ಗೆಜ್ಜೆಗಿರಿ: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವವು ಬೆಳಿಗ್ಗೆ ಗಣಪತಿ ಹವನ ತೆನೆ ಕಟ್ಟುವ ಮೂಲಕ ಆರಂಭಗೊಂಡಿತು.
ನವರಾತ್ರಿ ಮಹೋತ್ಸವವನ್ನು ಮೇಲ್ಕಾರ್ ಬಿರ್ವ ಸೆಂಟರ್ ಮಾಲಕರಾದ ಕೆ.ಸಂಜೀವ ಪೂಜಾರಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ತಮ್ಮ ಪ್ರಸ್ತಾವನೆಯಲ್ಲಿ ಕ್ಷೇತ್ರ ನಡೆದು ಬಂದ ದಾರಿಯ ಬಗ್ಗೆ ಪ್ರಸ್ತಾವಿಸಿದರು. ಉಪಾಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ ಧನ್ಯವಾದ ಅರ್ಪಿಸಿದರು.
ಪ್ರಮುಖರಾದ ಕ್ಷೇತ್ರದ ಪ್ರಧಾನ ಅರ್ಚಕರಾದ ಶಿವಾನಂದ ಶಾಂತಿ, ನವೀನ್ ಸುವರ್ಣ, ಪ್ರವೀಣ್ ಪೂಜಾರಿ ಮೂಡಿಗೆರೆ, ಕೃಷ್ಣಪ್ಪ ಪೂಜಾರಿ, ಜಯಶ್ರೀ ಉಪ್ಪಿನಂಗಡಿ, ವಿಶ್ವನಾಥ ಪೂಜಾರಿ ಮೂಡಿಗೆರೆ, ನಾರಾಯಣ ಮಚ್ಚಿನ ಹಾಗೂ ನೂರಾರು ಕ್ಷೇತ್ರದ ಭಕ್ತರ ಉಪಸ್ಥಿತಿಯಲ್ಲಿ ನಡೆಯಿತು.