July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಡಿರ ಬನದಲ್ಲಿ ನಾಲ್ಕು ನಾಗನ ಕಲ್ಲುಗಳು ಹಾಗೂ ಎರಡು ಮಣ್ಣಿನ ಮಡಕೆ, ಒಂದು ತಿಬಿಲೆ ಪತ್ತೆ

ಕೊಕ್ಕಡ : ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ದೇವಸ್ಥಾನದ ಹತ್ತಿರ ಕಡಿರ ಬನ ಎಂಬಲ್ಲಿ ನಾಗನ ಸಾನಿಧ್ಯ ಇದ್ದು, ನಾಗನ ಬಗ್ಗೆ ಕಂಡು ಬರಲಿಲ್ಲ. ದೇವಸ್ಥಾನದಲ್ಲಿ 2 ವರ್ಷಗಳ ಹಿಂದೆ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ನಾಗತಂಬಿಲ ನೆರವೇರಿಸಲಾಯಿತು. ಆ ಜಾಗ ಸರಕಾರ ಎಂದು ತಿಳಿದು ಬಂದ ಕೂಡಲೇ ಜಿಲ್ಲಾಧಿಕಾರಿಗಳಿಗೆ ಜಾಗವನ್ನು ದೇವಸ್ಥಾನಕ್ಕೆ ಮಾಡಿಕೊಡಬೇಕೆಂದು ಬರೆದುಕೊಳ್ಳಲಾಯಿತು. ಅದರಂತೆ 5ಎಕ್ರೆ ಜಾಗವನ್ನು ಜಿಲ್ಲಾಧಿಕಾರಿಯವರು ಧಾರ್ಮಿಕ ದತ್ತಿ ಇಲಾಖೆಗೆ ಮಂಜೂರುಗೊಳಿಸಿ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.

ದೇವಸ್ಥಾನದ ವತಿಯಿಂದ 12 ದಿನಗಳ ಹಿಂದೆ ಅನುಜ್ಞ ಕಲಶ ನೆರವೇರಿಸಿ ಡಿ.2ರಂದು ಜೀರ್ಣೋದ್ದಾರ ಕೆಲಸ ಪ್ರಾರಂಭಿಸಲಾಯಿತು. ಈ ಸಂಧರ್ಭ ತಂಬೂರಿ ನಾಗ, ನಾಗ, ಕಾಡ್ಯಾ ನಾಗ ಎನ್ನುವ ನಾಲ್ಕು ನಾಗನ ಕಲ್ಲುಗಳು ಹಾಗೂ ನಾಗನ ಉಬ್ಬು ಚಿತ್ರಗಳನ್ನು ಹೊಂದಿದ ಗಟ್ಟಿಮುಟ್ಟಾದ 2ಮಣ್ಣಿನ ಮಡಕೆ, 1ತಿಬಿಲೆ ದೊರೆತಿದೆ. ಜಗನ್ನಿವಾಸ ರಾವ್ ರವರು ಇದು ಸುಮಾರು 500ವರ್ಷಗಳ ಹಿಂದಿನ ವಸ್ತುಗಳು ಹಾಗೂ ಇದು ಬಹಳ ಅಪರೂಪ ಎಂದು ವಿವರಿಸಿದ್ದಾರೆ.

Related posts

ಜೆಸಿಐ ಉಜಿರೆ ಸಿಟಿ ಘಟಕದ ಮಹಿಳಾ ಜೇಸಿ ವಿಭಾಗದಿಂದ “ತಾಯಿಯೊಂದಿಗೆ ನಾನು” ಫೋಟೋ ಸ್ಪರ್ಧೆ

Suddi Udaya

ನ.15: ಕಸ್ತೂರಿ ರಂಗನ್ ವರದಿ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಬೆಂಬಲ

Suddi Udaya

ಫೆ.4: ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್‌ನಲ್ಲಿ ಅಮೃತ ಮಹೋತ್ಸವ ಸಂಭ್ರಮ, ಗಿಫ್ಟ್ ಕೂಪನ್ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಕೊಯ್ಯೂರು: ದೇವಸ ಬಾಬು ಗೌಡ ನಿಧನ

Suddi Udaya

ಕನ್ಯಾಡಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ರಕ್ಷಿತ್ ಶಿವರಾಮ್

Suddi Udaya

ಉಜಿರೆ: ರೆಂಜಾಳ ಗೆಳೆಯರ ಬಳಗ ಸೇವಾ ಟ್ರಸ್ಟ್ ನ ಮೊಸರುಕುಡಿಕೆ ಉತ್ಸವ ಸಮಿತಿ ರಚನೆ

Suddi Udaya
error: Content is protected !!