ತೆಕ್ಕಾರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಸಂಬಂಧ ಪಟ್ಟಂತೆ ಸೂಕ್ತವಾದ ಸಲಹೆ, ಮಾಹಿತಿ ನೀಡಲು ನೀಲೇಶ್ವರದ ತಂತ್ರಿವರ್ಯರಾದ ಉಚ್ಚಿಲ ಪದ್ಮನಾಭ ತಂತ್ರಿಯವರು ಆಗಮಿಸಿದ್ದರು.
ಟ್ರಸ್ಟ್ ಅಧ್ಯಕ್ಷರಾದ ನಾಗಭೂಷಣ ರಾವ್ ಬಾಗ್ಲೋಡಿ, ತುಕಾರಾಂ ನಾಯಕ್, ಹಾಗೂ ಪ್ರಮುಖರಲ್ಲಿ ಚರ್ಚೆ ನಡೆಸಿ ಗರ್ಭಗುಡಿ, ಪಾಣಿಪೀಠ ಅರ್ಧ ವೃತ್ತಾಕಾರದ ವಿಶಿಷ್ಟ ರೀತಿಯಲ್ಲಿ ನಿರ್ಮಿಸಲು ವಾಸ್ತು ಶಿಲ್ಪಿ ಜಗನ್ನಿವಾಸ್ ರಾವ್ ಅವರೊಂದಿಗೆ ಸಂವಾದ ನಡೆಸಿ ಮೂರು ತಿಂಗಳಲ್ಲಿ ಜಮೀನು ಸಮತಟ್ಟು ಮಾಡಿ ಬಾವಿ ಕೆಲಸ ಸಮಾಪ್ತಿಗೊಳಿಸಿ ಮತ್ತೊಮ್ಮೆ ತಂತ್ರಿವರ್ಯರನ್ನ ಕರೆಸಿ ಮೂರ್ತಿ ಜಲಧಿವಾಸ ಮಾಡಿ ಗಂಗಾಪೂಜೆ, ಗೋಪೂಜೆ, ಬ್ರಾಹ್ಮಣ ಸತ್ಕಾರ ಮಾಡಿ ವೈದಿಕ ಕಾರ್ಯ ನೆರವೇರಿಸಿ ಶಿಲಾನ್ಯಾಸ ಕಾರ್ಯಕ್ರಮ ಮಾಡುವ ಶುಭ ಮುಹೂರ್ತ ನಿಗದಿ ಪಡಿಸಲಾಗುವುದು. ವಿಶೇಷವಾದ ವಾಸ್ತು ಶಿಲ್ಪದಲ್ಲಿ ಶ್ರೀ ಗೋಪಾಲಕೃಷ್ಣ ದೇವಾಲಯ ನಿರ್ಮಾಣ ಕಾರ್ಯರೂಪಕ್ಕೆ ಮಹತ್ತರ ವಿಷಯ ಹಂಚಿಕೊಂಡರು. ಈ ಭೂಮಿಯು ಮಣ್ಣಿನ ಸತ್ವ ಕಳೆದು ಕೊಳ್ಳದೆ ಫಲವತ್ತತೆ ಉಳಿಸಿಕೊಂಡಿದೆ ಇಲ್ಲಿಗೆ ಆಗಮಿಸಿದಾಗ ಮನಸ್ಸು ಮುಂದಗೊಳ್ಳುತಿದೆ ದೇವರನ್ನು ಆರಾಧಿಸುವ ಭಕ್ತರ ಪಾಲಿನ ಸಕಲ ಇಷ್ಟಾರ್ಥ ಸಿದ್ಧಿಸುವ ಕೇಂದ್ರ ವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಮಿತಿಯಿಂದ ಭಕ್ತರ ಪರವಾಗಿ ಪ್ರಮುಖರು ಭಕ್ತಿ ಭಾವದ ಸ್ವಾಗತ ನೀಡಿ, ಫಲಪುಷ್ಪ ನೀಡಿ, ಸತ್ಕರಿಸಿ ಗೌರವಿಸಲಾಯಿತು. ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಊರ ಭಕ್ತರು ಭಾಗವಹಿಸಿದ್ದರು.