29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: ನೇರ್ತನೆ ಪ್ರದೇಶದಲ್ಲಿ ಕಾಡಾನೆ ದಾಳಿ

ಧರ್ಮಸ್ಥಳ : ಇಲ್ಲಿಯ ನೇರ್ತನೆ ಪ್ರದೇಶದಲ್ಲಿ ನ.6 ರಂದು ರಾತ್ರಿ ಕಾಡಾನೆಗಳು ದಾಳಿ ನಡೆಸಿದ್ದು ಕೃಷಿಗೆ ಹಾನಿಯುಂಟು ಮಾಡಿದೆ.


ಇಲ್ಲಿನ ನಿವಾಸಿ ಶ್ರೀನಿವಾಸ ಎಂಬವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಐದು ತೆಂಗಿನ ಮರಗಳನ್ನು ಬುಡಸಮೇತ ಉರುಳಿಸಿದೆ. ಬಾಳೆಗಿಡಗಳನ್ನು ನಾಶಗೊಳಿಸಿದೆ. ಇಲ್ಲಿಯೇ ಸಮೀಪದ ಸ್ಟಾನಿ, ವಿಲ್ಸನ್ ಎಂಬವರ ತೋಟಗಳಿಗೂ ಆನೆಗಳ ಹಿಂಡು ನುಗ್ಗಿದೆ ಕಾಡಾನೆಗಳು ತೋಟಗಳಿಗೆ ನುಗ್ಗಿರುವುದನ್ನು ಗಮನಿಸಿದ ಮನೆಯವರು ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವ ಕಾರ್ಯ ಮಾಡಿದ್ದಾರೆ.


ಒಂದು ಮರಿಯಾನೆ ಸಹಿತ ಮೂರು ಆನೆಗಳು ಈ ಹಿಂಡಿನಲ್ಲಿವೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಒಂದು ತಿಂಗಳ ಹಿಂದೆ ಇದೇ ಆನೆಗಳ ಹಿಂಡು ಇಲ್ಲಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟುಮಾಡಿದ್ದವು.

Related posts

ಕಳಿಯ ಪರಪ್ಪುನಲ್ಲಿ ಮೀನು ಮಾರುಕಟ್ಟೆ ಉದ್ಘಾಟನೆ

Suddi Udaya

ಸೋಣಂದೂರು: ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Suddi Udaya

ಬಳಂಜ ವಾಲಿಬಾಲ್ ಕ್ಲಬ್ ಸೀಸನ್-5 ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಿ ಸಂಪನ್ನ.

Suddi Udaya

ತೆಂಕಕಾರಂದೂರು: ಕಾಪಿನಡ್ಕ ಗಾಂಧಿನಗರ ನಿವಾಸಿ ಸುಂದರ ದೇವಾಡಿಗ ನಿಧನ

Suddi Udaya

ಮಿತ್ತಬಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ: ಸ೦ಘದ ಸದಸ್ಯರಿಗೆ 20% ಡಿವಿಡೆಂಟ್ ಘೋಷಣೆ.

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಮಕ್ಕಳಿಂದ ನಿರಂತರ ಯಕ್ಷಗಾನ ಬಯಲಾಟ ಪ್ರದರ್ಶನ

Suddi Udaya
error: Content is protected !!