April 2, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೂ.45 ಸಾವಿರ ಮೌಲ್ಯದ ಎಂಡಿಎಂಎ ಪತ್ತೆ – ಮೂವರ‌ ಬಂಧನ


ಬೆಳ್ತಂಗಡಿ: ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ರೂ 45ಸಾವಿರ ಮೌಲ್ಯದ 22.4 ಮಿಲಿ ಗ್ರಾಂ ತೂಕದ ಮಾದಕ ವಸ್ತು ಎಂ.ಡಿ.ಎಂ.ಎನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಮೂರು ಮಂದಿಯನ್ನು ಬಂಧಿಸಿದ ಘಟನೆ ನ.27ರಂದು ರಾತ್ರಿ ನಡೆದಿದೆ.

ಉರುವಾಲು ಗ್ರಾಮದ ಸುಶ್ರುತ ಕೃಷ್ಣ.ಜೆ.ಕೆ (32ವ), ನೆರಿಯ ಗ್ರಾಮದ ಸೆಬಾಸ್ಟಿಯನ್ (31ವ) ಹಾಗೂ ಕೇರಳ ಇಡುಕಿ ಜಿಲ್ಲೆ ವನ್ನಪುರಂ ಗ್ರಾಮ ತೋಡುಪುಯನಿವಾಸಿ ಅನಿಲ್ ತೋಮಸ್ (31ವ) ಎಂಬವರನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

ನ. 27ರಂದು ರಾತ್ರಿ ಉಪ್ಪಿನಂಗಡಿ ಗ್ರಾಮದ ಮೆಕ್ಷಿಕೋ ಹೋಟೆಲ್ ಎದುರು ರಾ.ಹೆ ೭೫ರಲ್ಲಿ ಉಪ್ಪಿನಂಗಡಿ ಪೊಲೀಸರು ತಪಾಸಣೆಗಾಗಿ ವೆನ್ಯೂ ವಾಹನ ನಂಬ್ರ ಏಂ-21-Z-1864 ನೇ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ, ಸದರಿ ವಾಹನವನ್ನು ನಿಲ್ಲಿಸಿದ ಚಾಲಕ ಹಾಗೂ ವಾಹನದಲ್ಲಿದ್ದ ಇನ್ನಿಬ್ಬರು ಪರಾರಿಯಾಗಲು ಯತ್ನಿಸಿದಾಗ ಅವರನ್ನು ಹಿಡಿದುಕೊಂಡು ವಿಚಾರಿಸಿದಾಗ ಈ ಮಾದಕ ವಸ್ತು ಸಾಗಾಟ ಪ್ರಕರಣ ಬೆಳಕಿಗೆ ಬಂದಿತ್ತು.

ಕಾರಿನಲ್ಲಿದ್ದ ರೂ.45 ಸಾವಿರ ಮೌಲ್ಯದ ಮಾದಕ ವಸ್ತು ಎಂಡಿಎಂಎ ಆರೋಪಿಗಳ ಬಳಿಯಿದ್ದ 3 ಮೊಬೈಲ್ ಪೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ ೧೬೨/೨೦೨೩ ಕಲಂ: U/s-೮(ಛಿ) ೨೨(b) ಎನ್.ಡಿ.ಪಿ.ಎಸ್ ಕಾಯ್ದೆ ಡಿ/ತಿ ೩೪ iಠಿಛಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.

Related posts

ಜು.26: ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ “ಕಾರ್ಗಿಲ್ ವಿಜಯ ದಿವಸ್” ಪಂಜಿನ ಮೆರವಣಿಗೆ

Suddi Udaya

ಮುಂಬೈ, ಗೋವಾ, ಮಹಾರಾಷ್ಟ ನಬಾರ್ಡ್ ಬ್ಯಾಂಕ್ ಅಧಿಕಾರಿಯವರಿಂದ ಸಿಡ್ಬಿ ಸಾಲ ಪಡೆದು ಸ್ವ ಉದ್ಯೋಗ ನಡೆಸುತ್ತಿರುವ ಘಟಕಕ್ಕೆ ಭೇಟಿ

Suddi Udaya

ಪಶ್ಚಿಮಘಟ್ಟಗಳ ಸಾಲಿನ ಪ್ರವಾಸಿ ತಾಣಗಳು 6 ದಿನಗಳ ಕಾಲ ನಿರ್ಬಂಧ

Suddi Udaya

ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಆಂ.ಮಾ. ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ

Suddi Udaya

ನಾಲ್ಕೂರು: ಯುವಶಕ್ತಿ ಫ್ರೆಂಡ್ಸ್ ವತಿಯಿಂದ ವೈದ್ಯಕೀಯ ನೆರವು

Suddi Udaya

ಬೆಳ್ತಂಗಡಿ: ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ನವಿಲು

Suddi Udaya
error: Content is protected !!