22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಕೊಯ್ಯೂರು: ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೊಯ್ಯೂರು ದೇವಸ್ಥಾನ ಇವರು ಕಳೆದ ಸುಮಾರು ವರುಷಗಳಿಂದ ಭಜನಾ ಮಂಡಳಿಯ ನಿತ್ಯ ಭಜನೆಗೆ ಬರುವಂತಹ ದ್ವಿತೀಯ ಪಿಯುಸಿ ಹಾಗೂ ಹತ್ತನೇ ತರಗತಿಯ ಸದಸ್ಯ ಮಕ್ಕಳಿಗೆ 2025-2026ನೇ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಅಂಕಗಳನ್ನು ಪಡೆದ ಒಟ್ಟು 08 ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಿಸಲಾಯಿತು.

ಅದರಂತೆ 2025-2026ರ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನದೊಂದಿಗೆ 600 ಅಂಕಗಳಲ್ಲಿ 597 ಅಂಕಗಳನ್ನು ಪಡೆದ ಅಕ್ಷಯ್ ಕೋರ್ಯಾರು, 600 ಅಂಕಗಳಲ್ಲಿ 533 ಅಂಕಗಳನ್ನು ಪಡೆದ ತೀರ್ಥೆಶ್ ಮಲೆಕಿನ್ಯಾಜೆ,600 ಅಂಕಗಳಲ್ಲಿ 460ಅಂಕಗಳನ್ನು ಪಡೆದ ಪೂರ್ಣೇಶ್ ಗುರ್ಬೋಟ್ಟು, 600 ಅಂಕಗಳಲ್ಲಿ 512 ಅಂಕಗಳನ್ನು ಪಡೆದ ಅಭಿಜಿತ್ ಶ್ರೀ ದೇವಿ ಕೃಪಾ ಕೊಯ್ಯೂರು ದೇವಸ್ಥಾನದ ಬಳಿ, 600 ಅಂಕಗಳಲ್ಲಿ 524 ಅಂಕಗಳನ್ನು ಪಡೆದ ಸ್ವರುಣ್ ಕಕ್ಯಾನ,600 ಅಂಕಗಳಲ್ಲಿ 547 ಅಂಕಗಳನ್ನು ಪಡೆದ ಸುಮಂತ್ ಕಿನ್ಯಾಜೆ,ಹಾಗೆಯೇ SSLC ವಿಭಾಗದಲ್ಲಿ 625 ಅಂಕಗಳಲ್ಲಿ 539 ಅಂಕಗಳನ್ನು ಪಡೆದ ಭಾಗ್ಯಲಕ್ಷ್ಮಿ ಕಿನ್ಯಾಜೆ, 625 ಅಂಕಗಳಲ್ಲಿ 545 ಅಂಕಗಳನ್ನು ಪಡೆದ ಧೀರಜ್ ಶರ್ಮಾ ಹೇಮಶ್ರೀ ನಿಲಯ.ಇವರುಗಳನ್ನು ಭಜನಾ ಮಂಡಳಿಯ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ ಜಾಲ್ನಪ್ಪು, ಭಜನಾ ಮಂಡಳಿಯ ಗೌರವಧ್ಯಕ್ಷರು,. ದೇವಸ್ಥಾನದ ಪ್ರಧಾನ ಅರ್ಚಕರಾದ ಅಶೋಕ್ ಕುಮಾರ್ ಭಾಂಗಿಣ್ಣಾಯ, ಆಡಳಿತ ಮೊಕ್ತೇಸರರಾದ ಹರಿಶ್ಚಂದ್ರ ಬಲ್ಲಾಳ್, ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಕಾಲೇಜು ಪ್ರಾಂಶುಪಾಲರಾದ ಮೋಹನ್ ಗೌಡ ಭಂಡಾರಿಕೊಡಿ ಮತ್ತು ಭಜನಾ ಮಂಡಳಿಯ ಸರ್ವಸದಸ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.

