April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಿ.29-31: ಸುಲ್ಕೇರಿಯಲ್ಲಿ ಭಗವಾನ್ 1008 ಶ್ರೀ ನೇಮಿನಾಥ ಸ್ವಾಮಿ ಬಸದಿಧಾಮ ಸಂಪ್ರೋಕ್ಷಣ ಮಹೋತ್ಸವ

ಸುಲ್ಕೇರಿ : ಭಗವಾನ್ 1008 ಶ್ರೀ ನೇಮಿನಾಥ ಸ್ವಾಮಿ ಬಸದಿಯ ಪುನಃ ಪ್ರತಿಷ್ಠಾ ಮಹೋತ್ಸವವು ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಜೈನ ಮಠ ದಾನಶಾಲಾ, ಕಾರ್ಕಳ ಇವರ ಅನುಗ್ರಹ, ಆಶೀರ್ವಾದ ಹಾಗೂ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ರಾಜರ್ಷಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ। ಪದ್ಮಪ್ರಸಾದ ಅಜಿಲರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ – ವಿಧಾನಗಳೊಂದಿಗೆ ಡಿ.29 ರಿಂದ 31 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಪ್ರತೀ ದಿನ ಸಂಜೆ ಗಂಟೆ 5.00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ವಿವಿಧ ಜೈನ ಮಠದ ಮಹಾಸ್ವಾಮಿಜಿಗಳಾದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾ ಚಾರ್ಯವರ್ಯ ಮಹಾಸ್ವಾಮಿ, ಜೈನ ಮಠ, ಕಾರ್ಕಳ, ಸಿಂಹನಗದ್ದೆ ಬಸ್ತಿಮಠದ ಸ್ವಸ್ತಿಶ್ರೀ ಮದಭಿನವ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಹೊಂಬುಜ ಜೈನ ಮಠದ ಶ್ರೀ ಮದಭಿನವ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪತ್ತಾಚಾರ್ಯವರ್ಯ ಮಹಾಸ್ವಾಮಿಗಳು, ಕಂಬದಹಳ್ಳಿ, ಮಂಡ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಹಾಗೂ ಮೂಡಬಿದ್ರಿ ಜೈನ ಮಠದ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ.

ವಿವಿಧ ಕ್ಷೇತ್ರದ ಗಣ್ಯರು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು, ಮೂಲ್ಕಿ ಸೀಮೆ ಅರಸರಾದ ಯಂ. ದುಗ್ಗಣ್ಣ ಸಾವಂತರು, ಶ್ರೀ ಕ್ಷೇತ್ರ ಪಡ್ದ್ಯಾರಬೆಟ್ಟ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ್ ಕುಮಾರ್ಪದ್ಯೋಡಿಗುತ್ತು, ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್, ಕೆ. ಪ್ರತಾಪಸಿಂಹ ಹಾಗೂ ಶಾಸಕ ಹರೀಶ್ ಪೂಂಜ, ಮಾಜಿ ಸಚಿವರು ಕೆ. ಅಭಯಚಂದ್ರ ಜೈನ್, ಅಳದಂಗಡಿ ಅರಮನೆ ಶಿವಪ್ರಸಾದ್ ಅಜಿಲರು, ‘ಸಹಕಾರ ರತ್ನ’ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಮುಂತಾದವರು ಉಪಸ್ಥಿತರಿರಲಿದ್ದಾರೆ.

ಪ್ರತೀ ದಿನದ ಸಂಗೀತ ಪೂಜಾಷ್ಟಕವನ್ನು ಜಿನಗಾನ ವಿಶಾರದೆ ಶ್ರೀಮತಿ ಜಯಶ್ರೀ ಧರಣೇಂದ್ರ ಜೈನ್ ಹೊರನಾಡು ಮತ್ತು ತಂಡದವರು ನಡೆಸಲಿದ್ದಾರೆ.
ಡಿ.29ರಂದು ಮಕ್ಕಿಮನೆ ಕಲಾವೃಂದ ಬಳಗ, ಮಂಗಳೂರು ಇವರಿಂದ ಜಿನಗೀತಾ – ನೃತ್ಯ ಸಿಂಚನ, ಎಸ್‌.ಡಿ.ಎಮ್. ಕಾಲೇಜು ಉಜಿರೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ,

