32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು ಗ್ರಾ. ಪಂ. ನಲ್ಲಿ ಮೀನು ಕೃಷಿ ಮತ್ತು ಸಿಹಿ ನೀರಿನ ಮುತ್ತು ಕೃಷಿ ಕಾರ್ಯಾಗಾರ

ಬೆಳಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮೀನುಗಾರಿಕಾ ಇಲಾಖೆಯ ನೇತೃತ್ವದಲ್ಲಿ ಬೆಳಾಲು ಗ್ರಾ. ಪಂ. ಹಾಗೂ ಬೆಳಾಲು C. A. ಬ್ಯಾಂಕ್ ಸಹಯೋಗದಲ್ಲಿ ಸೆ. 08 ರಂದು ತಾಲೂಕಿನ ಪ್ರಥಮ ಸಮಗ್ರ ಮೀನು ಕೃಷಿ ಮತ್ತು ಸಿಹಿ ನೀರಿನ ಮುತ್ತು ಕೃಷಿ ಕಾರ್ಯಾಗಾರ ಹಾಗೂ ಕೃಷಿಕರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಬೆಳಾಲು ಗ್ರಾ.ಪಂ. ಅಧ್ಯಕ್ಷರು ವಿದ್ಯಾ ಶ್ರೀನಿವಾಸ ಗೌಡರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಅಧ್ಯಕ್ಷತೆ ವಹಿಸಿದ್ದರು.

ಬೆಳಾಲಿನ ಶಾಲಿನಿ ಮತ್ತು ತಂಡದವರು ನಾಡಗೀತೆ ಹಾಡುವ ಮೂಲಕ ಚಾಲನೆ ನೀಡಿದರು.ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಮಂಜುಳಾಶ್ರೀ ಶೆಣೈ ಸ್ವಾಗತಿಸಿ, ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮೀನು ಮತ್ತು ಸಿಹಿ ನೀರಿನ ಮುತ್ತು ಕೃಷಿಯ ಬಗ್ಗೆ ತರಬೇತಿದಾರರಾದ ನವೀನ್ ಐವರ್ನಾಡು ವಿಡಿಯೋ ಪ್ರದರ್ಶನದ ಮೂಲಕ ವಿವರವಾದ ಮಾಹಿತಿ ನೀಡಿದರು. ಬೆಳ್ತಂಗಡಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಇಲಾಖೆಯ ಸೌಲಭ್ಯಗಳ ಬಗ್ಗೆ ಹಾಗೂ ಕೃಷಿಕರ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿ, ಬೆಳಾಲಿನ ಜನರಿಗೆ ಇಲಾಖೆಯೊಂದಿಗೆ ಇರುವ ನಿಕಟ ಸಂಪರ್ಕದ ಬಗ್ಗೆ ತಿಳಿಸಿದರು.

ಅತಿಥಿಗಳಾಗಿದ್ದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಮಧುರ ಹಾಗೂ ಬೆಳಾಲು C. A. ಬ್ಯಾಂಕಿನ CEO ನಾರಾಯಣ ಗೌಡರು ಕಾರ್ಯಾಗಾರದ ಕುರಿತು ತಮ್ಮ ಅನಿಸಿಕೆ ಹೇಳಿದರು.

ಕಾರ್ಯಾಗಾರದ ಮುಖ್ಯ ಸಂಯೋಜಕರಾಗಿದ್ದ ಬೆಳಾಲು C. A. ಬ್ಯಾಂಕಿನ ನಿರ್ದೇಶಕ ಸುಲೈಮಾನ್ ಬೆಳಾಲು ಕಾರ್ಯಕ್ರಮವನ್ನು ನಿರೂಪಿಸಿದರು.

ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಕೃಷಿಕರು ಅಲ್ಲದೆ ಬೇರೆ ಬೇರೆ ಊರುಗಳಿಂದ ರೈತರು ಭಾಗವಹಿಸಿದ್ದರು. ಮಂಜುಳಶ್ರೀ ಧನ್ಯವಾದ ಸಲ್ಲಿಸಿದರು.

Related posts

ಮಡಂತ್ಯಾರು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮೂಡಬಿದಿರೆ: ನ್ಯೂ ವೈಬ್ರೆಂಟ್ ಪದವಿಪೂರ್ವ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

Suddi Udaya

ಪಿಎಂ ಜನ್ ಮನ್ ಯೋಜನೆಯಡಿ ದ.ಕ. ಜಿಲ್ಲೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ರೂ. 10.32 ಕೋಟಿ ಅನುದಾನ ಬಿಡುಗಡೆ: ಕ್ಯಾ. ಬ್ರಿಜೇಶ್ ಚೌಟ

Suddi Udaya

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

Suddi Udaya

ನಾವೂರು: ರಸ್ತೆ ಅವಘಡದಲ್ಲಿ ಮೃತಪಟ್ಟ ಚಂದ್ರಹಾಸ್ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

Suddi Udaya

ಸಹಾಯಕ ಪ್ರಾಧ್ಯಾಪಕಿ ಗೀತಾ ಏ.ಜೆ ರವರಿಗೆ ಪಿಎಚ್ ಡಿ ಪದವಿ

Suddi Udaya
error: Content is protected !!