30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸಂಗಡಿ ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ನನ್ನ ಗಿಡ ನನ್ನ ಮರ’ ಮತ್ತು ‘ನನ್ನ ನೆಲ ನನ್ನ ಜಲ’ ವಿನೂತನ ಸಪ್ತಾಹ

ಹೊಸಂಗಡಿ: ಗ್ರಾಮ ಪಂಚಾಯತ್ ಹೊಸಂಗಡಿ, ಅರಣ್ಯ ಇಲಾಖೆ ವೇಣೂರು, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಟಾನ ಹೊಸಂಗಡಿ, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ, ಇನ್ನರ್ ವೀಲ್ ಕ್ಲಬ್ ಮೂಡಬಿದ್ರೆ, ಫ್ರೆಂಡ್ಸ್ ಕ್ಲಬ್ ಹೊಸಂಗಡಿ, ಆಳ್ವಾಸ್ ಸಮಾಜ ಕಾರ್ಯ ಕಾಲೇಜು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಗಳು, ಅಂಗನವಾಡಿಗಳ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ನೆಲ ಜಲ ಸಂರಕ್ಷಣೆಗಾಗಿ ನನ್ನ ಗಿಡ ನನ್ನ ಮರ ಮತ್ತು ನನ್ನ ನೆಲ ನನ್ನ ಜಲ ಎಂಬ ವಿನೂತನ ಸಪ್ತಾಹ ಕಾರ್ಯಕ್ರಮಕ್ಕೆ ಸೆ 26 ರಂದು ಚಾಲನೆ ನೀಡಲಾಯಿತು.


ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಚಾಲನೆ ನೀಡಿ ನೆಲ ಜಲ ಸಂರಕ್ಷಣೆಗೆ ಹೊಸಂಗಡಿ ಪಂಚಾಯತ್ ನ ಕ್ರಮವನ್ನು ಶ್ಲಾಘಿಸಿದರು ಮತ್ತು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಅಂತರ್ಜಲ ವೃದ್ಧಿಗಾಗಿ ಮತ್ತು ಶಾಶ್ವತ ನೀರಾವರಿಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು. ಯುವಕರು ಸಮಗ್ರ ಕೃಷಿ ಮಾಡುವಂತೆ ಸಲಹೆ ನೀಡಿದರು. ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಜಗದೀಶ್ ಹೆಗ್ಡೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವೇಣೂರು ವಲಯ ಅರಣ್ಯಾಧಿಕಾರಿಗಳು ಸುಬ್ರಹ್ಮಣ್ಯ ಆಚಾರ್ ಮಾತನಾಡಿ ಹೊಸಂಗಡಿ ಗ್ರಾಮ ಪಂಚಾಯತ್ ನ ಮಾದರಿ ಕಾರ್ಯಕ್ರಮಗಳಿಗೆ ಪೂರ್ಣ ಸಹಕಾರ ನೀಡುವ ಭರವಸೆ ಇತ್ತರು. ರೋಟರಿ ಜಿಲ್ಲೆ 3181 ನ ಸಹಾಯಕ ಗವರ್ನರ್ ರೋ. ರಾಘವೇಂದ್ರ ಭಟ್ ನೀರಿನ ಮಿತಬಳಕೆ ಮತ್ತು ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.


ಮೂಡಬಿದಿರೆ ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಸಂತೋಷ್ ಕುಮಾರ್ ಮಾತನಾಡಿ ನೆಲ ಜಲ ಸಂರಕ್ಷಣೆಯ ಔಚಿತ್ಯದ ಬಗ್ಗೆ ವಿವರಿಸಿದರು.


ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರಾದ ಸರಿತಾ ಆಶೀರ್ವಾದ್ ರವರು ಸಪ್ತಾಹಕ್ಕೆ ಶುಭ ಹಾರೈಸಿದರು.
ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶಾಂತಾ, ಪಂಚಾಯತ್ ಸದಸ್ಯರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮದ ರೈತರು ಭಾಗವಹಿಸಿದ್ದರು.


