September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ ಜೇಸಿಗೆ ಸಮ್ಮೇಳನ ಪ್ರಶಸ್ತಿ: ಅಕ್ಷರ ದೀವಿಗೆ ವಲಯದ ಅತ್ಯುತ್ತಮ ಕಾರ್ಯಕ್ರಮ

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಇವರು 2023 ನೇ ಸಾಲಿನಲ್ಲಿ ಓದುವ ಹವ್ಯಾಸ ಬೆಳೆಸಲು ನಡೆಸಿದ ಲೈಬ್ರರಿ ಪುಸ್ತಕ ವಿತರಣೆ ಅಭಿಯಾನವು ವಲಯದ ಅತ್ಯುತ್ತಮ ಕಾರ್ಯಕ್ರಮ ವಿನ್ನರ್ ಪ್ರಶಸ್ತಿ ಗಳಿಸಿದೆ.

ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ಅವರು ಈ ವರ್ಷ ನಡೆಸಿದ ನೂತನ ವೈಬ್ ಸೈಟ್ ಸ್ಥಾಪನೆ , ಅಶಕ್ತರಿಗೆ ನೆರವು, ಸ್ಕಾಲರ್ ಶಿಪ್ ವಿತರಣೆ, ಯುವ ಜೇಸಿ ತರಬೇತಿ, ವಲಯ ಮಟ್ಟದ ಸಭೆಯ ಆತಿಥ್ಯ, ಸೆನೆಟರ್ , ಹೆಚ್ ಜಿ.ಎಫ್ , ಜೆ. ಎಫ್.ಯಂ. ಕೊಡುಗೆ, ಶೇಕಡಾ ನೂರರಷ್ಟು ಸದಸ್ಯರ ಹೆಚ್ಚಳ, ಅಧ್ಯಕ್ಷರ ವಾರ್ತಾ ಪತ್ರಗಳ ಎಲ್ಲಾ ಆವೃತ್ತಿಗಳ
ಪ್ರಕಟಣೆ, ಮೌನ ಸಾಧಕರ ಅಭಿನಂದನೆ ಮತ್ತು ನೆರವು, ಯಶಸ್ವೀ ಪ್ರವಾಸ, ಸ್ವಚ್ಛತಾ ಆಂದೋಲನ, ಗಿಡಗಳನ್ನು ನೆಡುವುದು ಸೇರಿದಂತೆ ನಡೆಸಿದ ನೂರಾರು ಕೆಲಸಗಳನ್ನು ಗುರುತಿಸಿ ಔಟ್ ಸ್ಟಾಡಿಂಗ್ ಲೋಕಲ್ ಗ್ಲೋಬಲ್ ಗೋಲ್ಸ್ ಪ್ರಾಜೆಕ್ಟ್ ಆಫ್ ದಿ ಜೋನ್ ವಿನ್ನರ್, ಔಟ್ ಸ್ಟಾಡಿಂಗ್ ಜೇಸಿಐ ಇಂಡಿಯಾ ಪೌಂಡೇಶನ್ ಮೆಂಬರ್ ಆಫ್ ದಿ ಜೋನ್ ವಿನ್ನರ್ ಪ್ರಶಸ್ತಿ ,ಹಾಗೂ ಘಟಕಾಧ್ಯಕ್ಷರಿಗೆ ಜೇಸಿ ಸೇವಾ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಪುತ್ತೂರು ಜೇಸಿಐ ಆತಿಥ್ಯದಲ್ಲಿ ಪುತ್ತೂರಿನ ಅಬ್ರಾಡ್ ಮಲ್ಟಿ ಫ್ಲೆಕ್ಸ್ ಆಡಿಟೋರಿಯನಲ್ಲಿ ಅ 28 ಹಾಗೂ 29 ರಂದು ಜರುಗಿದ ವರ್ಣ ರಂಜಿತ ವಲಯ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರು ಆಡಳಿತ ಮಂಡಳಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಜಿತೇಶ್ ಎಲ್ ಪಿರೇರಾ ಅವರಿಗೆ ಪುರಸ್ಕಾರ ವಿತರಿಸಿ ಗೌರವಿಸಿದರು.

Related posts

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದಿಂದ ಶ್ರೀ ಮಹಾಭಾರತ ಸರಣಿ ತಾಳಮದ್ದಳೆ, ಸನ್ಮಾನ

Suddi Udaya

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರಕ್ಕೆ ಎನ್.ಎಸ್.ಎಸ್ ಸ್ವಯಂ ಸೇವಕರ ಭೇಟಿ

Suddi Udaya

ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಂತಾಪ

Suddi Udaya

ಮಂಗಳೂರಿನಲ್ಲಿ ಆನೆದಂತ ಮಾರಟಕ್ಕೆ ಯತ್ನ; ಪುದುವೆಟ್ಟು ಗ್ರಾಮದ ಶಶಾಂಕ ವಶಕ್ಕೆ

Suddi Udaya

ಬೆಳ್ತಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ವಿಶ್ವ ಮಹಿಳಾ ದಿನದ ಅಂಗವಾಗಿ ಆರ್ಥಿಕ ನೆರವು

Suddi Udaya

ಕೊಕ್ಕಡ ನಿವಾಸಿ ರೇಖಾ ವಿಷ ಸೇವಿಸಿ ಆತ್ಮಹತ್ಯೆ

Suddi Udaya
error: Content is protected !!