ನಂತರ ಕಾರ್ಯಕ್ರಮಕ್ಕೆ ಶುಭಶೀರ್ವಾದದ ನುಡಿಯನ್ನು ಆಡಿದ ಭಜನಾ ಮಂಡಳಿಯ ಗೌರವಧ್ಯಕ್ಷ ದೇವಸ್ಥಾನದ ಪ್ರಧಾನ ಅರ್ಚಕ ಅಶೋಕ್ ಕುಮಾರ್ ಭಾಂಗಿಣ್ಣಾಯರು, ಮಕ್ಕಳು ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಾಧನವಾಗುತ್ತ ವಿದ್ಯೆಯ ಜೊತೆ ಜೊತೆಗೆ ಭಜನಾ ಕ್ಷೇತ್ರದಲ್ಲಿಯೂ ಕೂಡ ಸಾಧನೆಯನ್ನು ಮಾಡುತ್ತಾ ನಮ್ಮ ಸಂಸ್ಕೃತಿಯನ್ನು ಎಲ್ಲಿಯೂ ಕೂಡ ತಲೆಬಾಗದಂತೆ ನೋಡಿಕೊಳ್ಳುತ್ತಾ ದುಶ್ಚಟಗಳಿಗೆ ಬಲಿಯಾಗದೇ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ ಕೆಲಸವನ್ನು ಮಾಡುವಂತೆ ಶುಭಶಿರ್ವಾದದ ನುಡಿಯನ್ನಾಡಿದರು.

ಮುಖ್ಯ ಅತಿಥಿಗಳಾಗಿ ಕೊಯ್ಯೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಕುಮಾರ್ ಭಂಡಾರಿಕೋಡಿ ಇವರು ಜೀವನಕ್ಕೆ ಕೇವಲ ವಿದ್ಯೆ ಮಾತ್ರವಲ್ಲದೆ ಭಜನಾ ಶಿಕ್ಷಣವು ಅತ್ಯಗತ್ಯವಾದ ಒಂದು ಮೂಲ. ಭಜನೆಯಿಂದ ಬದಲಾವಣೆ ಎನ್ನುವ ಮೂಲಮಂತ್ರದಿಂದ ನಮ್ಮ ಸಂಸ್ಕೃತಿಯ ಆಚಾರ ವಿಚಾರವನ್ನು ದೇಶದೆಲ್ಲೆಡೇ ಪಸರಿಸುವ ಕಾರ್ಯ ಭಜನೆಯಿಂದ ಆಗುತ್ತಿದೆ ಎನ್ನಲು ತುಂಬಾ ನಮೆಗೆಲ್ಲ ಖುಷಿಯಿದೆ ಮತ್ತು ನಿಮ್ಮ ಇಂತಹ ಸಾಧನೆಯ ಹಿಂದಿನ ಕಠಿಣ ಪರಿಶ್ರಮ ಇನ್ನುಳಿದ ಮಕ್ಕಳಿಗೆ ಮಾದರಿಯಾಗಿ ಪ್ರೇರಣೆ ದೊರಕಲಿ ಜೀವನದಲ್ಲಿ ಎಲ್ಲವೂ ಇದ್ದರೆ ಮಾತ್ರ ನಮ್ಮ ಜೀವನ ಚಕ್ರ ನಡೆಯಲು ಸಾಧ್ಯ ಮತ್ತು ವಿದ್ಯಾರ್ಥಿಗಳು ಯಾವುದೇ ರೀತಿಯ ಅಹಿತಕರ ಘಟನೆಗೆ ಒತ್ತು ಕೊಡದೆ ಕೇವಲ ಸಾಮಾಜಿಕ ಬದ್ಧತೆಯಲ್ಲಿ ಕೆಲಸ ಮಾಡಿದರೆ ನಿಮ್ಮ ಪ್ರಗತಿ ಖಂಡಿತ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದರೆ ಮುಂದೆ ಗುರಿ ಇರಬೇಕು ಹಿಂದೆ ಗುರುವಿರಬೇಕು ಅದು ಎರಡು ಕೂಡ ನಿಮಗೆ ಈ ಭಜನೆಯಿಂದ ಲಭಿಸಿದೆ. ಭಜನೆಯೊಂದಿಗೆ ಭಜನೆಗೆ ಬಂದಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಕೂಡ ಉತ್ತೇಜನ ನೀಡಿ ಪ್ರೋತ್ಸಾಹಿಸುತ್ತಿರುವುದು ಈ ಭಜನಾ ಮಂಡಳಿಯ ಸಂಘಟಕರ ಕಾರ್ಯ ಅದ್ಭುತವಾಗಿದೆ ಎನ್ನುವ ಹಿತನುಡಿಯನ್ನಾಡಿದರು.

ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮೋಕ್ತೆಶರರಾದ ಕೆ.ಬಿ ಹರಿಶ್ಚಂದ್ರ ಬಲ್ಲಾಳ್, ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ “ಮಿಥಿಲಾ” ಜಾಲ್ನಪ್ಪು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಭಜನಾ ಮಂಡಳಿಯ ಪುಟಾಣಿ ಮಕ್ಕಳಾದ ಕು.ತೃಷಾ ಮತ್ತು ಕು.ಚೈತನ್ಯ ಪ್ರಾರ್ಥನೆ ಮಾಡುವ ಮೂಲಕ
ಕಾರ್ಯಕ್ರಮದ ಸ್ವಾಗತ ಮತ್ತು ಮಕ್ಕಳ ಸನ್ಮಾನ ಪತ್ರವನ್ನು ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ “ಮಿಥಿಲಾ” ಜಾಲ್ನಪ್ಪು ಇವರು ವಾಚಿಸಿದರು. ಭಜನಾ ಮಂಡಳಿಯ ಸದಸ್ಯೆ ಕು.ಪ್ರೇಕ್ಷಾ ಗುರ್ಬೋಟ್ಟು ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂಡಳಿಯ ಸದಸ್ಯರಾದ ಭಾಸ್ಕರ್ ಎಸ್.ಕೋಟ್ಯಾನ್ ವಂದಿಸಿದರು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಕಾರ್ಯದರ್ಶಿ ನಾರಾಯಣ ಪೂಜಾರಿ ಗುರ್ಬೋಟ್ಟು, ಕೋಶಾಧಿಕಾರಿ ಡೀಕಯ್ಯ ಗೌಡ ಮಲೆ ಕಿನ್ಯಾಜೆ ಹಾಗೂ ಎರಡೂ ಭಜನಾ ಮಂಡಳಿಯ ಸರ್ವ ಸದಸ್ಯರು ಮತ್ತು ದೇವಸ್ಥಾನದ ಶ್ರೀ ದೇವಿಯ ಭಕ್ತವೃಂದದವರು ಸಹಕರಿಸಿದರು.

Related posts

ತುಮಕೂರು ಮೂವರ ಹತ್ಯೆ ಪ್ರಕರಣ: ವಕ್ಫ್ ಜಿಲ್ಲಾ ಸಲಹಾ ಸಮಿತಿ ಪದಾಧಿಕಾರಿಗಳು, ಕಾಜೂರು ಆಡಳಿತ ಸಮಿತಿ ಭೇಟಿ: ಸಾಂತ್ವಾನ ಮತ್ತು ಸಹಾಯದ ಭರವಸೆ

Suddi Udaya

ತಣ್ಣೀರುಪಂತ: ಮುಂದಿಲ ನಿವಾಸಿ ಸೋಮವಾತಿ ನಿಧನ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಇಬ್ಬರಿಗೆ ಗೇಟ್ ಪಾಸ್: ನೂತನ ನಗರ ಸಮಿತಿಯ ಅಧ್ಯಕ್ಷರಾಗಿ ಸತೀಶ್ ಕೆ. ಕಾಶಿಪಟ್ಣ, ಗ್ರಾಮೀಣ ಸಮಿತಿಯ ಅಧ್ಯಕ್ಷರಾಗಿ ನಾಗೇಶ್ ಕುಮಾರ್ ಗೌಡ ನೇಮಕ

Suddi Udaya

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೀಜಾಡಿಯ ಯೋಧ ಅನೂಪ್ ಪೂಜಾರಿಯವರ ಶವ ಪೆಟ್ಟಿಗೆಗೆ ಹೆಗಲು ಕೊಟ್ಟ ಸಂಸದ ಕ್ಯಾ| ಬ್ರಿಜೇಶ್ ಚೌಟ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!