24 C
ಪುತ್ತೂರು, ಬೆಳ್ತಂಗಡಿ
April 3, 2025
Uncategorized

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಯಕ್ಷಾಶ್ರಯ ಯೋಜನೆ ಅಡಿಯಲ್ಲಿ ಗುರುವಾಯನಕೆರೆ ದೇವಿಪ್ರಸಾದ್ ಆಚಾರ್ಯರಿಗೆ ಮನೆ ಹಸ್ತಾಂತರ

ಗುರುವಾಯನಕೆರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಯಕ್ಷಾಶ್ರಯ ಯೋಜನೆ ಅಡಿಯಲ್ಲಿ ನಿರ್ಮಿಸಿದ ಮನೆಯನ್ನು ಯಕ್ಷಗಾನ ಕಲಾವಿದ ಸುಂಕದಕಟ್ಟೆ ಮೇಳದ ದೇವಿಪ್ರಸಾದ್ ಆಚಾರ್ಯರಿಗೆ ನ.24ರಂದು ತುಳಸೀ ಪೂಜೆಯ ಶುಭದಿನದಂದು ಗುರುವಾಯನಕೆರೆಯಲ್ಲಿ ಗೃಹಪ್ರವೇಶ ಮಾಡಿಸಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮನೆಯ ಕೊಡುಗೈ ದಾನಿ ಅಶೋಕ್ ತೌರೋ ಜೆಪ್ಪು ಮಜಿಲ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸುದೇಶ್ ರೈ, ಗೌರವ ಸಲಹೆಗಾರ ಭುಜಬಲಿ ಧರ್ಮಸ್ಥಳ, ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಪುಂಜಾಲಕಟ್ಟೆ ಘಟಕದ ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ, ಕುವೆಟ್ಟು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ, ಬೆಳ್ತಂಗಡಿ ವಿಶ್ವಕರ್ಮ ಸಂಘದ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಯಕೋಡಿ ಉಪಸ್ಥಿತರಿದ್ದರು.

ದಿನೇಶ್ ಶೆಟ್ಟಿ ಕಾವಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ಭಟ್ ಕೊಂಕಣಾಜೆ ವಂದಿಸಿದರು.

Related posts

ಉಜಿರೆ: ಉಮೇಶ್ ಮುಂಡತ್ತೋಡಿ ರವರ ಮನೆಗೆ ಬಿಜೆಪಿ ಎಸ್.ಸಿ ಮೋರ್ಚಾದ ಪದಾಧಿಕಾರಿಗಳ ಭೇಟಿ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಸದಸ್ಯರಿಗೆ ಎಲ್.ಎ.ವಿ ತರಬೇತಿ ಕಾರ್ಯಕ್ರಮ

Suddi Udaya

ಮೇಲಂತಬೆಟ್ಟುವಿನ ಮನೆಯಂಗಳದಲ್ಲಿ ಭಾರಿಗಾತ್ರದ ಕಾಳಿಂಗ ಸರ್ಪ: ಕಾಳಿಂಗ ಸರ್ಪವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

Suddi Udaya

ಗುರುವಾಯನಕೆರೆ ನವಶಕ್ತಿ ಮನೆಗೆ ವಿಧಾನಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಬೇಟಿ

Suddi Udaya

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಹರ್ಷಿತ ಆಯ್ಕೆ

Suddi Udaya

ಕೊಕ್ಕಡ ಪೇಟೆಯಲ್ಲಿ ಸಿ.ಆರ್.ಪಿ.ಎಫ್ ಹಾಗೂ ಧರ್ಮಸ್ಥಳ ಪೊಲೀಸರ ಪಥ ಸಂಚಲನ

Suddi Udaya
error: Content is protected !!