April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ತಾಲೂಕು ದಸರಾ ಕ್ರೀಡಾಕೂಟ: ಭಾರತ ಕ್ರೀಡೆಯಲ್ಲೂ ಬಲಿಷ್ಠ ರಾಷ್ಟ್ರವಾಗಿ ಮೂಡಿ ಬರುತ್ತಿದೆ: ಡಾ. ಸತೀಶ್ಚಂದ್ರ

ಬೆಳ್ತಂಗಡಿ: ದಕ ಜಿಲ್ಲಾಡಳಿತ, ದಕಜಿಪಂ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಪಂ ಬೆಳ್ತಂಗಡಿ, ಗ್ರಾಪಂ ಉಜಿರೆ, ಶಾಲಾ ಶಿಕ್ಷಣ ಇಲಾಖೆ,ಎಸ್ ಡಿಎಂ ಸ್ವಾಯತ್ತ ಕಾಲೇಜು ಉಜಿರೆ, ಯುವಜನ ಒಕ್ಕೂಟ,ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ದಸರಾ ಕ್ರೀಡಾಕೂಟವು ಉಜಿರೆಯ ಎಸ್ ಡಿಎಂ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸೆ.28 ರಂದು ಜರಗಿತು.


ಕ್ರೀಡಾಕೂಟವನ್ನು ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಉದ್ಘಾಟಿಸಿ ಮಾತನಾಡಿ “ಇತ್ತೀಚಿನ ವರ್ಷಗಳಲ್ಲಿ ಒಲಂಪಿಕ್ಸ್ ಸೇರಿದಂತೆ ವಿಶ್ವದ ಕ್ರೀಡಾಕೂಟಗಳಲ್ಲಿ ಭಾರತವು ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರ. ಭಾರತವು ಸಾಮಾಜಿಕವಾಗಿ ಆರ್ಥಿಕ ವಾಗಿ ಪ್ರಬಲ ರಾಷ್ಟ್ರ ಎಂದು ಗುರುತಿಸಲ್ಪಟ್ಟಿದ್ದು ಕ್ರೀಡೆಯಲ್ಲೂ ಬಲಿಷ್ಠ ರಾಷ್ಟ್ರವಾಗಿ ಮೂಡಿ ಬರುತ್ತಿದೆ ಎಂದರು.


ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾ ಕಿರಣ ಕಾರಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ “ಇಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರಕ್ಕೂ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ಶ್ಲಾಘನೀಯ ಯುವಜನರ ಸಾಧನೆ, ಪ್ರತಿಭಾ ಪ್ರೋತ್ಸಾಹಕ್ಕೆ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ. ಅವಕಾಶಗಳನ್ನು ಬಳಸಿಕೊಂಡು ಮುನ್ನಡೆದರೆ ಯಶಸ್ಸು ಸಾಧ್ಯ” ಎಂದರು.


ತಾಲೂಕು ದೈಹಿಕ ಶಿಕ್ಷಣ ಪರಿವಿಕ್ಷಣಾಧಿಕಾರಿ ಸುಜಯಾ,ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ ಬಿ., ಎಸ್.ಡಿ.ಎಂನ ಕ್ರೀಡಾ ಕಾರ್ಯದರ್ಶಿ ರಮೇಶ್, ರವಿ ವೈ.ನಾಯಕ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಾನಂದ ರಾವ್,ತಾಲೂಕು ಯುವಜನ ಒಕ್ಕೂಟದ ನಿರ್ದೇಶಕ ಚಿದಾನಂದ ಇಡ್ಯಾ, ತಾಲೂಕು ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್ ಉಪಸ್ಥಿತರಿದ್ದರು.


ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಸಂಚಾಲಕ ನಾಮದೇವ್ ರಾವ್ ನಿರೂಪಿಸಿದರು. ಸಂಯೋಜಕ ಸಾಂತಪ್ಪ ಕಲ್ಮಂಜ ಸ್ವಾಗತಿಸಿದರು. ಶಿಕ್ಷಕ ಶೀನಪ್ಪ ಗೌಡ ವಂದಿಸಿದರು.

Related posts

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಶ್ರೀ ಕ್ಷೇತ್ರ ಸೌತಡ್ಕಕ್ಕೆ ಹಸಿರು ಕಾಣಿಕೆ ಸಮರ್ಪಣೆ

Suddi Udaya

ಸುಲ್ಕೇರಿಮೊಗ್ರು: ದರ್ಖಾಸು ಐರಿನ್ ಡಿಸೋಜರವರ ಮನೆ ಹಿಂಬದಿ ಗುಡ್ಡ ಕುಸಿತ: ಗ್ರಾ.ಪಂ. ಅಧಿಕಾರಿಗಳ ಭೇಟಿ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಘಟಕ : ಮಹಿಳಾ ಪ್ರಕಾರದ ವತಿಯಿಂದ ಮಹಿಳಾ ದಿನಾಚರಣೆಯ ಕಾರ್ಯಕ್ರಮ

Suddi Udaya

ದಿ| ಗಿರಿಜ ಕೋಂಗುಜೆ ಯವರ ಉತ್ತರ ಕ್ರಿಯೆ ಕಾರ್ಯಕ್ರಮ

Suddi Udaya

ಬೆಳಾಲು: ದಿ| ದಿನೇಶ್ ಪೂಜಾರಿ ಉಪ್ಪಾರು ಸ್ಮರಣಾರ್ಥವಾಗಿ ನಿರ್ಮಾಣಗೊಂಡಿರುವ ಅನಂತೋಡಿ ವೃತ್ತ ಲೋಕಾರ್ಪಣೆ

Suddi Udaya

ನಿವೃತ್ತ ಯೋಧ ಫ್ರಾನ್ಸಿಸ್ ರವರಿಗೆ ಉಜಿರೆ ಕೆಎಸ್ಎಂಸಿಎ ಸಂಘಟನೆ ಮತ್ತು ಊರ ಗಣ್ಯರಿಂದ ಭವ್ಯ ಸ್ವಾಗತ

Suddi Udaya
error: Content is protected !!