25.7 C
ಪುತ್ತೂರು, ಬೆಳ್ತಂಗಡಿ
March 7, 2026
ಜಿಲ್ಲಾ ಸುದ್ದಿ

ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ: ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್. ಪ್ರಸನ್ನರಿಂದ, ಮಾಹಿತಿ

ವಾಹನಗಳು ಹೊರಸೂಸುವ ಹೊಗೆಯಲ್ಲಿರುವ ವಿಷಕಾರಿ ಅನಿಲಗಳು ಶುದ್ಧ ಗಾಳಿಯೊಡನೆ ಸೇರಿ, ಉಂಟಾಗುವ ದುಷ್ಪರಿಣಾಮಗಳಾದ ದೃಷ್ಟಿ ಮಂಜಾಗುವಿಕೆ, ಗರ್ಭಿಣಿ ಸ್ತ್ರೀಯರಿಗೆ ಗರ್ಭಸ್ರಾವದ ಸಾದ್ಯತೆ, ಪಿತ್ತಕೋಶ, ಮೂತ್ರಕೋಶ, ಸಂತಾನೋತ್ಪತ್ತಿಯ ಹಾನಿ, ಅಸ್ತಮ ಮತ್ತು ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್ ಮುಂತಾದ ತೊಂದರೆಗಳನ್ನು ನಿಯಂತ್ರಿಸಲು ನ .10ರಂದು ಉಡುಪಿಯ ಪ್ರಾದೇಶಿಕ ಸಾರಿಗೆ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್. ಪ್ರಸನ್ನರವರು ಉದ್ಘಾಟಿಸಿ, ಮಾಲಿನ್ಯ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಯವರಾದ ಪಿ.ರವಿಶಂಕರ್‌ರವರು ಅಧ್ಯಕ್ಷತೆಯನ್ನು ವಹಿಸಿ, ಸುವರ್ಣ ಕರ್ನಾಟಕ ಸಂಭ್ರಮ ಹಾಗೂ ವಾಯುಮಾಲಿನ್ಯ ನಿಯಂತ್ರಣದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಕೆ.ಎಸ್‌.ಆರ್‌.ಟಿ.ಸಿ ಘಟಕ ವ್ಯವಸ್ಥಾಪಕರಾದ ಶಿವರಾಮ್ ನಾಯಕ್‌, ಕರಾವಳಿ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಭಟ್, ಸಾರಥ್ಯ ಸೇವಾ ಸಂಘದ ಅಧ್ಯಕ್ಷರಾದ ನೇಮಿರಾಜ ಆರಿಗ ಮತ್ತಿತರರು ಉಪಸ್ಥಿತರಿದ್ದರು. ಪ್ರಸ್ತಾವನೆಯನ್ನು ಅಧೀಕ್ಷಕರಾದ ಪಮಿತರವರು ನೆರವೇರಿಸಿದರು. ಕಾರ್ಯಕ್ರಮವನ್ನು ಮೋಟಾರು ವಾಹನದ ಹಿರಿಯ ನಿರೀಕ್ಷಕರಾದ ಸಂತೋಷ್ ಶೆಟ್ಟಿಯವರು ನಿರೂಪಿಸಿದರು. ಆರ್‌ಟಿಒ ಸಿಬ್ಬಂದಿಯವರಾದ ಶಾಂತರಾಜುರವರು ಸ್ವಾಗತಿಸಿ, ಅಧೀಕ್ಷರಾದ ಸರಸ್ವತಿಯವರು ವಂದನಾರ್ಪಣೆ ಗೈದರು.

Related posts

ಬುರುಡೆ ಚಿನ್ನಯ್ಯ ಕೋರ್ಟ್ ಗೆ ತಂದಿದ್ದ ಬುರುಡೆ ಪೋಟೋ ರಿವಿಲ್

Suddi Udaya

ಶಿಕ್ಷಕರು ಮತ್ತು ಸರ್ಕಾರಿ ಶಾಲೆಗಳ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಗಮನ ಸೆಳೆದ ಶಾಸಕ ಹರೀಶ್ ಪೂಂಜ

Suddi Udaya

ಎ.26: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ: 16 ನಿರ್ದೇಶಕ ಸ್ಥಾನಕ್ಕೆ 41 ಮಂದಿ ಅಭ್ಯರ್ಥಿಗಳ ನಡುವೆ ಸ್ಪರ್ಧೆ

Suddi Udaya

ಸರಣಿ ಕಳ್ಳತನಗೈಯ್ಯುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ: ಕಾರ್ಕಳ ತಾಲೂಕು ನಿಟ್ಟೆ ಅಜ್ಜೊಟ್ಟು ನಿವಾಸಿ ಸುರೇಶ ಕೆ ಪೂಜಾರಿ ಬಂಧಿತ ಆರೋಪಿ

Suddi Udaya

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ 15ನೇ ವರ್ಷದ ಸಾಮೂಹಿಕ ವಿವಾಹವಧು-ವರರ ವೈಭವದ ದಿಬ್ಬಣ ಮೆರವಣಿಗೆಗೆ ಚಾಲನೆ,

Suddi Udaya

ಇಸ್ರೇಲ್ ನಲ್ಲಿ ವಾಸವಾಗಿರುವ ದ.ಕ ಜಿಲ್ಲೆಯ ಪ್ರಜೆಗಳ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ

Suddi Udaya
error: Content is protected !!