23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿ

ಮಧ್ವ ಯಕ್ಷಕೂಟ ವತಿಯಿಂದ ನವರಾತ್ರಿ ಪ್ರಯುಕ್ತ ಕೊಲ್ಪೆದಬೈಲಿ ನಲ್ಲಿ ಯಕ್ಷಗಾನ ತಾಳಮದ್ದಳೆ:  ಯಕ್ಷಗಾನಕ್ಕೆ ಪ್ರೋತ್ಸಾಹ ಅಗತ್ಯ:ಡಾ. ಸುಬ್ರಹ್ಮಣ್ಯ ಬಲ್ಲಾಳ್

ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ಮಧ್ವ ಯಕ್ಷಕೂಟದ ವತಿಯಿ.ದ ಯಕ್ಷಾಭಿಮಾನಿಗಳು ಮಾಲಾಡಿ, ಸೋಣಂದೂರು ಇದರ ಸಹಕಾರದಲ್ಲಿ ನವರಾತ್ರಿ ಪ್ರಯುಕ್ತ  ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ   ಕೊಲ್ಪೆದಬಯಿಲ್ ಎಸ್‌ಕೆಎಸ್ ಸಭಾಂಗಣದಲ್ಲಿ ನಡೆಯಿತು.
ಪಾರೆಂಕಿ ಶ್ರೀ ಮಾರಿಕಾಂಬಾದೇವಿ ದೇವಸ್ಥಾನದ ಕಾರ್ಯಾಧ್ಯಕ್ಷ ಡಾ. ಸುಬ್ರಹ್ಮಣ್ಯ ಬಲ್ಲಾಳ್  ಅವರು ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿ, ಯಕ್ಷಗಾನದ ಮೂಲಕ ನಮ್ಮ ಸಂಸ್ಕೃತಿ, ಪುರಾಣ ಜ್ಞಾನ ತಿಳಿಯುತ್ತದೆ. ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಜಗತ್ತಿನೆಲ್ಲೆಡೆ ಪಸರಿಸಿದ್ದು, ಯಕ್ಷಗಾನಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.
ಶ್ರೀ ಕ್ಷೇತ್ರ ಪಾರೆಂಕಿಯ ಮಾಜಿ ಆಡಳಿತ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಮೂಡಾಯೂರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರಂತರ ತಾಳಮದ್ದಳೆ ನಡೆಸುವ ಯಕ್ಷಕೂಟದ ಭಾಸ್ಕರ ಶೆಟ್ಟಿ ಅವರ ಶ್ರಮ ಅಭಿನಂದಾರ್ಹ, ಯುವ ಜನತೆ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಪ್ರಗತಿಪರ ಕೃಷಿಕ ಮೂಡಾಯೂರು ಸಂಜೀವ ಶೆಟ್ಟಿ, ನಿವೃತ್ತ ಸೈನಿಕ ಕಾಂತಪ್ಪ ಗೌಡ ಹಟತ್ತೋಡಿ, ಮಾಲಾಡಿ ವೇಣೂರು ಗ್ರಾಮ ಆಡಳಿತಾಽಕಾರಿ ಉಮೇಶ್, ಗತಿಪರ ಕೃಷಿಕ ಚಂದ್ರಶೇಖರ ಅಜಿಲ ಸೋಣಂದೂರು ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಕೂಟ ಅಧ್ಯಕ್ಷ ಭಾಸ್ಕರ ಶೆಟ್ಟಿ  ಸ್ವಾಗತಿಸಿ, ಪ್ರಸ್ತಾವಿಸಿದರು. ಜನಾರ್ದನ ಶೆಟ್ಟಿ ವಂದಿಸಿದರು. ರವಿಶಂಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ    ಶ್ರೀ ಚೂಡಾಮಣಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರು ರವಿಚಂದ್ರ ಕನ್ನಡಿಕಟ್ಟೆ ಮತ್ತು ವಿಶ್ವಾಸ್ ಭಟ್,  ಮದ್ದಳೆಯಲ್ಲಿ ಗಣೇಶ್ ಬೆಳಾಲು  ಮತ್ತು ನವೀನ್ ಚಂದ್ರ ಮೊರ್ಗನಾಡು, ಮೊದಲನೇ ಹನುಮಂತನಾಗಿ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ತೃಣಬಿಂದು, ಸರಮೆ ಚಂದ್ರಶೇಖರ ಅಜಿಲ ಸೋಣಂದೂರು, ಎರಡನೇ ಹನುಮಂತನಾಗಿ ಶ್ರೀಮತಿ ಸಾಯಿಸುಮ ಎಂ. ನಾವಡ ಕಾರಿಂಜ,ರಾವಣ  ಡಿ. ಪಾತಿಲ ತಿಮ್ಮಪ್ಪ ಶೆಟ್ಟಿ, ಸೀತೆಯಾಗಿ  ಶ್ರೀಮತಿ ಜ್ಯೋತಿ ಶೈಲೇಶ್ ಅತ್ಯುತ್ತಮವಾಗಿ ಪಾತ್ರ ನಿವ೯ಹಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

Related posts

ತಾಲೂಕು ಮಟ್ಟದ ಭಕ್ತಿಗೀತೆ ಸ್ಪರ್ಧೆ : ಅನುಗ್ರಹ ಆಂ.ಮಾ. ಶಾಲೆಯ ವಿದ್ಯಾರ್ಥಿ ಆದ್ವಿ ದ್ವಿತೀಯ ಸ್ಥಾನ

Suddi Udaya

ಲಾಯಿಲ ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ಆ.19: ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ಸಮಾರಂಭ

Suddi Udaya

ವೇಣೂರು ಕುಂಭಶ್ರೀ ಶಾಲೆಯಲ್ಲಿ ಮಾತಾ-ಪಿತಾ-ಗುರುದೇವೋಭವ ಕಾರ್ಯಕ್ರಮ

Suddi Udaya

ಮಡಂತ್ಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಸಿನ ಮನೆ ಶಿಶುಪಾಲನಾ ಕೇಂದ್ರ ಉದ್ಘಾಟನೆ

Suddi Udaya

ಅಳದಂಗಡಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!