29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ವೇಣೂರು ಪ್ರಖಂಡ, ಹಿಂದೂ ಹೃದಯ ಸಂಗಮ ಸಮಿತಿ ಆಶ್ರಯದಲ್ಲಿ ಅಳದಂಗಡಿಯಲ್ಲಿ ಬೃಹತ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮ, ವೈಭವದ ಶೋಭಾಯಾತ್ರೆ, ಕುಣಿತಾ ಭಜನೆ

ಬೆಳ್ತಂಗಡಿ: ನಾಡಿನ ಸಮಸ್ತ ಹಿಂದೂ ಬಾಂಧವರ ಒಗ್ಗೂಡುವಿಕೆಯಿಂದ ವಿಶ್ವ ಹಿಂದೂ ಪತಿಷತ್ ಮತ್ತು ಬಜತಂಗದಳ ಹಿಂದೂ ಹೃದಯ ಸಂಗಮ ಸಮಿತಿ ವೇಣೂರು ಪ್ರಖಂಡ ವತಿಯಿಂದ ಬೃಹತ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮವು ಅಳದಂಗಡಿಯಲ್ಲಿ ಡಿ.10 ರಂದು ನಡೆಯಿತು.

ವೇಣೂರು ಪ್ರಖಂಡದ 31 ಗ್ರಾಮಗಳ ಹಿಂದೂ ಭಾಂದವರು ಭಾಗಿಯಾಗಿದ್ದರು.ನಾಡಿನ ಹಲವಾರು ಭಜನಾ ತಂಡಗಳಿಂದ ಕುಣಿತಾ ಭಜನೆ ನಡೆಯಿತು. ಅಳದಂಗಡಿಯಿಂದ ಸೋಮನಾಥೇಶ್ವರಿ ಕ್ಷೇತ್ರದ ಮೈದಾನದವರೆಗೆ ವಿವಿಧ ವೇಷಭೂಷಣಗಳಿಂದ ಬೃಹತ್ ಶೋಭಾಯಾತ್ರೆ ನಡೆಯಿತು.ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಏಕ ಜಾತಿಧರ್ಮ ದ್ವಾರಕ ಮಾಯಿ ಮಠದ ಶ್ರೀ ಸಾಯಿ ಈಶ್ವರ ಗುರೂಜಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ವಹಿಸಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮುಖ್ಯ ಭಾಷಣ ಮಾಡಿದರು.ಮಂಗಳೂರಿನ ವೆನ್ಕಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ,ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ವಿಶ್ವಹಿಂದೂ ಪರಿಷತ್ ವೇಣೂರು ಪ್ರಖಂಡದ ಅಧ್ಯಕ್ಷ ಎಸ್.ಆರ್ ಭಾಸ್ಕರ ಸಾಲಿಯಾನ್,ಹಿಂದೂ ಹೃದಯ ಸಂಗಮ ಸಮಿತಿ ಅಧ್ಯಕ್ಷ ಜಯ ಸಾಲಿಯಾನ್,ಪ್ರಧಾನ ಕಾರ್ಯದರ್ಶಿ ಎಂ.ಪಿ ಶೇಖರ್,ಸಲಹೆಗಾರ ಮೋಹನ್ ಅಂಡಿಂಜೆ,ಪ್ರಮುಖರಾದ ಗಣೇಶ್ ಹೆಗ್ಡೆ,ರಾಜು ಪೂಜಾರಿ,ರಘು,ಹೆಚ್.ಎಲ್ ರಾವ್,ಭಾಸ್ಕರ ಧರ್ಮಸ್ಥಳ,ಸುಂದರ ವೇಣೂರು, ಶಶಿಧರ ಡೋಂಗ್ರೇ,ವಿಶ್ವನಾಥ ಹೊಳ್ಳ,ಸದಾನಂದ ಪೂಜಾರಿ ಉಂಗೀಲಬೈಲು, ರತ್ನಾಕರ ಬುಣ್ಣನ್, ಸೋಮನಾಥ ಬಂಗೇರ ವರ್ಪಾಳೆ, ಸುಧೀರ್ ಆರ್ ಸುವರ್ಣ, ಪ್ರಕಾಶ್ ಪುರೋಹಿತ್,ಆನಂದ ಒಡಿಮಾರ್, ಉದಯ ಹೆಗ್ಡೆ ನಾರಾವಿ,ಮಾಧವ ಶಿರ್ಲಾಲು,ಯಶೋಧರ ಮರೋಡಿ,ಪ್ರಭಾಕರ ಆರಂಭೋಡಿ, ಪ್ರಶಾಂತ್ ಎಂ ಪಾರೆಂಕಿ,ಕರುಣಾಕರ ಹೊಸಂಗಡಿ, ತಾರನಾಥ ಗೌಡ ಶಿರ್ಲಾಲು,ವಿಜಯ ಗೌಡ ವೇಣೂರು,ಅರುವ ಕೊರಗಪ್ಪ ಶೆಟ್ಟಿ, ವಸಂತ ಭಟ್ ನಾರಾವಿ,ಶಿವಭಟ್ ಕಟ್ಟೂರು, ಸಂತೋಷ್ ಕುಮಾರ್ ಕಾಪಿನಡ್ಕ,ನಿತ್ಯಾನಂದ ಶೆಟ್ಟಿ ನೊಚ್ಚ, ಉಪಸ್ಥಿತರಿದ್ದರು.ಹಿಂದೂ ಹೃದಯ ಸಂಗಮ ಸಮಿತಿಯ ಕಾರ್ಯಕರ್ತರು ಸಹಕರಿಸಿದರು.

Related posts

ಬೆಳ್ತಂಗಡಿ : ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ

Suddi Udaya

ನಾಳ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಮದ್ದಡ್ಕ ಹೆಲ್ಪ್‌ಲೈನ್ ಎಂಡ್ ಚಾರಿಟೇಬಲ್ ಫೌಂಡೇಶನ್ ವಾರ್ಷಿಕ ಮಹಾಸಭೆ

Suddi Udaya

ಮಾಜಿ ಶಾಸಕ ಕೆ ವಸಂತ ಬಂಗೇರ ರವರನ್ನು ಭೇಟಿ ಮಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಮ್

Suddi Udaya

ಆ.1 ರಿಂದ 15ರ ವರೆಗೆ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಸಾರಿಮೇಳ: ಗ್ರಾಹಕರಿಗೆಂದೇ ಆಯ್ದು ತಂದ ವಿವಿಧ ಉಡುಪುಗಳ ಮೇಲೆ ಡಿಸ್ಕೌಂಟ್ ಸೇಲ್

Suddi Udaya

ಹರಿಪ್ರಸಾದ್ ಹೊಸಂಗಡಿ ಅವರಿಗೆ ತಾಲೂಕು ಯುವಜನ ಒಕ್ಕೂಟದಿಂದ ಶ್ರದ್ಧಾಂಜಲಿ

Suddi Udaya
error: Content is protected !!