September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ಎಸ್. ಡಿ. ಎಂ ನ ನವೀಕೃತ ಡೀನ್ ಚೇಂಬರ್ ಗೆ ಚಾಲನೆ

ಉಜಿರೆ: ಉಜಿರೆಯ ಎಸ್. ಡಿ .ಎಂ. ಸ್ನಾತ್ತಕೋತ್ತರ ಕೇಂದ್ರದ ನವೀಕೃತ ಡೀನ್ ಚೇಂಬರನ್ನು ಎಸ್. ಡಿ.ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ . ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು.

ಕಳೆದ ಎರಡು ತಿಂಗಳುಗಳಿಂದ ಡೀನ್ ಚೇಂಬರಿಗೆ ಹೊಸ ಕಾಯಕಲ್ಪ ನೀಡುವ ಕಾಮಗಾರಿ ಚಾಲ್ತಿಯಲ್ಲಿತ್ತು
.ಕಾಮಗಾರಿ ಪೂರ್ಣಗೊಂಡು ಸುಸಜ್ಜಿತ ವಿನ್ಯಾಸದೊಂದಿಗೆ ಮರುರೂಪುಗೊಂಡ ಡೀನ್ ಚೇಂಬರ್ ಗೆ ಡಿ.ಹರ್ಷೇಂದ್ರ ಕುಮಾರ್ ಮೇ 24 ರಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸ್ನಾತ್ತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ .ಪಿ ಅವರಿಗೆ ಹೂಗುಚ್ಛ ನೀಡಿ ಶುಭ
ಹಾರೈಸಿದರು. ಸ್ನಾತಕೋತ್ತರ ಕೇಂದ್ರದ ಬೆಳವಣಿಗೆಗೆ ಸಂಬಂಧಿಸಿದ ಮಹತ್ವದ ನಿರ್ಣಯಗಳ ನೆಲೆಯಾಗಿ ಡೀನ್
ಚೇಂಬರ್ ಹೆಗ್ಗುರುತು ಮೂಡಿಸಲಿ ಎಂದು ಆಶಿಸಿದರು. ಡೀನ್ ಚೇಂಬರ್ ಕಡೆಗೆ ಸಮಸ್ಯೆಗಳನ್ನು ನಿವೇದಿಸಿ ಕೊಂಡು ಬರುವವರಿಗೆ ಪರಿಹಾರ ಸಿಗಲಿ, ಈ ಮೂಲಕ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕೊಡುಗೆಗಳನ್ನು ನೀಡಲಿ ಎಂದು ಹೇಳಿದರು.

ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ , ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ್
ಹೆಗ್ಡೆ ಬಿ. ಎ ,ಸ್ನಾತ್ತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಭಟ್ ನಿರೂಪಿಸಿದರು.

Related posts

ನಮ್ಮ ಟಿವಿಯ ‘ಬಲೆ ಚಾತುರ್ಪು ತೋಜಾಲೆ’ ರೀಯಾಲಿಟಿ ಶೋ ಸ್ಪರ್ಧೆ: ಯುವವಾಹಿನಿ ಬೆಳ್ತಂಗಡಿ ಘಟಕಕ್ಕೆ ಪ್ರಥಮ ಸ್ಥಾನ

Suddi Udaya

ಉಜಿರೆ: ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

Suddi Udaya

ಪಟ್ರಮೆ ಅನಾರು ಬೂತ್‌ಗೆ ಬಿಜೆಪಿ ಮಂಡಲದ ಅಧ್ಯಕ್ಷ ಶ್ರೀನಿವಾಸ ರಾವ್ ಭೇಟಿ

Suddi Udaya

ದೇಶ ಕಂಡ ಅತ್ಯುತ್ತಮ ಸಂದೀಯ ಪಟು, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ: ರಕ್ಷಿತ್ ಶಿವರಾಮ್

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ 2023-24ನೆಯ ಸಾಲಿನಲ್ಲಿ ದಾಖಲೆಯ ನೇರ ನೇಮಕಾತಿಯ ಮೂಲಕ ಉದ್ಯೋಗಾವಕಾಶ

Suddi Udaya

ಬಡಗಕಾರಂದೂರು: ಬಾವಲಿಗುಂಡಿ ಕಿಂಡಿ ಅಣೆಕಟ್ಟು ಬಳಿ ರೂ.3 ಕೋಟಿ ವೆಚ್ಚದ ಕಾಲುವೆ ನಿರ್ಮಾಣಕ್ಕೆ ಭೂಮಿ ಪೂಜೆ

Suddi Udaya
error: Content is protected !!