September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೋಳಿಯಂಗಡಿ ಮಿನ್ಹಾಜುಲ್ ಹುದಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ವಿವಾಹ ಕಾರ್ಯಕ್ರಮ

ಬೆಳ್ತಂಗಡಿ: ವೇಣೂರು ಸಮೀಪದ ಗೋಳಿಯಂಗಡಿ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಮಿನ್ಹಾಜುಲ್ ಹುದಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸೆ. 24 ರಂದು ಉಳ್ತೂರು ಮಸೀದಿಯಲ್ಲಿ ಅನಾಥ ಹುಡುಗಿಯ ಉಚಿತ ವಿವಾಹ ಕಾರ್ಯಕ್ರಮ ಸಾಂಪ್ರದಾಯ ಬದ್ಧವಾಗಿ ನೆರವೇರಿತು.

ನಿಖಾಹ್ ಮತ್ತು ದುಆ ನೇತೃತ್ವವನ್ನು ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಉಪಖಾಝಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ವಹಿಸಿದ್ದರು. ಉಳ್ತೂರು ಮುದರಿಸ್ ಮೌಲಾನಾ ಮುಹಮ್ಮದ್ ಫಾಳಿಲಿ ಅಲ್ ಕಾಮಿಲಿ ಮುಖ್ಯ ಪ್ರಭಾಷಣ ನಡೆಸಿದರು. ಸಿರಾಜುದ್ದೀನ್ ಝುಹ್ರಿ ಉಳ್ತೂರು, ಸಮಿತಿ ಅಧ್ಯಕ್ಷ ಬದ್ರುದ್ದೀನ್ ಲತೀಫಿ ಸೇರಿದಂತೆ ಹಲವು ಉಲಮಾ ಉಮರಾಗಳು ಊರ ಪರ ಊರಿನ ಗಣ್ಯರು ಭಾಗವಹಿಸಿದ್ದರು.
ಉಳ್ತೂರು ಜಮಾಅತ್ ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ ಉಳ್ತೂರು ಸ್ವಾಗತಿಸಿದರು.
ಮಿನ್ಹಾಜ್ ಸಮಿತಿಯ ಚೇರ್ಮೆನ್ ಬದ್ರುದ್ದೀನ್ ಲತೀಫಿ ಪ್ರಸ್ತಾವನೆಗೈದರು. ಮುಂದೆಯೂ ಸಮಿತಿ ವತಿಯಿಂದ ಇಂತಹಾ ಜೀವ ಕಾರುಣ್ಯ ಕಾರ್ಯಕ್ರಮ ಗಳನ್ಮು ದಾನಿಗಳ ಸಹಕಾರದೊಂದಿಗೆ ನಡೆಸುವ ಬಗ್ಗೆ ಪಣ ತೊಡಲಾಯಿತು.

Related posts

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಅರಸಿನಮಕ್ಕಿ: ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘದ ವಾರ್ಷಿಕ ಮಹಾಸಭೆ

Suddi Udaya

ಕನ್ಯಾಡಿ ಹಾಲು ಉತ್ಪಾದಕರ ಮಹಿಳಾ ಸಂಘ: ಅಧ್ಯಕ್ಷರಾಗಿ ಸೌಮ್ಯಲತಾ, ಉಪಾಧ್ಯಕ್ಷರಾಗಿ ಸವಿತಾ

Suddi Udaya

ಕಾಂತಾರ ಖ್ಯಾತಿಯ ಡಿವೈನ್‌ಸ್ಟಾರ್ ರಿಷಬ್ ಶೆಟ್ಟಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ಪಾಲೇದು ಗ್ರಾಮಸ್ಥರ ಸುಭಿಕ್ಷೆಗಾಗಿ ಪ್ರಶ್ನಾ ಚಿಂತನೆ

Suddi Udaya

ಬೆಳ್ತಂಗಡಿ ಪವರ್ ಆನ್ ಸಂಸ್ಥೆಯಲ್ಲಿ 78ನೇಯ ಸಂಭ್ರಮದ ಸ್ವಾತಂತ್ರ್ಯೋತ್ಸವ: ನಿವೃತ್ತ ಸೈನಿಕರಾದ ಗಣೇಶ್ ಬಿ.ಎಲ್ ಹಾಗೂ ಶಿವ ಕುಮಾರ್ ರವರಿಗೆ ಗೌರವಾರ್ಪಣೆ

Suddi Udaya
error: Content is protected !!