ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಜಾಗೃತಿ ಸಪ್ತಾಹ

Suddi Udaya

ಉಜಿರೆ : ಭಾರತದಂತಹ ದೇಶಗಳ ಹಣಕಾಸಿನ ಬಹುಪಾಲು ಪೆಟ್ರೋಲ್ , ಡೀಸೆಲ್ ಇತ್ಯಾದಿ ಮುಗಿದುಹೋಗುವ ಇಂಧನಗಳಿಗೆ ವ್ಯಯವಾಗುತ್ತಿದೆ. ಹಾಗೆಯೇ ವಾತಾವರಣದ ಮೇಲೆಯೂ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಹಾಗೂ ಪ್ರಕೃತಿಗೆ ಪೂರಕವಾಗುವ ಪಳೆಯುಳಿಕೆ ಇಂಧನಗಳಂತಹ ಇಂಧನ ಹಾಗೆಯೇ ನವೀಕೃತ ಇಂಧನಗಳಾದ ಸೋಲಾರ್ , ಪವನಶಕ್ತಿ ವಿದ್ಯುತ್ , ಬಯೋಗ್ಯಾಸ್ ಇತ್ಯಾದಿಗಳಿಂದ ಮಾತ್ರ ಸಾಧ್ಯ. ಆದ್ದರಿಂದ ಇನ್ನು ಕೆಲವೇ ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಶಕ್ತಿಗಳ ಬಳಕೆ ಅನಿವಾರ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ವಿದ್ಯಾಲಯದ ಎಲೆಕ್ಟ್ರಿಕ್ ವಿಭಾಗದ ಪ್ರಾಧ್ಯಾಪಕ ಡಾ.ಸತ್ಯನಾರಾಯಣ ಭಟ್ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಜಾಗೃತಿ ಸಪ್ತಾಹದ ಅಂಗವಾಗಿ ನಡೆದ ನವೀಕೃತ ಇಂಧನ – ದೇಶದ ಉನ್ನತಿಯ ಸಾಧನ ಎಂಬ ನವೀಕೃತ ಇಂಧನ ಜಾಗೃತಿ ಕುರಿತು ಮಾತನಾಡಿದರು.

ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಮಾತನಾಡಿ ನಾವು ಮಾಡುವ ಪ್ರತಿದಿನದ ಚಟುವಟಿಕೆಗಳಲ್ಲಿ ಜಾಗ್ರತೆಯಾಗಿ ವ್ಯವಹರಿಸಿದರೆ ಅದೇ ನಾವೆಲ್ಲ ಮಾಡಿಕೊಳ್ಳುವ ಜಾಗೃತಿ ಹಾಗೂ ಪ್ರಕೃತಿಯೊಂದಿಗೆ ಬೆರೆತು ಅದಕ್ಕೆ ಹಾನಿಯಾಗದಂತೆ ಇರಬೇಕು ಎಂದು ಹೇಳಿದರು.

ರಾ.ಸೇ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ , ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ , ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಉಪಸ್ಥಿತರಿದ್ದರು.

ಸೃಷ್ಠಿ ಎಸ್ ಎಲ್ ಸ್ವಾಗತಿಸಿ , ಸುಮಿತ್ ವಂದಿಸಿದರು. ಮಹಾಲಕ್ಷ್ಮೀ ನಿರೂಪಿಸಿದರು.

Leave a Comment

error: Content is protected !!