26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ: ಪುಟಾಣಿ ಮಕ್ಕಳ ನೂತನ ‘ಸದಾಶಿವೇಶ್ವರ’ ಭಜನಾ ತಂಡ ರಚನೆ

ಕಲ್ಮಂಜ : ಕಲ್ಮಂಜ ಗ್ರಾಮದ ಊರವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಕಲ್ಮಂಜ ಈ ಸಂಘಟನೆಗಳ ಸಹಕಾರದೊಂದಿಗೆ ನೂತನ ‘ಸದಾಶಿವೇಶ್ವರ’ ಭಜನಾ ತಂಡವನ್ನು ರಚನೆ ಮಾಡಲಾಯಿತು.

ಭಜನಾ ತಂಡವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ವಲಯದ ಮೇಲ್ವಿಚಾರಕರಾದ ಪ್ರಶಾಂತ್ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ಸದಾಶಿವೇಶ್ವರ ದೇವಸ್ಥಾನ ಸಮಿತಿಯ ಜಯಂತ್ ರಾವ್ ಕಲ್ಮಂಜ, ಸಿದ್ಧಬೈಲು ಪರಾರಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನೇಶ್ ಗೌಡ, ಕಲ್ಮಂಜ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶಾಂತಪ್ಪ ಗೌಡ, ಮುಂಡಾಜೆ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ನಾಗರಾಜ್ ನಾಯ್ಕ್ ಒಂಜರಾಬೈಲ್, ಕಲ್ಮಂಜ ಗ್ರಾಮ ಪಂಚಾಯತಿಯ ಸದಸ್ಯ ಪ್ರವೀಣ್ ಗೌಡ ಕರಿಯನೆಲ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾದ ಧನಂಜಯ ಎಂ, ಸಮಿತಿಯ ಕೋಶಾಧಿಕಾರಿಯಾದ ಅನಿಲ್ ಗೌಡ, ಸತ್ಯನ ಪಲ್ಕೆ ಜ್ಞಾನ ವಿಕಾಸ ತಂಡದ ಮಾಜಿ ಅಧ್ಯಕ್ಷೆ ಶ್ರೀಮತಿ ಜಾನಕಿ ಗೌಡ, ಜ್ಞಾನ ವಿಕಾಸ ತಂಡದ ಸದಸ್ಯರಾದ ಶ್ರೀಮತಿ ರೇವತಿ ಮಾನಿಂಜೆ, ಸಿದ್ಧಬೈಲು ಪರಾರಿ ಶಾಲೆಯ ಎಸ್ ಡಿ ಎಮ್ ಸಿ ಸದಸ್ಯರಾದ ಕೃಷ್ಣಪ್ಪ ಒಂಜರಾಬೈಲ್ ಹಾಗೂ ಊರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಂತಪ್ಪ ಗೌಡ ಬನಾದಬೈಲ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು., ಶಾಂತಪ್ಪ ಎಂ. ಮದ್ಮಲ್ ಕಟ್ಟೆ ಧನ್ಯವಾದವಿತ್ತರು.

Related posts

ಗುರುವಾಯನಕೆರೆ ಭೂಷಣ್ ಬಾರ್ ಮಾಲಕ ಭಾಸ್ಕರ್ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಎಕ್ಸೆಲ್ ನಲ್ಲಿ ಪ್ರತಿಭಾವಂತರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ದ.ಕ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸ್ವಚ್ಚತಾ ಆಂದೋಲನ

Suddi Udaya

ಶೃಂಗಾರ್ ಜ್ಯುವೆಲ್ಲರ್ಸ್ ಗೆ 25 ರ ಸಂಭ್ರಮ-ಆಕರ್ಷಕ ಆಫರ್: ಇನ್ನೂ ಕೇವಲ 2 ದಿನ ಮಾತ್ರ:

Suddi Udaya

ಬೆಳ್ತಂಗಡಿಯ ಜನಸ್ನೇಹಿ ಇನ್ಸ್ಪೆಕ್ಟರ್ ಸುಬ್ಬಪುರ ಮಠ ವರ್ಗಾವಣೆ

Suddi Udaya

ಜೈನರಿಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಿರಿಯೂರಿನ ಶಾಸಕ ಡಿ. ಸುಧಾಕರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಿ: ನಿರಂಜನ್ ಜೈನ್ ಕುದ್ಯಾಡಿ‌

Suddi Udaya
error: Content is protected !!