September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಹಿರಿಯ ಅಡಿಕೆ ವ್ಯಾಪಾರಿಯಾಗಿದ್ದ ಟಿ. ಉಮರಬ್ಬ ನಿಡಿಗಲ್ ನಿಧನ

ಬೆಳ್ತಂಗಡಿ: ಮೂಲತಃ ಮುಡಿಪ್ಪು ತಲೆಕ್ಕಿ‌‌ನಿವಾಸಿ, ಪ್ರಸ್ತುತ ಕಲ್ಮಂಜ ಗ್ರಾಮದ ನಿಡಿಗಲ್ ಬದ್ರಿಯಾ ಜುಮ್ಮಾ ಮಸ್ಜಿದ್ ಸನಿಹದಲ್ಲಿ‌ ನೆಲೆಸಿದ್ದ,‌ ಹಿರಿಯ ಅಡಿಕೆ ವ್ಯಾಪಾರಿ ಟಿ ಉಮರಬ್ಬ (70ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ನ.30 ರಂದು ನಿಧನರಾದರು.

ಇವರು ಬದ್ರಿಯಾ ಜುಮ್ಮಾ ಮಸ್ಜಿದ್ ಸೋಮಂತಡ್ಕ ಇಲ್ಲಿನ ಆಡಳಿತ ಸಮಿತಿ ಮತ್ತು ಕುತುಬಿಯತ್ ಸಮಿತಿಯಲ್ಲಿ ದೀರ್ಘ ಕಾಲ ಪದಾಧಿಕಾರಿಯಾಗಿದ್ದು, ನಿಡಿಗಲ್ ಮಸ್ಜಿದ್ ನಿರ್ಮಾಣವಾದ ಬಳಿಕ ಅಲ್ಲಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸೇವೆ ಸಲ್ಲಿಸಿದ್ದರು. ಅಡಿಕೆ ವ್ಯಾಪಾರಿಯಾಗಿ ತಾಲೂಕಿನಾಧ್ಯಂತ ಹೆಸರುವಾಸಿಯಾಗಿದ್ದರು. ಜೊತೆಗೆ ಅಡುಗೆ ಪಾಕ ತಜ್ಞರಾಗಿಯೂ ಪ್ರಸಿದ್ಧರಾಗಿದ್ದರು.

ಮೃತರು ಪತ್ನಿ ಐಸಮ್ಮ, ಮಕ್ಕಳಾದ ಮೊಯಿದಿನ್‌ಕುಂಞಿ(ಹಮೀದ್), ಮುಹಮ್ಮದ್ ಶರೀಫ್, ಝಕರಿಯಾ,‌ ಫಾತಿಮಾ ಮತ್ತು ರುಕಿಯಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ..

Related posts

ಬೆಳ್ತಂಗಡಿ : ಲಾರಿ- ಬೈಕ್ ಅಪಘಾತದಲ್ಲಿ ಇಬ್ಬರು ಸಾವು ಪ್ರಕರಣ: ಬೆಳ್ತಂಗಡಿ ನ್ಯಾಯಾಲಯದಿಂದ ಲಾರಿ ಚಾಲಕನಿಗೆ ದಂಡ ಹಾಗೂ ಜೈಲು ಶಿಕ್ಷೆ ಪ್ರಕಟ

Suddi Udaya

ಕೊಯ್ಯೂರಿನ ಮಾವಿನಕಟ್ಟೆಯಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

Suddi Udaya

ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಗೆ ದಯಾ ವಿಶೇಷ ಶಾಲೆಯ ವತಿಯಿಂದ ಗೌರವಾರ್ಪಣೆ

Suddi Udaya

ಲಾಯಿಲ ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಯೋಗೀಶ್ ಕುಮಾರ್ ನಡಕ್ಕರ

Suddi Udaya
error: Content is protected !!