September 6, 2026
ಗ್ರಾಮಾಂತರ ಸುದ್ದಿ

ಕುಂಬಾರರ ಸೇವಾ ಸಂಘದ ಮಾಸಿಕ ಸಭೆ: ಸಂಘದ ಅಧ್ಯಕ್ಷ ಹೆಚ್. ಪದ್ಮಕುಮಾರ್ ಅಧ್ಯಕ್ಷತೆ

ಬೆಳ್ತಂಗಡಿ : ಕುಂಬಾರರ ಸೇವಾ ಸಂಘದ ಮಾಸಿಕ ಸಭೆಯು ನ.12ರಂದು ಸಂಘದ ಸದಸ್ಯರಾದ ಸಂಜೀವ ಎನ್. ರವರ ಮನೆಯಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಹೆಚ್. ಪದ್ಮಕುಮಾರ್ ರವರು ವಹಿಸಿದ್ದರು. ಪ್ರಾರಂಭದಲ್ಲಿ ಸಂಘದ ಕಾರ್ಯದರ್ಶಿ ರಾಜು ಬಿ. ಹೆಚ್. ರವರು ಸ್ವಾಗತಿಸಿದರು. ಅಧ್ಯಕ್ಷರು ದೀಪಾವಳಿಯ ಶುಭಾಶಯಗಳೊಂದಿಗೆ ಮಾತನಾಡುತ್ತಾ, ಎಲ್ಲ ಸದಸ್ಯರು ಮುಂದಿನ ಸಭೆಯಲ್ಲಿ ಭಾಗವಸುವಂತೆ ವಿನಂತಿಸಿದರು. ಉಪಾಧ್ಯಕ್ಷರಾದ ಕೃಷ್ಣಪ್ಪ ರವರು ಸಂಘಕ್ಕೆ ಟೇಬಲ್ ಒಂದನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು. ಸಂಘದ ಕೋಶಧಿಕಾರಿ ಸಂಜೀವ ರವರು ಉಚಿತವಾಗಿ 5 ಚೇರ್, ಅಧ್ಯಕ್ಷರು 10 ಚೇರ್, ಹರೀಶ್ 5 ಚೇರ್, ವಸಂತ ಹೇಬೆ 1, ಭಾಸ್ಕರ್ 1, ಸಂಜೀವ ಹೇಬೆ 1, ಹಾಗೂ ಸಾಂತಪ್ಪ ಸಂಜಯ ನಗರ 3 ಮತ್ತು ಬೊಮ್ಮಯ್ಯ ಉದಯ ನಗರ 1 ಚಯರ್ ಗಳನ್ನು ನೀಡುವುದಾಗಿ ಹೇಳಿದರು.ದಾನಿಗಳಿಗೆ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ಮಾಡುವ ಬಗ್ಯೆ ಚಿಂತಿಸಲಾಗುವುದೆಂದು ತಿಳಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ವಂದಿಸಿದರು.

Related posts

ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಧರ್ಮಸ್ಥಳ ಭೇಟಿ

Suddi Udaya

ಎಸೆಸೆಲ್ಸಿ ಫಲಿತಾಂಶ ಪ್ರಕಟ- ಈ ಬಾರಿಯೂ ಬಾಲಕಿಯರೇ ಮೇಲುಗೈ

Suddi Udaya

ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಮೇಲಂತಬೆಟ್ಟು ಗ್ರಾ.ಪಂ. ಎದುರು ಪ್ರತಿಭಟನೆ

Suddi Udaya

ನಾಳೆ(ಜೂ.25): ಬೆಳ್ತಂಗಡಿ ವಕೀಲರ ಸಂಘದ ಗ್ರಂಥಾಲಯ ಮತ್ತು ಜನರೇಟರ್ ಉದ್ಘಾಟನೆ

Suddi Udaya

ಈದ್ ಹಬ್ಬದ ಪ್ರಯುಕ್ತ ಅಪ್ಸರಾ ಫ್ಯಾಶನ್ ಸೆಂಟರ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಶೇ.20 ಡಿಸ್ಕೌಂಟ್ ಸೇಲ್: ಶಾಲಾ ಮಕ್ಕಳ ಬುಕ್ಸ್, ಬ್ಯಾಗ್‌ಗಳು, ಕೊಡೆ, ಸ್ಟೇಷನರಿ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯ

Suddi Udaya

ಉಜಿರೆ: ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿಯ 11ನೇ ಸಹಾಯಧನ ಹಸ್ತಾಂತರ

Suddi Udaya
error: Content is protected !!