32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

Carotid body tumor ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಮರೋಡಿಯ ಯುವಕ: ಶಸ್ತ್ರಚಿಕಿತ್ಸೆಗೆ ಬರೋಬ್ಬರಿ ರೂ. 8 ಲಕ್ಷದ ಅವಶ್ಯಕತೆ, ಬಡಕುಟುಂಬ ಸಹೃದಯ ದಾನಿಗಳ ಸಹಕಾರವನ್ನು ಎದುರು ನೋಡುತ್ತಿದೆ

ಬೆಳ್ತಂಗಡಿ:ಇದೊಂದು ಅತ್ಯಂತ ವಿಚಿತ್ರ ಮನಕಲಕುವ ಕಥೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ-ಮೂಡುಬಿದಿರೆ ತಾಲೂಕಿನ ಗಡಿಭಾಗ ಮರೋಡಿ ಗ್ರಾಮದ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಕುಟುಂಬ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಹುಡುಗ. ಮನೆಯ ಕಡು ಬಡತನದ ಕಾರಣ ಪಿಯುಸಿ ಹಂತದಲ್ಲೇ ಶಿಕ್ಷಣ ಮೊಟಕುಗೊಳಿಸಿ ಉದ್ಯೋಗದ‌ ಕಡೆ ಮುಖ ಮಾಡಿದ. ಆದರೆ ವಿಧಿ ಅದಕ್ಕೂ ಕತ್ತರಿ ಹಾಕಲು ಮುಂದೆ ಬಂತು. ಕೆಲಸಕ್ಕೆ ಸೇರಿದ ಒಂದೇ ತಿಂಗಳಲ್ಲಿ ಆತನಿಗೆ ಅನಿರೀಕ್ಷಿತ ಆರೋಗ್ಯ ಬಾಧೆಯೊಂದು ಎದುರಾಯಿತು.

ಆರಂಭದಲ್ಲಿ ಆತನ ಸ್ವರ ಸಣ್ಣದಾಯಿತು. ವಾತಾವರಣದ ಬದಲಾವಣೆ ಆಗಿರಬಹುದು ಎಂದು ಸುಮ್ಮನಿದ್ದ ಕುಟುಂಬಸ್ಥರು ಸ್ವರ ಸರಿ ಆಗದೇ ಇದ್ದಾಗ ವೈದ್ಯರ ಸಲಹೆ ಪಡೆಯಲು ಮುಂದಾದಾಗ ಬೆಚ್ಚಿಬೀಳಿಸುವ ಘಟನೆ ಎದುರಾಯಿತು. ಆತನ ಧ್ವನಿ ಪೆಟ್ಟಿಗೆಯಲ್ಲಿ ಗೆಡ್ಡೆ ಬೆಳೆದು ಸ್ವರವೇ ಸಂಪೂರ್ಣ ಸ್ತಬ್ಧವಾಗಿ ಹೋಗಿದೆ.

Carotid body tumor ಎಂಬ ವಿಚಿತ್ರ ಖಾಯಿಲೆ. ಈಗ ಅತೀ ಶೀಘ್ರದಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ಅನಿವಾರ್ಯತೆ ಎದುರಾಗಿದೆ. ಬರೋಬ್ಬರಿ 8 ಲಕ್ಷ ರೂಪಾಯಿ. ಇದರಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿ ಆಯುಷ್ಮಾನ್ ಯೋಜನೆಯಲ್ಲಿ ಸಿಗಬಹುದು. ಹಾಗೆ ಹೀಗೆ ಅವರು ಇವರು ಎಂದರೂ 2 ಲಕ್ಷ ರೂಪಾಯಿ ಸಂಗ್ರಹ ಆಗಬಹುದು. ಮತ್ತೆ ಲಕ್ಷಾಂತರ ರೂಪಾಯಿಗಳ ಅಗತ್ಯವಿದೆ. ಹೀಗಾಗಿ ನಿಮ್ಮ ಕಾಲ ಬುಡಕ್ಕೆ ಬಂದಿದ್ದೇವೆ.

