25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಮತ್ತು ಭಂಡಾರಿ ಸಮಾಜ ಸಂಘದ ಸಹಯೋಗದಲ್ಲಿ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಉದ್ಘಾಟನೆ

ವೇಣೂರು: ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಮತ್ತು ಭಂಡಾರಿ ಸಮಾಜ ಸಂಘ (ರಿ.) ಬೆಳ್ತಂಗಡಿ ಇದರ ಜಂಟಿ ಸಹಯೋಗದಲ್ಲಿ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮವು ಅ.10ರಂದು ವೇಣೂರು ಕರಿಮಣೇಲು ಶ್ರೀಮತಿ ಸೀತಾ ತೌಡ ಭಂಡಾರಿಯವರ ಗದ್ದೆಯಲ್ಲಿ ಜರುಗಿತು.


ಸಂಘದ ಮಾಜಿ ಅಧ್ಯಕ್ಷ ದಿವಾಕರ ಭಂಡಾರಿ ನಾರಾವಿ, ಶ್ರೀಮತಿ ಸೀತಾ ತೌಡ ಭಂಡಾರಿ, ಉದ್ಯಮಿ ಭಾಸ್ಕರ್ ಪೈ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಬಾಲಕೃಷ್ಣ ಭಟ್ ದಡ್ಡು, ಉಡುಪಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಗುರುದಾಸ ಭಂಡಾರಿ, ಪುತ್ತೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಗಿರೀಶ್ ಭಂಡಾರಿ, ಬೆಳ್ತಂಗಡಿ ಸವಿತಾ ಸಮಾಜ ಅಧ್ಯಕ್ಷ ಗೋಪಾಲ ಭಂಡಾರಿ, ಮಂಗಳೂರು ಯುವ ವೇದಿಕೆ ಅಧ್ಯಕ್ಷ ನಿತ್ಯಾನಂದ ತಲಪಾಡಿ, ವೇಣೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಸುಧೀರ್ ಭಂಡಾರಿ, ಯುವ ವೇದಿಕೆ ಕಾರ್ಯದರ್ಶಿ ಪ್ರಶಾಂತ್ ಭಂಡಾರಿ ಅಂಡಿಂಜೆ, ರಮ್ಯ ಪ್ರವೀಣ್ ಭಂಡಾರಿ, ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಉಮೇಶ್ ಭಂಡಾರಿ, ಭಂಡಾರಿ ಮಹಾಮಂಡಲದ ಅಧ್ಯಕ್ಷ ಶಶಿಧರ ಭಂಡಾರಿ ಕಾರ್ಕಳ, ಉಪಸ್ಥಿತರಿದ್ದರು.


ಪ್ರತಿಭಾ ಸುನೀಲ್ ಭಂಡಾರಿ ಪ್ರಾರ್ಥಿಸಿದರು. ಭಂಡಾರಿ ಯುವ ವೇದಿಕೆ ಅಧ್ಯಕ್ಷ ವಿಶ್ವನಾಥ ಭಂಡಾರಿ ಉಜಿರೆ ಸ್ವಾಗತಿಸಿದರು. ದಯಾನಂದ ಭಂಡಾರಿ ವಂದಿಸಿದರು.

ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ, ವಯಸ್ಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿರುವುದು

Related posts

ಮಾಚಾರಿನಲ್ಲಿ 31 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉದ್ಘಾಟನೆ

Suddi Udaya

ಮುಂಡಾಜೆ ಪಿಯು ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ರಸ್ತೆ ದುರಸ್ತಿ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಭೇಟಿ

Suddi Udaya

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಗೈಡ್ಸ್ ನಿಂದ ವೀರಯೋಧ ಸ್ಕೌಟ್ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಗೆ ಶ್ರದ್ಧಾಂಜಲಿ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪ್ರೌಢ ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

Suddi Udaya

ಭಜನಾ ಪರಿಷತ್ ಲಾಯಿಲ ವಲಯದ ಅಧ್ಯಕ್ಷರಾಗಿ ಪಿ. ಚಂದ್ರಶೇಖರ ಸಾಲ್ಯಾನ್, ಕಾರ್ಯದರ್ಶಿಯಾಗಿ ಅಖಿಲೇಶ್ ಚಂದ್ಕೂರು, ಕೋಶಾಧಿಕಾರಿಯಾಗಿ ದಿನೇಶ್ ಜಾನ್ಲಪು

Suddi Udaya
error: Content is protected !!