April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಮುಂಡಾಜೆ : ಅರೆಕ್ಕಲ್ ನಿವಾಸಿ ಹಿರಿಯ ಕೃಷಿಕ ಇಸ್ಮಾಯಿಲ್ ಹಾಜಿ ಮೂಲೆ ನಿಧನ

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಅರೆಕ್ಕಲ್ ನಿವಾಸಿ, ಹಿರಿಯ ಕೃಷಿಕ ಹಾಗೂ ಅಡಿಕೆ ವ್ಯಾಪಾರಿ ಇಸ್ಮಾಯಿಲ್ ಹಾಜಿ ಮೂಲೆ (ಮೂಲೆ ಮೋನು ಹಾಜಿ) ಅವರು ಅಲ್ಪ ಕಾಲದ ಅಸೌಖ್ಯದಿಂದ ಡಿ.30 ರಂದು ನಿಧನರಾಗಿದ್ದಾರೆ‌.


ಮೂಲತಃ ಮಂಗಳೂರು ತಾಲೂಕು ಕೊಣಾಜೆ ಸನಿಹದ ನಡುಪದವು ಮೂಲೆ ನಿವಾಸಿಯಾಗಿರುವ ಅವರು ಅಲ್ಲಿನ ಅಲ್ ಉಮರ್ ಜುಮ್ಮಾ ಮಸೀದಿ ನಡುಪದವು ಕೈರಂಗಳ ಜಮಾಅತಿನ ಮಾಜಿ ಅಧ್ಯಕ್ಷರೂ ಹಿರಿಯ ಸಾಮಾಜಿಕ ಮುಂದಾಳುವೂ ಆಗಿದ್ದರು. ಊರಿನಲ್ಲಿ ಅವರು ಮೂಲೆ ಮೋನು ಹಾಜಿ ಎಂದೇ ಅರಿಯಲ್ಪಡುತ್ತಿದ್ದರು. ನಡುಪದವು ಸರಕಾರಿ ಶಾಲೆಗೆ ಜಾಗ ಮಂಜೂರಾತಿ ಹಾಗೂ ಕಟ್ಟಡ ರಚನೆಗಾಗಿ ಹೋರಾಟ ಮಾಡಿ‌ ಯಶಸ್ವಿ ಯಾಗಿದ್ದರು. ಅವರ‌ ನಿಧನ‌ದ ಗೌರವಾರ್ಥ ಶಾಲೆಗೆ ರಜೆ ಸಾರಿ ಶೋಕ ಆಚರಿಸಲಾಯಿತು.

ಮೃತರು ಪತ್ನಿ ಐಸಮ್ಮ, ಮಕ್ಕಳಾದ ಹಮೀದ್,‌ ಮುಹಮ್ಮದ್, ಕಾಸಿಂ ಮತ್ತು ಏಕೈಕ ಪುತ್ರಿ ಪುತ್ತುಮ್ಮ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು.ಟಿ ಖಾದರ್ ಸಹಿತ ಅನೇಕ ಗಣ್ಯರು ಭೇಟಿ ಮಾಡಿ ಅಂತಿಮ ದರ್ಶನ ಪಡೆದು ಮನೆಯವರಗೆ ಸಾಂತ್ವಾನ ಹೇಳಿದರು.

Related posts

ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷದ ಉಸ್ತುವಾರಿಯಾಗಿ ರಕ್ಷಿತ್ ಶಿವರಾಂ ನೇಮಕ

Suddi Udaya

ಭಾರತೀಯ ಮಾಜ್ದೂರು ಸಂಘದ ಜಿಲ್ಲಾ ಕಾರ್ಯಕಾರಿಣಿ ಸಭೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಶವ ಪತ್ತೆ: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಕಡಿರುದ್ಯಾವರ: ಕಾನರ್ಪ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಕಾರ್ಯಕ್ರಮ

Suddi Udaya

ಕರ್ನಾಟಕ ಔಷಧಿ ವ್ಯಾಪಾರಿಗಳ ಸಂಘದಿಂದ ಉಜಿರೆಯ ಶ್ರೀಧರ‌ ಕೆ.ವಿ ರವರಿಗೆ ಸನ್ಮಾನ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸುರಕ್ಷಾ ಚೆಕ್ ವಿತರಣೆ

Suddi Udaya
error: Content is protected !!