ನಾವು ಹಾಕುವ ಒಂದಷ್ಟು ಮೊತ್ತ ಆತನ ಆರೋಗ್ಯ ಮಾತ್ರವಲ್ಲ ಕುಟುಂಬವನ್ನೇ ಅಪಾಯದ‌ ಅಂಚಿನಿಂದ ಪಾರು ಮಾಡಬಹುದು ದಯವಿಟ್ಟು ಸಹೃದಯ ಬಂದುಗಳು ಇವರಿಗೆ ಚಿಕಿತ್ಸೆಗೆ ಆರ್ಥಿಕ ಸಹಕಾರ ನೀಡಬೇಕಾಗಿ ವಿನಂತಿ.

ಹೆಸರು ವಿಘ್ನೇಶ್. ತಾಯಿ ಚಂಪಾ ಹಾಗೂ ತಂದೆ ಸುಧಾಕರ. ದೂರವಾಣಿ ಹಾಗೂ ಗೂಗಲ್ ಪೇ ಸಂಖ್ಯೆ 7022942521. ಇಲ್ಲಿ ಸ್ಕ್ಯಾನರ್ ಹಾಕಿದ್ದೇವೆ. ಅದಕ್ಕೂ ವೈದ್ಯಕೀಯ ನೆರವು ಹಾಕಬಹುದು. ಅವಶ್ಯಕತೆ ಇದ್ದರೆ ಅವರಿಗೆ ಕರೆಮಾಡಿ ವಿಚಾರಿಸಬಹುದು.
ತಮ್ಮ ಸಹಾಯದ ನಿರೀಕ್ಷೆಯಲ್ಲಿ ನಾವು ಮಾತ್ರವಲ್ಲ, ನಮ್ಮ ತಂಡ ಹಾಗೂ ಆತನ‌ ಕುಟುಂಬವಿದೆ… ಶೇರ್ ಮಾಡಿ ಜೀವ ಉಳಿಸಿ, ದಯವಿಟ್ಟ “ಭಿಕ್ಷಾಂದೇಹಿ” ಸುನಿಲ್ ಪಣಪಿಲ

Related posts

ಬಳಂಜ ವಾಲಿಬಾಲ್ ಕ್ಲಬ್ ಸಹಯೋಗದೊಂದಿಗೆ, ಇಕೋಫ್ರೆಶ್ ಎಂಟರ್ಪ್ರೈಸಸ್ ವತಿಯಿಂದ ಹೊನಲು ಬೆಳಕಿನ ಪುರುಷರ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾಟ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಮೇಲಂತಬೆಟ್ಟು ಗ್ರಾ.ಪಂ. ಸಹಭಾಗಿತ್ವದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮತ್ತು ವನಮಹೋತ್ಸವ ದಿನಾಚರಣೆ

Suddi Udaya

ಸವಣಾಲು: ಪಲ್ಗುಣಿ ಮಹಿಳಾ ಮಂಡಲದ ವತಿಯಿಂದ ಮಕ್ಕಳ ಕುಣಿತ ಭಜನಾ ತರಬೇತಿ ಉದ್ಘಾಟನೆ

Suddi Udaya

ರಾಷ್ಟ್ರೀಯ ಕರಾಟೆ ಪಂದ್ಯಾಟ: ಬೆಳ್ತಂಗಡಿಯ ಶೊರಿನ್ ರಿಯೊ ಕರಾಟೆ ಅಶೋಷಿಯೇಶನ್ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ಕ್ರಿಕೆಟಿಗ ಕೆ.ಎಲ್‌.ರಾಹುಲ್ ಭೇಟಿ

Suddi Udaya

ಕಕ್ಕಿಂಜೆಯಲ್ಲಿ ದ್ರಿಷ್ಠಿ ಒಪ್ಟಿಕಲ್ಸ್ ಶುಭಾರಂಭ

Suddi Udaya
error: Content is protected !!