ಬೆಳ್ತಂಗಡಿ : ಓಡಿಲ್ನಾಳ ಶ್ರೀ ರಾಮನಗರ ಮೈರಲ್ಕೆ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಥಮ ವರ್ಷದ ವರ್ಷಾವಧಿ ಜಾತ್ರೆ ಮಹೋತ್ಸವದ ಪ್ರಯುಕ್ತ ಊರಿನ ಭಕ್ತಾದಿಗಳಿಂದ ಹಸಿರು ಹೊರೆ ಕಾಣಿಕೆ, ವಿಶೇಷ ಪೂಜೆ ನಡೆಯಿತು.
ಸನ್ನಿಧಿಯಲ್ಲಿ ಡಿ.28 ರಂದು ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ನಿಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಡಿ.28 ರಿಂದ ಜ.1ರ ತನಕ ಜರಗಲಿದ್ದು ಅ ಪ್ರಯುಕ್ತ ತೋರಣ ಮುಹೂರ್ತ, ಧ್ವಜಾರೋಹಣ, ಮಹಾಪೂಜೆ ಅನ್ನದಾನ ನೆರವೇರಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಆರ್ಚಕ ಪ್ರಸನ್ನ ಭಟ್, ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು, ಯುವ ಸಮಿತಿ ಅಧ್ಯಕ್ಷ ನಿತೇಶ್ ಕುಮಾರ್, ಕಾರ್ಯದರ್ಶಿ ಸುದೀಪ್ ಶೆಟ್ಟಿ, ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ವಿಮಲಾಕ್ಷ ಗೌಡ ಪಡ್ಪು, ಭಜನ ಮಂಡಳಿ ಅಧ್ಯಕ್ಷ ಯೋಗೀಶ್ ಅಡ್ಡ ಕೊಡಂಗೆ, ದೇವಸ್ಥಾನದ ಟ್ರಸ್ಟಿನ ಸದಸ್ಯರಾದ ಮೋಹನ್ ಭಟ್, ಮೈರಾರು, ವಾಮನ ಮೂಲ್ಯ ಮಡಂತಿಲ, ದೇವಿ ಪ್ರಸಾದ್ ಮುಲ್ಲೋಟ್ಟು, ಮಿನಾಕ್ಷಿ ಮೈರಲ್ಕೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಡಿ.28 ರಂದು ಶ್ರೀ ಕ್ಷೇತ್ರದಲ್ಲಿ ರಾತ್ರಿ 7ಕ್ಕೆ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿ ವತಿಯಿಂದ ಪರಕೆದ ಪಲ್ಲೆಂಕಿ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.