ಪಂಚಾಯತ್ ಸದಸ್ಯರಾದ ಕರುಣಾಕರ ಪೂಜಾರಿ ಸ್ವಾಗತಿಸಿದರು. ಸದಸ್ಯರಾದ ಹರಿಪ್ರಸಾದ್ ಸಪ್ತಾಹದ ಉದ್ದೇಶ ಮತ್ತು ಔಚಿತ್ಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


ಎಲ್ಲ ರೈತರಿಗೆ ಸಾಂಕೇತಿಕವಾಗಿ ಗಿಡಗಳನ್ನು ವಿತರಿಸಲಾಯಿತು.
ಸೆ.26 ರಿಂದ ಅ. 2 ರವರಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಲೆಗಳು, ಅಂಗನವಾಡಿಗಳ, ಸಾರ್ವಜನಿಕ ಸ್ಥಳಗಳಲ್ಲಿ ನೆಲ ಜಲ ಸಂರಕ್ಷಣೆಗಾಗಿ ಗಿಡಗಳ ಪುನಶ್ಚೇತನ, ಗಿಡ ನೆಡುವುದು, ಅರಿವು ಕಾರ್ಯಕ್ರಮಗಳು, ಮಕ್ಕಳಿಗೆ ಸ್ಪರ್ಧೆಗಳು, ಸ್ವಚ್ಛತಾ ಕಾರ್ಯಕ್ರಮಗಳು, ಯುವಕರಿಗೆ, ಮಹಿಳೆಯರಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘ ಸಂಸ್ಥೆಗಳು ಹಾಗೂ ಜನ ರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮ ರೂಪಿಸಲಾಗಿದೆ. ಅ. 2 ರಂದು ಗಾಂಧೀ ಜಯಂತಿ ಯಂದು ಪೇರಿ ಯಲ್ಲಿರುವ ಪ್ರೇರಣಾ ಸೌಧದಲ್ಲಿ ನಡೆಯುವ ವಿಶೇಷ ಗ್ರಾಮಸಭೆಯೊಂದಿಗೆ ಸಪ್ತಾಹ ಸಂಪನ್ನಗೊಳ್ಳಲಿದೆ.

Related posts

ಲಾಯಿಲ: ಬಜಕ್ರೆಸಾಲು ಸೇತುವೆ ಅಡಿ ಎರಡು ಕಾಣಿಕೆ ಡಬ್ಬಗಳು ಒಡೆದ ರೀತಿಯಲ್ಲಿ ಪತ್ತೆ: ಡಬ್ಬಗಳನ್ನು ಒಡೆದು ಹಣ ಕಳವು ಗೈದಿರುವ ಶಂಕೆ

Suddi Udaya

ಭಾರಿ ಸಿಡಿಲು ಮಳೆ: ಕೊಯ್ಯೂರು ತೆಂಗಿನ ಮರಕ್ಕೆ ಸಿಡಿಲು ಬಡಿದು ಉರಿದ ಬೆಂಕಿ

Suddi Udaya

ಕಳೆಂಜ: ನಡುಜಾರು ಸ.ಕಿ.ಪ್ರಾ. ಶಾಲಾ ಮಕ್ಕಳಿಗೆ ರಾಜೇಶ್ ನಿಡ್ಡಾಜೆ ಯವರಿಂದ ಸಮವಸ್ತ್ರ ವಿತರಣೆ

Suddi Udaya

ನಾಲ್ಕೂರು: ಯೈಕುರಿಯಲ್ಲಿ ಹಾಳೆತಟ್ಟೆ ಘಟಕ ಶುಭಾರಂಭ

Suddi Udaya

ಕೊಯ್ಯೂರು ಗ್ರಾ.ಪಂ. ನ ಗ್ರಾಮ ಸಭೆ

Suddi Udaya

ಎಸ್ .ಡಿ.ಎಂ. ಶಿಕ್ಷಣ ಸಂಸ್ಥೆ ವತಿಯಿಂದ ಚಾಲಕರಿಗೆ ಕಾರ್ಯಾಗಾರ

Suddi Udaya
error: Content is protected !!