ನಾಲ್ಕೂರು: ನಿಟ್ಟಡ್ಕ, ಪುಣ್ಕೆದೊಟ್ಟು, ಪರಿಸರದಲ್ಲಿ ಹೆಚ್ಚಿದ ಚಿರತೆ ಕಾಟ, ಭಯಭೀತರಾದ ಗ್ರಾಮಸ್ಥರು

Suddi Udaya

ಬಳಂಜ: ನಾಲ್ಕೂರು ಗ್ರಾಮದ ಪುಣ್ಕೆದೊಟ್ಟು ಪರಿಸರದಲ್ಲಿ ದಿನದಿಂದ ದಿನಕ್ಕೆ ಚಿರತೆ ಕಾಟ ಜಾಸ್ತಿಯಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಕಳೆದ ಕೆಲವು ಸಮಯದ ಹಿಂದೆ ಬಳಂಜ, ನಿಟ್ಟಡ್ಕ, ಪುಣ್ಕೆದೊಟ್ಟು ಪರಿಸರದಲ್ಲಿ ಸಾಕು ಪ್ರಾಣಿಗಳಾದ ಗೋವು, ನಾಯಿ, ಬೆಕ್ಕು, ಕೋಳಿಗಳ ಮೇಲೆ ದಾಳಿಗಳಾಗಿದ್ದು‌ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಕೂಡಲೇ ಉಪವಲಯರಣ್ಯಾಧಿಕಾರಿ‌ ತಕ್ಷಣ ಸ್ಪಂದಿಸಿ ಚಿರತೆ ಪತ್ತೆಗಾಗಿ ಪುಣ್ಕೆದೊಟ್ಟು ಪರಿಸರದಲ್ಲಿ ಬೋನ್ ಅಳವಡಿಸಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಈ ಪರಿಸರದಲ್ಲಿ ಚಿರತೆ ದಾಳಿ ಹೆಚ್ಚಾಗುತ್ತಿದೆ. ಕಳೆದ ರಾತ್ರಿ ಮಜಲಡ್ಡ ರಂಜಿತ್ ಅವರ ಮನೆಯ ಅಂಗಳದಲ್ಲಿ ಮಲಗಿದ ಸಾಕು ನಾಯಿಗಳನ್ನು ಎತ್ತಿಕೊಂಡು ಹೋಗಿದೆ. ಪರಿಸರದಲ್ಕಿ ನಾಯಿ, ಬೆಕ್ಕು, ಕಣ್ಮರೆಯಾಗುತ್ತಿದೆ. ಇದರಿಂದ ಊರಲ್ಲಿ ಚಿರತೆಯ ಚಿಂತೆ ಹೆಚ್ಚಾಗಿ ಜನರು ರಾತ್ರಿ ಓಡಾಡಲು ಭಯಪಡುವ ಸಮಸ್ಯೆ ಸಂಭವಿಸಿದೆ.

ಇಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಕೆಲ ಸಮಯದ ಹಿಂದೆ ಅರಣ್ಯ ಇಲಾಖೆಯವರು ಚಿರತೆ ಸೆರೆಗೆ ಬೋನ್ ಅಳವಡಿಸಿದರು ಪ್ರಯೋಜನವಾಗಲಿಲ್ಲ. ಚಿರತೆ ಕಾಟ ತಪ್ಪಿಸಲು ಇಲಾಖೆಯವರು ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Comment

error: Content is protected !!