ಡಿ.30ರಂದು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ, ಝಿ ಕನ್ನಡ, ಕಲರ್ಸ್ ಕನ್ನಡ ರಿಯಾಲಿಟಿ ಶೋಗಳನ್ನು ನೀಡಿರುವ ಜ್ಞಾನ ಐತಾಳ್ ನೇತೃತ್ವದ “ಹೆಜ್ಜೆನಾದ” ಮಂಗಳೂರು ತಂಡದವರಿಂದ ನೃತ್ಯ-ಸಂಗೀತ ವೈಭವ

ಡಿ.31ಮಧ್ಯಾಹ್ನ 2 :30ರಿಂದ ಮಹಿಳಾ ಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಶ್ರೀಮತಿ ಸೋನಿಯಾ ಯಶೋವರ್ಮ ವಹಿಸಲಿದ್ದಾರೆ, ಮಹಿಳೆ ಮತ್ತು ಜೈನ ಧರ್ಮ ಗೋಷ್ಠಿಯನ್ನು ನಿವೃತ್ತ ಉಪನ್ಯಾಸಕಿ ಶ್ರೀಮತಿ ಮಾಲತಿ ವಸಂತರಾಜ್, ಮಹಿಳೆ ಮತ್ತು ಕುಟುಂಬ ಗೋಷ್ಠಿಯನ್ನು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕಿ ಡಾ. ಮಲ್ಲಿಕಾ ಕುಮಾರಿ, ಮಹಿಳೆ ಮತ್ತು ಶಿಕ್ಷಣವನ್ನು ಎಸ್ ಡಿ ಎಂ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಶ್ರೀಮತಿ ದಿವ್ಯಾ ಕುಮಾರಿ ಮತ್ತು ಮಹಿಳೆ ಮತ್ತು ಕಾನೂನು ಗೋಷ್ಠಿಯನ್ನು ವಕೀಲೆ ಡಾ. ಅಕ್ಷತಾ ಆದರ್ಶ್ ರವರು ಉಪನ್ಯಾಸ ನೀಡಲಿದ್ದಾರೆ.
ಸಂಜೆ ಆರಾಧನಾ ನೃತ್ಯ ಕೇಂದ್ರ ಮೂಡಬಿದಿರೆ -ವಿದುಷಿ ಶ್ರೀಮತಿ ಸುಖದಾ ಬರ್ವೆ ಇವರ ಶಿಷ್ಯ ವೃಂದದವರಿಂದ ‘ನೃತ್ಯಾರ್ಚನೆ’ ಕಾರ್ಕಳ ಜೈನ್ ಮಿಲನ್ ಬಳಗದವರಿಂದ – ಸಾಂಸ್ಕೃತಿಕ ವೈಭವ ನಡೆಯಲಿದೆ.

ಆಗಮಿಸಿದ ಭಕ್ತಾಭಿಮಾನಿಗಳಿಗೆ ಬೆಳಿಗ್ಗೆ, ಸಂಜೆ ಉಪಹಾರ ಮತ್ತು ಮಧ್ಯಾಹ್ನದ ಭೋಜನ ವ್ಯವಸ್ಥೆ ಇರುತ್ತದೆ ಎಂದು ಸಂಘಟಕರು ತಿಳಿಸಿರುತ್ತಾರೆ.

Related posts

ಶಿಶಿಲ: ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಸಮರ್ಪಣೆ; ಚಂಡಿಕಾಹೋಮ

Suddi Udaya

ಮಡಂತ್ಯಾರು: ರಚನಾ ಸಿಲ್ಕ್ ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

Suddi Udaya

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಟರ್ಮ್ ಇನ್ಶೂರೆನ್ಸ್ ” ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಪಾದಾಯಾತ್ರಿಗಳಿಗೆ ಕಲ್ಮಂಜದ ಮದಿಮಾಲಕಟ್ಟೆಯ ಜಾನಕಿ ಮತ್ತು ಮಕ್ಕಳಿಂದ ಅನ್ನದಾನ ಸೇವೆ

Suddi Udaya

ಹಲವು ಸಮಯದ ಹಿಂದೆ ಮನೆ ತೊರೆದಿದ್ದ ಕಾಯರ್ತಡ್ಕ ಮಾಣಿಂಗೇರಿ ರಾಜು ಅವರ ಶವ ಪುದುವೆಟ್ಟು ಪದವು ಬಸ್ಸ್ಟ್ಯಾಂಡ್ ಬಳಿಯ ಕಾಡಿನಲ್ಲಿ ಪತ್ತೆ

Suddi Udaya

ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದ ಕೋರಿಜಾತ್ರೆ

Suddi Udaya
error: Content is protected !!