26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಮುಂಡಾಜೆ : ಸಿಡಿಲು ಬಡಿದು ಮನೆಗೆ ಹಾನಿ, ಅಪಾರ ನಷ್ಟ

ಬೆಳ್ತಂಗಡಿ; ಅ.9 ರಂದು ಸಂಜೆ ಸಿಡಿಲು ಮಿಂಚು ಗಾಳಿ ಸಹಿತ ಸುರಿದ ಭಾರೀ ಮಳೆಗೆ ಮುಂಡಾಜೆ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದರೆ ಹಲವೆಡೆ ಮನೆಗೆ ಸಿಡಿಲು ಬಡಿದು ಭಾರೀ ಹಾನಿಯಾಗಿದೆ.
ಮುಂಡಾಲ್ಬೆಟ್ಟು ಸುರೇಶ್ ಗೌಡ ಎಂಬವರ ಮನೆಗೆ ಸಿಡಿಲು ಬಡಿದು ಸ್ವಿಚ್ ಬೋರ್ಡ್‌ಗಳಿಗೆ ಹಾನಿಯಾಗಿದೆ . ಮನೆಯ ಗೋಡೆ ಬಿರುಕು ಬಿಟ್ಟಿದೆ. ಕಾರು ಪಾರ್ಕಿಂಗ್ ನ ಪಿಲ್ಲರ್ ಕಂಬದ ಬುಡ ಸಿಡಿಲಾಘಾತಕ್ಕೆ ಸಿಮೆಂಟ್ ಸಮೇತ ಕಿತ್ತು ಬಂದಿದ್ದು ಬಾವಿಯ ಕಟ್ಟೆಗೂ ಹಾನಿಯಾಗಿದೆ. ನೀರಿನ ಪಂಪಿನ ಕವರ್ ಛಿದ್ರಗೊಂಡಿದ್ದು ಮನೆಯ ಇನ್ವರ್ಟರ್, ಫ್ಯಾನ್‌ಗಳು, ಬಲ್ಬುಗಳು ಸಂಪೂರ್ಣ ಕೆಟ್ಟು ಹೋಗಿದೆ. ಮನೆಯ ಆವರಣ ಗೋಡೆಯು ಕುಸಿತಗೊಂಡಿದೆ.

ಸುರೇಶ್ ಗೌಡ ಅವರು ಉಜಿರೆ ಎಸ್‌ಡಿಎಂ ಡಿಪ್ಲೋಮಾ ಕಾಲೇಜಿನ ಸಿಬ್ಬಂದಿ, ಅವರ ಪತ್ನಿ‌ ಭಾರತಿ ಅವರು ನಡ ಪಂಚಾಯತ್ ನಲ್ಲಿ ಗುಮಾಸ್ತೆಯಾಗಿದ್ದು ಇಬ್ಬರೂ ಕರ್ತವ್ಯಕ್ಕೆ ಹೋಗಿದ್ದರು. ಮಕ್ಕಳು ಶಾಲೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಹೆಚ್ಚಿನ‌ ಅನಾಹುತ ತಪ್ಪಿದೆ.

Related posts

ಕನಾ೯ಟಕ ಸಂಗೀತ ನೃತ್ಯ ಅಕಾಡೆಮಿ ನೂತನ ಅಧ್ಯಕ್ಷರಾಗಿ ಡಾ. ಕೃಪಾ ಫಡಕೆ ನೇಮಕ

Suddi Udaya

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ: ಸತತ 15 ನೇ ಬಾರಿಗೆ ಪ್ರಥಮ ಸ್ಥಾನ ಪಡೆದ ಬಂದಾರು ಸ.ಉ. ಹಿ. ಪ್ರಾ. ಶಾಲಾ ವಿದ್ಯಾರ್ಥಿಗಳ ತಂಡ

Suddi Udaya

ಬಂದಾರು ಸ.ಹಿ. ಪ್ರಾ. ಶಾಲೆಯಲ್ಲಿ ಬೂತ್ ಸಂಖ್ಯೆ 217ರಲ್ಲಿ ತ್ರಾಂತಿಕ ದೋಷದಿಂದ ಮತದಾನ ಸ್ಥಗಿತ

Suddi Udaya

ಓಡೀಲು: ದಿನಸಿ ಅಂಗಡಿಗೆ ನುಗ್ಗಿದ ಕಳ್ಳರು: ನಗದು ಸೇರಿ ಇನ್ನಿತರ ವಸ್ತುಗಳ ಕಳ್ಳತನ

Suddi Udaya

ಮುಂಡಾಜೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ರೋಟರಿ ಕ್ಲಬ್‌ ಬೆಳ್ತಂಗಡಿ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

Suddi Udaya
error: Content is protected !!