September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲದಿಂದ 31ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ

ಗುರುವಾಯನಕೆರೆ: ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಇವರ ಆಶ್ರಯದಲ್ಲಿ 31 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವವು ಅತ್ಯಂತ ಅದ್ದೂರಿಯಾಗಿ ಜರುಗಿತು.

ನಾಗೇಶ್ ಪೂಜಾರಿ, ಆದೇಲು ಇವರ ಅಧ್ಯಕ್ಷತೆಯಲ್ಲಿ ಕುಣಿತ ಭಜನೆ, ಹಲವಾರು ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ನೂರಾರು ಭಕ್ತರು, ಕಲಾಭಿಮಾನಿಗಳು, ಕ್ರೀಡಾಸಕ್ತರು, ಸಾರ್ವಜನಿಕರು ಭಾಗವಹಿಸಿದ್ದರು. ಒಟ್ಟು 160ಕ್ಕಿಂತಲೂ ಹೆಚ್ಚು ಸ್ಪರ್ಧಾ ವಿಜೇತರು ಬಹುಮಾನ ಸ್ವೀಕರಿಸಿ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು. ಸ್ಪರ್ಧೆಗಳಲ್ಲಿ ಮಲ್ಲ ಕಂಬ ಸ್ಪರ್ಧೆ, ಭಗವದದ್ಗೀತಾ ಶ್ಲೋಕ ಪಠಣ, ಶ್ರೀ ಕೃಷ್ಣಾ ಲೀಲಾ ಕಥೆ ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಗಳು ಬಾಲಕೃಷ್ಣ ವೇಷ, ಯಶೋಧೆ ಮತ್ತು ಕೃಷ್ಣ ವಿಶೇಷವಾಗಿ ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ , ಮುಖ್ಯ ಅತಿಥಿಗಳಾಗಿ ಎಕ್ಸೆಲ್ ಕಾಲೇಜು ಗುರುವಾಯನಕೆರೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಯುವಜನ ಸೇವಾ ಸಮಿತಿ ಅಧ್ಯಕ್ಷ ರಮಾನಂದ ಸಾಲಿಯಾನ್, ಎಸ್‌ಕೆಡಿಆರ್‌ಡಿಪಿ ಯ ಕೃಷಿ ಅಧಿಕಾರಿ ಕೃಷ್ಣಾನಂದ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಜೈನ್ ಉಪಸ್ಥಿತರಿದ್ದು ಶುಭ ಹಾರೈಸಿದರು.

2022-23ನೇ ಸಾಲಿನ ಅತ್ಯುತ್ತಮ ಶಾಲಾ ಶಿಕ್ಷಕ ಪ್ರಶಸ್ತಿ ಪಡೆದಿದ್ದ ಬಿ.ಎಸ್ ಬಿರಾದಾರ್ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಸದಸ್ಯರಾದ ರಾಜೇಶ್ ಪೂಜಾರಿ ಆದೇಲು ನಿರೂಪಿಸಿ, ಹಿರಿಯ ಸದಸ್ಯರಾದ ಶಾಂತಿರಾಜ ಜೈನ್ ಸ್ವಾಗತಿಸಿ, ಶಿಕ್ಷಕ ಜಗನ್ನಾಥ್ ಇವರು ಧನ್ಯವಾದವಿತ್ತರು. ಸಮನ್ವಿತ್ ಎನ್ ಭಂಡಾರಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ಜೀವನ್ ಕುಲಾಲ್, ಮಾಜಿ ಅಧ್ಯಕ್ಷರಾದ ಯತೀಶ್ ಸಿರಿಮಜಲು, ಚಂದ್ರಶೇಖರ ಕುಲಾಲ್, ಜೀವನ್ ಕುಲಾಲ್. ಹರೀಶ್ ಸಪಲ್ಯ, ಕೋಶಾಧಿಕಾರಿ ರಾಹುಲ್ ಶೆಟ್ಟಿ ಬೆಂಗತ್ಯಾರು ಮತ್ತು ಎಲ್ಲಾ ಸಂಘದ ಸದಸ್ಯರು ಕಾರ್ಯಕ್ರಮಗಳನ್ನು ಸಂಘಟಿಸಿ ಸಹಕರಿಸಿದರು. ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಬಹಳಷ್ಟು ಸಂಖ್ಯೆಯ ಸ್ಪರ್ಧಿಗಳು ಸ್ಪರ್ಧಿಸಿ ಮುದ ನೀಡಿದರು.

Related posts

ಆ.23: ಬೆಳ್ತಂಗಡಿಯಲ್ಲಿ ಎಸ್ & ವಿ ಫ್ಯಾಮಿಲಿ ಬ್ಯೂಟಿ ಸೆಲೂನ್ & ಅಕಾಡೆಮಿ ಶುಭಾರಂಭ, ಆಧುನಿಕ ಸೌಲಭ್ಯಗಳೊಂದಿಗೆ ವಿನೂತನ ಬ್ಯೂಟಿ ಸೇವೆ

Suddi Udaya

ಬಂದಾರು: ಮತಪ್ರಚಾರ ಮಹಾ ಅಭಿಯಾನ

Suddi Udaya

ಜ.8: ಉಜಿರೆ, ಧರ್ಮಸ್ಥಳ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಗುರುವಾಯನಕೆರೆ: ಎಕ್ಸೆಲ್‌ ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರು ನಮನ ಹಾಗೂ 272 ಶಿಕ್ಷಕರಿಗೆ ಗೌರವಾರ್ಪಣೆ

Suddi Udaya

ಉಜಿರೆ: ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಹಿಂದಿ ದಿನಾಚರಣೆ

Suddi Udaya

ಉಜಿರೆ: ಎಸ್.ಡಿ.ಎಂ.ವಸತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪ.ಪೂ. ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!