಿಯಿಂದ ನಗರ ಭಜನೆಗೆ ಚಾಲನೆ

Suddi Udaya

ಮದ್ದಡ್ಕ ಶ್ರೀರಾಮ ಸೇವಾ ಸಮಿತಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದ್ದಡ್ಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯಕ್ತ ಮೊಸರು ಕುಡಿಕೆ ಉತ್ಸವ

Suddi Udaya
error: Content is protected !!