24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಬರಾಜೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಕಳೆಜ: ಇಲ್ಲಿಯ ಶಿಬರಾಜೆ ಅಂಗನವಾಡಿ ಕೇಂದ್ರದಲ್ಲಿ ನ.27 ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮವು ಗ್ರಾಮಾಭ್ಯುದಯ ಕಾರ್‍ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ, ಪಾದೆ ಕಛೇರಿಯ ಮುಂಭಾಗದಲ್ಲಿ ನಡೆಸಲಾಯಿತು.

ಕಾರ್‍ಯಕ್ರಮ ಅಧ್ಯಕ್ಷರಾಗಿ ಅಂಗನವಾಡಿಯ ಪುಟಾಣಿ ವೈಷ್ಣವಿ ವಹಿಸಿದ್ದರು. ಶಾಲಾ ಮಕ್ಕಳು ದೀಪ ಬೆಳಗಿಸಿ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಕಳೆಂಜ ಗ್ರಾ.ಪಂ. ಸದಸ್ಯರಾದ ಟಿ.ಎಸ್ ನಿತ್ಯಾನಂದ ರೈ, ಪ್ರೇಮಾ ಬಿ.ಎಸ್, ಗ್ರಾಮಾಭ್ಯುದಯ ಕಾರ್‍ಯಕ್ರಮ ಅನುಷ್ಠಾನ ಸಮಿತಿಯ ಅಧ್ಯಕ್ಷ ಪಿ.ಟಿ ಸಬಾಸ್ಟಿನ್ , ಶಾಲೆತ್ತಡ್ಕ ಶಾಲೆಯ ಹೆಚ್.ಎಮ್ ಶ್ರೀಮತಿ ರತ್ನಾ , ಸಿಹೆಚ್.ಒ ನಿಖಿತಾ, ಮಾಜಿ ಅಂಗನವಾಡಿ ಕಾರ್‍ಯಕರ್ತೆ ಪಿ.ಟಿ ಏಲಿಯಮ್ಮ , ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪ್ರತಿಮಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹರೀಶ್ ಒಳಗುಡ್ಡೆರವರು ಅಂಗನವಾಡಿಗೆ ಹೂವಿನ ಗಿಡಗಳನ್ನು ಕೊಡುಗೆಯಾಗಿ ನೀಡಿದರು.

ಮಕ್ಕಳ ಆಟೋಟ, ಸಾಂಸ್ಕೃತಿಕ ಚಟುವಟಿಕೆಯ ಬಹುಮಾನವನ್ನು ವಿತರಿಸಲಾಯಿತು.ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನೆರವೇರಿತು. ಅಂಗನವಾಡಿ ಕಾರ್‍ಯಕರ್ತೆ ಶ್ರೀಮತಿ ಪ್ರಿಯಾ ಕಾರ್‍ಯಕ್ರಮ ನಿರೂಪಿಸಿದರು. ಸಹಾಯಕಿ ಅನ್ನಿಲ್ಲಾ ರೋಶ್ನಿ ವಂದಿಸಿದರು. ಮಕ್ಕಳ ಫೋಷಕರು ಹಾಗೂ ಊರಿನ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

Related posts

ಮೇಲಂತಬೆಟ್ಟು ಗ್ರಾ. ಪಂ. ನ ಗ್ರಾಮ ಸಭೆ

Suddi Udaya

ಬೆಳ್ತಂಗಡಿಯಲ್ಲಿ ಸರಣಿ ಅಪಘಾತ: ಎರಡು ಬಸ್ಸು ಸೇರಿದಂತೆ 7 ವಾಹನಗಳಿಗೆ ಡಿಕ್ಕಿ ಹೊಡೆದ ಲಾರಿ: ಯುವತಿ ಗಂಭೀರ

Suddi Udaya

ಮೇ 7 : ಜ್ಯೋತಿ ಆಸ್ಪತ್ರೆ, ಲಾಯಿಲ– ತುರ್ತು ಮತ್ತು ಅಪಘಾತ ಚಿಕಿತ್ಸಾ ಆರೈಕೆ ಘಟಕ ಉದ್ಘಾಟನೆ

Suddi Udaya

ನೆಲ್ಯಾಡಿ ಪೇಟೆಯಲ್ಲಿ ಪ್ಲೈ ಓವರ್ ನಿರ್ಮಾಣ: ಡಾ.ವೀರೇಂದ್ರ ಹೆಗ್ಗಡೆಯವರಿಗೆ ಹೋರಾಟ ಸಮಿತಿಯಿಂದ ಮನವಿ

Suddi Udaya

ಕೊಕ್ಕಡ : ಶ್ರೀ ರಾಮ‌ ಸೇವಾ ಮಂದಿರಕ್ಕೆ ಅಡುಗೆ ಪಾತ್ರೆ, ಸಾಮಾಗ್ರಿಗಳ ಕೊಡುಗೆ

Suddi Udaya

ಧರ್ಮಸ್ಥಳ: ಕಟ್ಟದಬೈಲು ಅಂಗನವಾಡಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ

Suddi Udaya
error: Content is protected !!