28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪೆರ್ಲ ಬೈಪಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ

ಬಂದಾರು: ಪೆರ್ಲ ಬೈಪಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ ಕಾರ್ಯಕ್ರಮವು ಬ್ರಹ್ಮಶ್ರೀ ವೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ನೀಲೇಶ್ವರ ಜಗದೀಶ ಜೋಯಿಸರ ನೇತೃತ್ವದಲ್ಲಿ ದೇವಸ್ಥಾನದ ವಠಾರದಲ್ಲಿ ಸೆ.7 ಮತ್ತು 8 ರಂದು ಜರುಗಿತು.

ಕಳೆದ 12 ವರ್ಷಗಳ ಹಿಂದೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆದಿದ್ದು ಮುಂದಿನ ವರ್ಷ ಪುನರ್ ಪ್ರತಿಷ್ಠಾ ಅಷ್ಟಬಂಧ ನಡೆಯಲಿದ್ದು, ಇದರ ಅಂಗವಾಗಿ ಪ್ರಶ್ನಾಚಿಂತನೆ ನಡೆಯಿತು. ಪ್ರಸಾದ್ ಜೋತಿಷ್ಯ ಅನುವಾದಕರು, ಅನಂತೋಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತರಾಮ ಶಬರಾಯ, ಸ್ಥಳೀಯ ಜೋತಿಷ್ಯರಾದ ಸತ್ಯ ಶಂಕರ ಮಯ್ಯಬೈಪಾಡಿ ದೇವಸ್ಥಾನದ ಅರ್ಚಕರಾದ ಪ್ರಶಾಂತ್ ಹೊಳ್ಳ ಉಪಸ್ಥಿತರಿದ್ದು ಸಹಕರಿಸಿದರು.

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತಸರರಾದ ಕುಕ್ಕಪ್ಪ ಗೌಡ ತಾರೆಕೆರೆ, ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು ,ಕಾರ್ಯದರ್ಶಿ ಉಮೇಶ್ ಗೌಡ , ಸದಸ್ಯರಾದ ರಮೇಶ್ ಗೌಡ ಅಡ್ರೆಂಕಿಮಜಲು, ದೇಜಪ್ಪ ಗೌಡ ಪಯ್ಯಾಡಿ, ಲಕ್ಷ್ಮೀಕಾಂತ ಕೀಲಾರು, ದಿನೇಶ್ ನಾಯ್ಕ ಭಾರತಿ ಬಾಲಂಪಾಡಿ, ಯಶೋಧ ಅಡ್ಡಾರು, ಹರೀಶ್ ಗೌಡ ಕೋಡಿಮಜಲು, ನಿರ್ಮಲ್ ಕುಮಾರ್, ಮೋನಪ್ಪ ಗೌಡ ನೆಲ್ಲಿಂಗೆರು, ಮಾಜಿ ಅಧ್ಯಕ್ಷ ಹೊನ್ನಪ್ಪ ಗೌಡ ಸೋನಕುಮೇರು, ಕಾರ್ಯದರ್ಶಿ ಹರೀಶ್ ಗೌಡ ಪರಪಾಜೆ ಕೇಶವ ಗೌಡ ಕೊಂಗುಜೆ, ಹಿರಿಯರಾದ ಧರ್ಣಪ್ಪ ಗೌಡ ಬಾನಡ್ಕ ಹೊನ್ನಪ್ಪ ಗೌಡ ಸೋನಕುಮೇರು, ಭಜನಾ ಮಂಡಳಿ ಅಧ್ಯಕ್ಷ ಲಕ್ಷ್ಮಣ ಗೌಡ ಪಲಸದಕೋಡಿ, ಮಹಿಳಾ ಸಮಿತಿ ಸದಸ್ಯೆ ರಾಜೀವಿ , ಭಜನಾ ಮಂಡಳಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ಡಿ.2: ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya

ಬದ್ಯಾರುನಲ್ಲಿ ಕಾರುಗಳ ನಡುವೆ ಅಪಘಾತ

Suddi Udaya

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಶೈಕ್ಷಣಿಕ ಪ್ರಗತಿ- ಮಿಂಚಿನ ಸಂಚಾರ ಇಲಾಖಾ ತಂಡ ಭೇಟಿ

Suddi Udaya

ಭಾರತೀಯ ಜೈನ್‌ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಮಾಜ ಉಜಿರೆ ಸಹಯೋಗದಲ್ಲಿ “ಆಹಾರೋತ್ಸವ ಮತ್ತು ಪ್ರತಿಭಾ ಪುರಸ್ಕಾರ”

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಏಪ೯ಡಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನದ ಉದ್ಘಾಟನೆ

Suddi Udaya

ನಾವೂರು ದೈವ ಕ್ಷೇತ್ರ ಬಡೆಕ್ಕಾವು ಗುತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Suddi Udaya
error: Content is protected !!