34.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಜ್ಞಾನ ವಿಕಾಸ ಮಹಿಳಾ ಕಾರ್ಯಕರ್ತರಿಗೆ ಸಾಮಾನ್ಯ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭ

                                   

ಉಜಿರೆ: ಕೆಲಸದಲ್ಲಿ ಉತ್ತಮ ಗುಣಮಟ್ಟ ಇರಬೇಕು ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು ಸಮಯಕ್ಕೆ ಆದ್ಯತೆ ನೀಡಿ ನಗು ಮುಖದ ಸೇವೆಯನ್ನು ನೀಡಲು ಕಲಿಯಬೇಕು. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಹೆಚ್ಚು ಮಹತ್ವ ಇರುತ್ತದೆ ಎಂದು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು ಆರ್ಶೀವಚನ ನೀಡುತ್ತಾ ತಿಳಿಸಿದರು.

ಅವರು ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಜ್ಙಾನ ವಿಕಾಸ ಮಹಿಳಾ ಆಯ್ದ ಕಾರ್ಯಕರ್ತರಿಗೆ 6 ದಿನಗಳ ಸಾಮಾನ್ಯ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯಲ್ಲಿ ಮದು ಮಗಳ ಶೃಂಗಾರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಮಾರ್ಗದರ್ಶನ ನೀಡುತ್ತಾ ಶೃಂಗಾರ ಮಾಡಿಸಿಕೊಳ್ಳುವವರು ಕೂಡ ಸರಿಯಾದ ವಿಶ್ರಾಂತಿ ಮತ್ತು ಹೆಚ್ಚು ನೀರನ್ನು ಕುಡಿದಿರಬೇಕು ಎಂದು ಸಲಹೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಶಿಭಿರಾರ್ಥಿಗಳು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರು ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಆರ್ಶೀವಾದ ಪಡೆದರು.

ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕರಾದ ಗಿರಿಧರ್ ಕಲ್ಲಾಪುರ್, ನಿರ್ದೇಶಕರಾದ ಎಮ್. ಸುರೇಶ್‌ರವರು ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್‌ರವರು ಮತ್ತು ಕಛೇರಿ ಸಹಾಯಕರಾದ ಪ್ರವೀಣ್ ರವರು ಉಪಸ್ಥಿತರಿದ್ದರು. ಕೆಲವು ಶಿಭಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಈ ತರಬೇತಿಯಲ್ಲಿ 31 ಮಹಿಳಾ ಅಭ್ಯರ್ಥಿಗಳು ಭಾಗವಹಿಸಿದ್ದರು.

Related posts

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಯಂಸೇವಕರಾಗಿ ಸೇವೆ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ತೂಫಾನ್ ಪಲ್ಟಿ

Suddi Udaya

ವೇಣೂರು ಠಾಣಾ ಪೊಲೀಸ್ ಉಪ ನಿರೀಕ್ಷಕರಾಗಿ ಶ್ರೀಶೈಲ ಡಿ. ಮುರುಗೋಡು

Suddi Udaya

ಹಾವುಗಳ ಸಂರಕ್ಷಕರಾದ ಸ್ನೇಕ್ ಅಶೋಕ್ ನಾಗರ ಹಾವು ಹಿಡಿಯುವ ವೇಳೆ ಹಾವು ಕಚ್ಚಿ ಮಂಗಳೂರು ಆಸ್ಪತ್ರೆಗೆ ದಾಖಲು

Suddi Udaya

ಖ್ಯಾತ ಯುರಾಲಜಿಸ್ಟ್‌ ಡಾ. ಸದಾನಂದ ಪೂಜಾರಿಗೆ ಪ್ರೈಡ್ ಆಫ್ ನೇಷನ್ ಅವಾರ್ಡ್ ಪ್ರದಾನ

Suddi Udaya

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭಿನಂದನಾ ಸಭೆ

Suddi Udaya
error: Content is protected !!