September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿವರದಿ

ಲಾಯಿಲ: ಸ್ವಾತಂತ್ರ ವೀರ ಭಗತ್ ಸಿಂಗ್ ಇವರ 116 ನೇ ಜನುಮ ದಿನಾಚರಣೆ

ಲಾಯಿಲ: ಸ್ವಾತಂತ್ರ ವೀರ ಭಗತ್ ಸಿಂಗ್ ಇವರ 116 ನೇ ಜನುಮ ದಿನಾಚರಣೆಯನ್ನು ಲಾಯಿಲ “ಭಗತ್ ಸಿಂಗ್” ವೃತ್ತದಲ್ಲಿ ಆಚರಿಸಲಾಯಿತು. ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರನ್ನು ಸ್ಮರಿಸಲಾಯಿತು.

ಲಾಯಿಲ ಗ್ರಾ.ಪಂ. ಸದಸ್ಯರಾದ ಅರವಿಂದ್ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಯೋಜನಾಧಿಕಾರಿ ರಾಮ್ ಕುಮಾರ್ ಮರ್ನಾಡ್ ಇವರು ಭಗತ್ ಸಿಂಗ್ ಇವರ ಜೀವನ ಚರಿತ್ರೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಲಾಯಿಲ ಜಂಕ್ಷನ್ ನಲ್ಲಿ ವೃತ್ತ ನಿರ್ಮಾಣ ಮಾಡಿದ ಹಿರಿಯರನ್ನು ಗೌರವಿಸಿ ಭಗತ್ ಸಿಂಗ್ ಇವರ ಜೀವನವನ್ನು ಆದರ್ಶವಾಗಿ ತೆಗೆದುಕೊಂಡು ನಾವು ಸಾಗಬೇಕು ಎಂದು ಜಗದೀಶ್ ಕನ್ನಾಜೆ ತಿಳಿಸಿದರು.

ಕಾರ್ಯಕ್ರಮದಲ್ಲಿ , ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಇದರ ಗೌರವ ಅಧ್ಯಕ್ಷರಾದ ಪ್ರಕಾಶ್ ಕಾಶಿಬೆಟ್ಟು, ಸಮಿತಿಯ ಸದಸ್ಯರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ಇದರ ಸದಸ್ಯರು ಲಾಯಿಲ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂದಳ ಘಟಕದ ಕಾರ್ಯಕರ್ತ ಬಂಧುಗಳು, ನಗರ ಪಂಚಾಯತ್ ಸದಸ್ಯರಾದ ಶರತ್ ಕುಮಾರ್ , ಮೋಹನ್ ಭಟ್ ಗುರಿಂಗಾನ ,ಮತ್ತು ಊರಿನ ನಾಗರಿಕರು ಭಾಗವಹಿಸಿದರು.

ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಗಣೇಶ್ ಇವರು ಧನ್ಯವಾದಗೈದರು.

Related posts

ಬಾರ್ಯ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸತೀಶ್ ರವರಿಗೆ ಮಾತೃವಿಯೋಗ

Suddi Udaya

ಪಡ್ಲಾಡಿ 35ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ರಚನೆ

Suddi Udaya

ಮರೋಡಿ: ವಿವಾಹಿತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ; ಕಾರಣ ನಿಗೂಢ

Suddi Udaya

ಬಳಂಜ ಗ್ರಾ.ಪಂ. ಸದಸ್ಯರ ಸಹಕಾರದಿಂದ ಕಾಪಿನಡ್ಕದಲ್ಲಿದ್ದ ಅಪಾಯಕಾರಿ ವಿದ್ಯುತ್ ಕಂಬ ಸರಿಪಡಿಸಿದ ಮೆಸ್ಕಾಂ ಇಲಾಖೆ, ಗ್ರಾಮಸ್ಥರಿಂದ ಶ್ಲಾಘನೆ

Suddi Udaya

ಕನ್ಯಾಡಿ : ಶ್ರೀ ರಾಮ ಕ್ಷೇತ್ರದ ಗುರುದೇವ ಮಠದಲ್ಲಿ ಆಯುಧ ಪೂಜೆ

Suddi Udaya

-75 ವರ್ಷದ ಇತಿಹಾಸ ಇರುವ ಕೊಯ್ಯೂರು ಪುರುಷರ ರಾಶಿಪೂಜೆ -7 ಮಂದಿ ಹಿರಿಯ ಪುರುಷರ ಕಲಾವಿದರಿಗೆ ಸನ್ಮಾನ, -ವಿಷ್ಣುಮೂರ್ತಿ ದೇವಸ್ಥಾನಕ್ಕೆ 5 ಕಬ್ಬಿಣದ ಟೇಬಲ್ ಹಾಗೂ 50 ಪ್ಲಾಸ್ಟಿಕ್ ಕುರ್ಚಿ ಗಳ ಕೊಡುಗೆ

Suddi Udaya
error: Content is protected !!