25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸರಕಾರಿ ಶಾಲೆಗಳನ್ನು ಮಾದರಿಯಾಗಿಸಲು ಬದುಕು ಕಟ್ಟೋಣ ಬನ್ನಿ ತಂಡ ಪಣ

ಬೆಳ್ತಂಗಡಿ: ಪ್ರವಾಹ ಬಂದ ಸಂದರ್ಭದಲ್ಲಿ ಅಲ್ಲಿನ ಕುಟುಂಬಗಳ ಕಷ್ಟಗಳನ್ನು ಅರಿತು ಮಕ್ಕಳ ಭವಿಷ್ಯಕ್ಕೆ ನೆರೆ ಹಾವಳಿ ತೊಡಕಾಗಬಾರದು ಕುಟುಂಬಗಳು ಎದೆಗುಂದಬಾರದು ಎಂದು ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಬದುಕು ಕಟ್ಟೋಣ ತಂಡದ ಸಂಚಾಲಕರುಗಳಾದ ಲಕ್ಷ್ಮೀ ಗ್ರೂಪ್ ನ ಮೋಹನ್ ಕುಮಾರ್ ಮತ್ತು ಉಜಿರೆ ಸಂಧ್ಯಾ ಟ್ರೇಡರ್ಸ್ ನ ರಾಜೇಶ್ ಪೈ ನೇತೃತ್ವದ ತಂಡ ಅಲ್ಲಿಂದಲೇ ದೃಢ ಸಂಕಲ್ಪ ಮಾಡಿದ ಪರವಾಗಿ ಅದೇ ಕನಸನ್ನು ನನಸು ಮಾಡಲು ಹೊರಟಿದವರು ಇಂದು ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಮೂಲ ಸೌಲಭ್ಯ ವಂಚಿತರಾಗಬಾರದು ಎಂದು ಗ್ರಾಮೀಣ ಸರಕಾರಿ ಶಾಲೆಗಳನ್ನು ಅಭಿವೃದ್ಧಿಗೆ ದತ್ತು ಪಡೆಯುವ ಮೂಲಕ ಗ್ರಾಮೀಣ ಸರಕಾರಿ ಶಾಲಾ ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಿದೆ ಉಜಿರೆ ಬದುಕು ಕಟ್ಟೋಣ ತಂಡ.


ಕನಸು – ಭರವಸೆಯ ಬೆಳಕು, ನಮ್ಮೂರ ಸರಕಾರಿ ಶಾಲೆ ನಮ್ಮ ಹೆಮ್ಮೆ

ಕನಸು – ಭರವಸೆಯ ಬೆಳಕು, ನಮ್ಮೂರ ಸರಕಾರಿ ಶಾಲೆ ನಮ್ಮ ಹೆಮ್ಮೆ. ಈ ಕನಸನ್ನು ಕಂಡು ಮುಂದಡಿಯಿಟ್ಟ ಬದುಕು ಕಟ್ಟೋಣ ತಂಡ ಪ್ರತೀ ವರ್ಷ ಗ್ರಾಮೀಣ ಭಾಗದ ಕನಿಷ್ಠ ಎರಡು ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಬೆಳಗಿಸಲು ಮುಂದಾಗಿದೆ. ಸ್ಥಳೀಯ ಮಕ್ಕಳು ಸರಕಾರಿ ಶಾಲೆಗೆ ಬರಬೇಕು ಮತ್ತು ಇಲ್ಲಿ ಮಕ್ಕಳಿಗೆ ಬೇಕಾದ ಮೂಲ ಸೌಕರ್ಯ ಒದಗಿಸಬೆಕು ಎಂಬುದೇ ಇವರ ಚಿಂತನೆ.


