24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಕ್ಷೇಮ ನಿಧಿ ಯೋಜನೆಯ 10 ನೇ ಸಹಾಯಧನ ಹಸ್ತಾಂತರ

ಬೆಳ್ತಂಗಡಿ : ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಇದರ ರಿಕ್ಷಾ ಚಾಲಕರ ಆಪತ್ಕಾಲದ ನೆರವಿನ ಕ್ಷೇಮ ನಿಧಿ ಯೋಜನೆಯ 10ನೇ ಸಹಾಯಧನವನ್ನು ನಿಡ್ಲೆ ಗ್ರಾಮದ ಬರೆಂಗಾಯ ವನದುರ್ಗಾ ರಿಕ್ಷಾ ಚಾಲಕರ ಸಂಘದ ಸದಸ್ಯರಾದ ರಾಜೇಶ್ ಬರೆಂಗಾಯ ಇವರ ರಿಕ್ಷಾ ಅಪಘಾತದಲ್ಲಿ ಇವರಿಗೆ ಗಾಯಗಳಾಗಿ ಬೆನಕ ಆಸ್ಪತ್ರೆ ಉಜಿರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಮಾಡುತ್ತಿದ್ದಾರೆ. ಇವರಿಗೆ ಕ್ಷೇಮ ನಿಧಿ ರೂ 5,000/ವನ್ನು ಹಸ್ತಾಂತರಿಸಲಾಯಿತು

ಈ ಸಂದರ್ಭದಲ್ಲಿ ನೇತಾಜಿ ಆಟೋ ಚಾಲಕ ಮಾಲಕರ ಸಂಘ ಕಾಯರ್ತಡ್ಕ ಸಂಘದ ಮಾಜಿ ಆಧ್ಯಕ್ಷರು ಹಾಗೂ ಕಳೆಂಜ ಬಿಎಂಎಸ್ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಕಾಯರ್ತಡ್ಕ ,ಬರೆಂಗಾಯ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಶಿವರಾಮ ಬರೆಂಗಾಯ, ಕಾರ್ಯದರ್ಶಿ ದೀಕ್ಷಿತ್ ಬರೆಂಗಾಯ ಇವರು ಹಸ್ತಾಂತರಿಸಿದರು.

ಸದಸ್ಯರಾದ ಜಗದೀಶ್ ಬರೆಂಗಾಯ. ಅಶ್ವತ್ಥ್ ಬರೆಂಗಾಯ, ಜೀವನ್ ಬರೆಂಗಾಯ,ಮನೋಜ್ ಬರೆಂಗಾಯ ಉಪಸ್ಥಿತರಿದ್ದರು.

Related posts

ಮಾ.14-19: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ

Suddi Udaya

ಕೊಕ್ಕಡ ಅಮೃತ ಗ್ರಾ. ಪಂ. ಹಾಗೂ ಅಮೃತ ಸರೋವರದಲ್ಲಿ ಸ್ವಾತಂತ್ರೋತ್ಸವ ಆಚರಣೆ: ನಿವೃತ್ತ ಸೈನಿಕರಿಗೆ ಗೌರವಾರ್ಪಣೆ

Suddi Udaya

ವೇಣೂರು ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya

ಮರೋಡಿ: ಅಬುಸ್ವಾಲಿಹ್ ನಿಧನ

Suddi Udaya

ಕೊಕ್ರಾಡಿ: ಕುಂಟಾಲ್ ಕಟ್ಟೆ ಕ್ರಾಸ್ ನಲ್ಲಿ ಓಮ್ನಿ ಕಾರು ಹಾಗೂ ಬೈಕ್ ನಡುವೆ ಅಪಘಾತ: ಬೈಕ್ ಸವಾರ ಗಂಭೀರ ಗಾಯ

Suddi Udaya

ಶಾಸಕರುಗಳ ಹಕ್ಕುಗಳಿಗೆ ಚ್ಯುತಿಯನ್ನು ಮಾಡಿದ ಅರಣ್ಯಾಧಿಕಾರಿಗಳ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಶಾಸಕರಿಂದ ಹಕ್ಕು ಚ್ಯುತಿ ಮಂಡನೆ

Suddi Udaya
error: Content is protected !!