34.3 C
ಪುತ್ತೂರು, ಬೆಳ್ತಂಗಡಿ
March 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹಾಡುಹಗಲೇ ಚರ್ಚ್ ರೋಡ್ ಬಳಿ ನಿಲ್ಲಿಸಿದ್ದ ಬೈಕ್ ನಾಪತ್ತೆ

ಬೆಳ್ತಂಗಡಿ : ರಿಪೇರಿಗಾಗಿ ತಂದು ನಿಲ್ಲಿಸಿ ಬೈಕ್ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿಯ ಚರ್ಚ್ ರೋಡ್ ನಲ್ಲಿ ಇಂದು ಸಂಜೆ ನಡೆದಿದೆ‌.

ಮುಂಡೂರು ಗ್ರಾಮದ ಪರಂಬುಡೆ ನಿವಾಸಿ ಕೆ.ಜಗನ್ನಾಥ್ ಅಚಾರ್ಯ ಎಂಬವರಿಗೆ ಸೇರಿದ KA-21-E-7225 ನಂಬರಿನ ಸ್ಲೇಂಡರ್ ಬೈಕ್ ಹಲವು ಸಮಯಗಳಿಂದ ಉಪಯೋಗಿಸದೆ ಮನೆಯಲ್ಲಿ ನಿಲ್ಲಿಸಿದ್ದಲ್ಲಿಯೇ ಇತ್ತು. ಬೈಕ್ ಉಪಯೋಗಿಸದೆ ಇತ್ತಿಚೆಗೆ ಸರಿಯಾಗಿ ಚಲಾಯಿಸಲು ಅಗುತ್ತಿರಲ್ಲಿಲ್ಲ‌. ಬೈಕ್ ಸಂಪೂರ್ಣ ರಿಪೇರಿ ಮಾಡಲು ತಮ್ಮ ರಮೇಶ್ ಅಚಾರ್ಯನಿಗೆ ತಿಳಿಸಿದಂತೆ ಡಿ.26 ರಂದು ಬೆಳಗ್ಗೆ ಮನೆಯಿಂದ ತಂದು ಚರ್ಚ್ ರೋಡ್ ಬಳಿ ಪಾರ್ಕ್ ಮಾಡಿ ರಮೇಶ್ ಅಚಾರ್ಯ ಚಿನ್ನದ ಕೆಲಸಕ್ಕಾಗಿ ಪುತ್ತೂರಿಗೆ ಹೋಗಿ ಸಂಜೆ ಬಂದು ನಿಲ್ಲಿಸಿದ ಸ್ಥಳದಲ್ಲಿ ನೋಡಿದಾಗ ಬೈಕ್ ನಾಪತ್ತೆಯಾಗಿತ್ತು.

ಈ ಬಗ್ಗೆ ರಮೇಶ್ ಅಚಾರ್ಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬೈಕ್ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

Related posts

ಉಪ ನಿರೀಕ್ಷಕರಾಗಿ ಭಡ್ತಿಗೊಂಡ ದೇವಪ್ಪ ಎಂ ಉಪ್ಪಿನಂಗಡಿ ಠಾಣಾ ಸಂಚಾರಿ ವಿಭಾಗದಲ್ಲಿ ಅಧಿಕಾರ ಸ್ವೀಕಾರ

Suddi Udaya

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಬಳಂಜ : ಬೋಂಟ್ರೊಟ್ಟುಗುತ್ತು ದೈವಸ್ಥಾನದಲ್ಲಿ ಮಹಾ ಚಂಡಿಕಾಯಾಗ: ವಿಧಾನಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಸಹಿತ ನೂರಾರು ಭಕ್ತರು ಭಾಗಿ

Suddi Udaya

ಸುಲ್ಕೇರಿಮೊಗ್ರು: ಭಾರಿ ಮಳೆಗೆ ಮನೆಯ ಕಂಪೌಂಡ್ ಕುಸಿತ

Suddi Udaya

ಗೇರುಕಟ್ಟೆ : ಪರಪ್ಪು ಮಸೀದಿಯಲ್ಲಿ ಎಸ್.ಎಸ್.ಎಫ್ ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆ

Suddi Udaya

ಅಗ್ರಿಲೀಫ್ ಗೆ ದಾಖಲೆಯ ರೂ. 20 ಕೋಟಿ ಹೂಡಿಕೆ : 2 ವರ್ಷಗಳಲ್ಲಿ ರೂ. 100 ಕೋಟಿ ವ್ಯವಹಾರದ ಗುರಿ: ಗ್ರಾಮೀಣ ಭಾಗದ ವಿದೇಶಿ ರಫ್ತು ಸಂಸ್ಥೆಯ ಅಪೂರ್ವ ಸಾಧನೆ

Suddi Udaya
error: Content is protected !!