ಬದುಕು ಕಟ್ಟೋಣ ತಂಡದ ಸದಸ್ಯರೇ ಶ್ರಮಿಕರು
ಬದುಕು ಕಟ್ಟೋಣ ತಂಡದಲ್ಲಿ ಸುಮಾರು 800 ಕ್ಕೂ ಅಧಿಕ ಸದಸ್ಯರಿದ್ದು ಎಲ್ಲರೂ ಶ್ರಮಜೀವಿಗಳೆ. ಚಾರ್ಮಾಡಿ, ಕೊಳಂಬೆ ಇನ್ನಿತರ ವ್ಯಾಪ್ತಿ ಪ್ರದೇಶದಲ್ಲಿ ನೆರೆ ಬಂದ ಸಂದರ್ಭ ಹಗಲು-ರಾತ್ರಿ ಎನ್ನದೇ ಶ್ರಮಿಸಿದ ಸದಸ್ಯರಿಗೆ ಬದುಕು ಕಟ್ಟೋಣ ತಂಡ ಜೀವಾಳ. ಇದರ ನೇತೃತ್ವ ವಹಿಸಿದ ಸಂಚಾಲಕರುಗಳು ನೂರಾರು ಮಂದಿಗೆ ನಿತ್ಯ ಉದ್ಯೋಗ ಕೊಟ್ಟು ಆಶ್ರಯ ನೀಡಿದವರು. ಶಾಲೆಗಳ ನವೀಕರಣ ಸಂದರ್ಭದಲ್ಲಿ ಟೈಲ್ಸ್ ಅಳವಡಿಕೆ, ಪೈಂಟಿಂಗ್, ಇನ್ನಿತರ ಎಲ್ಲಾ ಕಾರ್ಯಗಳನ್ನು ಮಾಡುತ್ತಿರುವವರು ಬದುಕು ಕಟ್ಟೋಣ ತಂಡದ ಸದಸ್ಯರುಗಳೇ.
ಉತ್ಸಾಹದಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರು
ಮಕ್ಕಳ ಸಂಖ್ಯೆ ಅಧಿಕವಿದೆ ಆದರೆ ಮಕ್ಕಳಿಗೆ ಬೇಕಾದಂತಹ ಮೂಲ ಸೌಕರ್ಯ ಅಗತ್ಯವಿದೆ ಎಂದು ಶಾಸಕ ಹರೀಶ್ ಪೂಂಜ, ಬದುಕು ಕಟ್ಟೋಣ ತಂಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಇವರಲ್ಲಿ ವಿನಂತಿಸಿದ್ದು ಇವರ ಕಾಳಜಿಗೆ ಮನಸೋತ ಇವರೆಲ್ಲರೂ ಈ ಶಾಲೆಯನ್ನು ಬೆಳಗಿಸಲು ಮುಂದಾಗಿದ್ದಾರೆ.
ಶಾಸಕರ ನಿಧಿಯಿಂದ 7 ಲಕ್ಷ ರೂ ಅನುದಾನ

ಸೋರುತ್ತಿರುವ ಕಟ್ಟಡಕ್ಕೆ ಪರಿಹಾರ ರೂಪಿಸಲು ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಶಾಸಕ ಹರೀಶ್ ಪೂಂಜರವರಲ್ಲಿ ಮನವಿ ಮಾಡಿದ್ದು ಇದಕ್ಕೆ ಸ್ಪಂದಿಸಿ 4 ಲಕ್ಷ ರೂ. ವೆಚ್ಚದಲ್ಲಿ ಈಗಾಗಲೇ ಮೇಲ್ಛಾವಣಿ ರೂಪಿಸಿದ್ದು ಮತ್ತೆ 3 ಲಕ್ಷ ರೂ. ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಶಾಲೆಯ ಆದಾಯಕ್ಕೆ ಅಡಿಕೆ ಸಸಿ ನೆಟ್ಟು ಬೆಳೆಸುತ್ತಿರುವ ಸ್ಥಳೀಯ ವಿದ್ಯಾಭಿಮಾನಿಗಳು

ಸರಕಾರಿ ಶಾಲಾ ಮಕ್ಕಳಿಗೆ ಸಹಾಯವಾಗಬೇಕೆನ್ನುವ ದೃಷ್ಟಿಯಲ್ಲಿ ಸ್ಥಳೀಯ ವಿದ್ಯಾಭಿಮಾನಿಗಳು 250 ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಬೆಳೆಸಿ ಸ್ವಂತ ಮನೆಯ ಗಿಡದಂತೆ ಸಲಹುತ್ತಿರುವುದು ಇಲ್ಲಿನ ವಿದ್ಯಾಭಿಮಾನಿಗಳ ಕಾಳಜಿ ಇತರರಿಗೆ ಮಾದರಿ.


ಬದುಕು ಕಟ್ಟೋಣ ತಂಡ ಸಂಚಾಲಕರು ಮೋಹನ್ ಕುಮಾರ್ ಮಾತನಾಡಿ ಹಿರಿಯರ ಮಾರ್ಗದರ್ಶನ ಡಿ.ವೀರೇಂದ್ರ ಹೆಗ್ಗಡೆಯವರ, ಹೇಮಾವತಿ ವಿ. ಹೆಗ್ಗಡೆಯವರ, ಡಿ. ಹರ್ಷೇಂದ್ರ ಕುಮಾರ್ ಮತ್ತು ಅವರ ಕುಟುಂಬಸ್ಥರ ಸಮಾಜ ಸೇವೆಗೆ ನೀಡುವ ಕಾಳಜಿಯೇ ನಮಗೆ ಪ್ರೇರಣೆ ಮತ್ತು ವಿಜಯವಾಣಿ ಪತ್ರಿಕೆಯ ಡಾ| ವಿಜಯ ಸಂಕೇಶ್ವರ್ ಮತ್ತು ಡಾ| ಆನಂದ್ ಸಂಕೇಶ್ವರ್ ನಮಗೆ ವಿಜಯರಥ ಪ್ರಶಸ್ತಿ ಕೊಟ್ಟ ನಂತರ ಇನ್ನಷ್ಟು ಸಮಾಜ ಸೇವೆ ಮಾಡುವ ಚಿಂತನೆ ಬಂದಿದ್ದು ಇದಕ್ಕೆ ಶಕ್ತಿಯಾಗಿ ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ನಮ್ಮ ಕಾರ್ಯಕ್ಕೆ ಜೊತೆಯಾಗಿ ನಿಂತಿದ್ದು ಮುಂದೆ ಇವರ ಆದರ್ಶಗಳೊಂದಿಗೆ ತಾಲೂಕಿನ ಗ್ರಾಮೀಣ ಸರಕಾರಿ ಶಾಲೆಗಳಿಗೆ ಹೊಸ ಕಾರ್ಯಕಲ್ಪ ಕೊಡಲು ಬದುಕು ಕಟ್ಟೋಣ ತಂಡ ಸಿದ್ಧವಾಗಿದೆ ಎಂದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ್ ಮಾತನಾಡಿ ನಮ್ಮೂರಿನ ಶಾಲೆ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ನೆರವಾಗಬೇಕು ಎಂಬುದೇ ಗ್ರಾಮಸ್ಥರಾದ ನಮ್ಮೆಲ್ಲರ ಸಂಕಲ್ಪ.ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ಶಾಸಕ ಹರೀಶ್ ಪೂಂಜ, ಬದುಕು ಕಟ್ಟೋಣ ತಂಡ, ನಮ್ಮ ಗ್ರಾಮ ಪಂಚಾಯತ್ ಸಹಕಾರ ನೀಡುತ್ತಿದ್ದು ಇಲ್ಲಿನ ಶಿಕ್ಷಕರ ಸೇವೆ ಮತ್ತು ಎಲ್ಲರ ವಿಶ್ವಾಸದಿಂದ ಮಾದರಿ ಶಾಲೆ ಮಾಡುವುದೇ ನಮ್ಮ ಕಲ್ಪನೆ ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯ ಮಾತನಾಡಿ ನಮ್ಮ ಶಾಲೆಯ ಏಳಿಗೆಗೆ ಇಲ್ಲಿನ ಶಾಲಾಭಿವೃದ್ಧಿ ಸಮಿತಿ, ಗ್ರಾಮಸ್ಥರು, ಸ್ಥಳೀಯ ಪಂಚಾಯತ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ, ಬದುಕು ಕಟ್ಟೋಣ ತಂಡ, ಶಾಸಕರು ಶ್ರಮಿಸುತ್ತಿರುವುದು ನಮ್ಮ ಭಾಗ್ಯ. ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರಾದ ನಾವೆಲ್ಲಾ ಶ್ರಮಿಸುತ್ತೇವೆ ಎಂದು ಹೇಳಿದರು.

Related posts

ಬೆನಕ ರಜತ ಸಂಭ್ರಮ ಲಾಂಛನ ಅನಾವರಣ

Suddi Udaya

ಬಂದಾರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ದಿನೇಶ್ ಖಂಡಿಗ ಆಯ್ಕೆ

Suddi Udaya

ಕೊಯ್ಯೂರು ಪಂಚದುರ್ಗ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

‘ಪ್ರಾಚೀನ ಕನ್ನಡ ಸಾಹಿತ್ಯ ಅಧ್ಯಯನ: ಪ್ರಾರಂಭಿಕ ಪ್ರಯತ್ನಗಳು’ ಪ್ರಚಾರೋಪನ್ಯಾಸ ಕಾರ್ಯಕ್ರಮ

Suddi Udaya

ಹೋರಾಟದ ಮೂಲಕ ಧರ್ಮ ಜಾಗೃತಿಯನ್ನು ಮಾಡಿದ್ದೇನೆ: ಮಹೇಶ್ ಶೆಟ್ಟಿ ತಿಮರೋಡಿ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ : ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!